ಬೆಳಗಾವಿ : ಸಂಕೇಶ್ವರ- ಜೇವರ್ಗಿ ರಾಜ್ಯ ಹೆದ್ದಾರಿ ಬಳಿ ಕಾರಿನಲ್ಲಿ ಸುಟ್ಟು ಭಸ್ಮವಾದ ಉದ್ಯಮಿ

Published : Oct 03, 2024, 11:16 AM IST
Fire

ಸಾರಾಂಶ

ಚಿಕ್ಕೋಡಿ ತಾಲೂಕಿನ ಜೈನಾಪುರ ಗ್ರಾಮದ ಹೊರವಲಯದ ಸಂಕೇಶ್ವರ- ಜೇವರ್ಗಿ ರಾಜ್ಯ ಹೆದ್ದಾರಿ ಬಳಿ ಖ್ಯಾತ ಉದ್ಯಮಿಯೊಬ್ಬರ ಶವ ಕಾರಿನಲ್ಲಿ ಪತ್ತೆಯಾಗಿದೆ.

ಬೆಳಗಾವಿ : ಚಿಕ್ಕೋಡಿ ತಾಲೂಕಿನ ಜೈನಾಪುರ ಗ್ರಾಮದ ಹೊರವಲಯದ ಸಂಕೇಶ್ವರ- ಜೇವರ್ಗಿ ರಾಜ್ಯ ಹೆದ್ದಾರಿ ಬಳಿ ಖ್ಯಾತ ಉದ್ಯಮಿಯೊಬ್ಬರ ಶವ ಕಾರಿನಲ್ಲಿ ಪತ್ತೆಯಾಗಿದೆ.

ಚಿಕ್ಕೋಡಿಯ ಖ್ಯಾತ ಗ್ರಾನೈಟ್ ಉದ್ಯಮಿ ಮುಲ್ಲಾ ಪ್ಲಾಟ್ ನಿವಾಸಿ ಫೈರೋಜ್ ಬಡಗಾವಿ (40) ಎಂಬುವರು ಮೃತಪಟ್ಟವರು. ಅವರ ದೇಹವು ಬುಧವಾರ ಸಂಪೂರ್ಣವಾಗಿರುವ ಸುಟ್ಟು ಭಸ್ಮವಾದ ಸ್ಥಿತಿಯಲ್ಲಿ ಕಾರಿನಲ್ಲಿ ಪತ್ತೆಯಾಗಿದೆ. ಕಾರು ಸಂಪೂರ್ಣ ಬೆಂಕಿಗಾಹುತಿಯಾಗಿದ್ದು ಚಾಲಕನ ಸೀಟಿನಲ್ಲಿ ಇದ್ದ ಫೈರೋಜ್ ಬೆಂದು ಹೋಗಿದ್ದಾರೆ. ಮಂಗಳವಾರ ತಡರಾತ್ರಿ ಈ ಘಟನೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ರಾಜ್ಯ ಹೆದ್ದಾರಿಯಲ್ಲಿ ಕಾರಿಗೆ ಬೆಂಕಿ ಹೊತ್ತಿರುವ ಯಾರೊಬ್ಬರ ಗಮನಕ್ಕೂ ಬಂದಿರಲಿಲ್ಲವೇ ಎಂಬ ಅನುಮಾನ ಕೂಡ ಈಗ ವ್ಯಕ್ತವಾಗಿದ್ದು, ಸಾವಿನ ಕುರಿತು ಹಲವು ವದಂತಿಗಳಿಗೆ ಕಾರಣವಾಗಿದೆ‌. ಬುಧವಾರ ಮಧ್ಯಾಹ್ನ ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಕ್ಕೋಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದು ಬೆಂಕಿಗೆ ಆಹುತಿಯಾದಂತೆ ಕಾಣುತ್ತಿದ್ದರೂ ಆತನ ಕುಟುಂಬದವರು ನೀಡಿರುವ ದೂರು ಆಧರಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

PREV

Recommended Stories

ಜಮೀನು ಅಕ್ರಮ ಪರಭಾರೆ: ಇಬ್ಬರ ಬಂಧನ
ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!