ಜಮೀನಿಗೆ ಹೋಗುತ್ತಿದ್ದ ರೈತನ ಮೇಲೆ ಹಲ್ಲೆ

KannadaprabhaNewsNetwork |  
Published : Nov 05, 2023, 01:16 AM IST
4ಶಿರಾ2: ಹಲ್ಲೆಗೊಳಗಾದ ರೈತ ನಗರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು. | Kannada Prabha

ಸಾರಾಂಶ

ಜಮೀನಿಗೆ ನೀರು ಹಾಯಿಸಲು ಹೋಗುತ್ತಿದ್ದ ಸಂದರ್ಭದಲ್ಲಿ ಕಿಡಿಗೇಡಿಗಳು ರೈತನ ಬೈಕ್‌ ಕಿತ್ತುಕೊಳ್ಳಲು ಪ್ರಯತ್ನಿಸಿ ಹಲ್ಲೆ ನಡೆಸಿದ ಘಟನೆ ನಗರದ ಹೊರವಲಯದ ಗುಮ್ಮನಹಳ್ಳಿ ಕರಿಯಮ್ಮ ದೇವಿ ದೇವಸ್ಥಾನದ ಬಳಿ ನಡೆದಿದೆ.

ಕನ್ನಡಪ್ರಭ ವಾರ್ತೆ ಶಿರಾ

ಜಮೀನಿಗೆ ನೀರು ಹಾಯಿಸಲು ಹೋಗುತ್ತಿದ್ದ ಸಂದರ್ಭದಲ್ಲಿ ಕಿಡಿಗೇಡಿಗಳು ರೈತನ ಬೈಕ್‌ ಕಿತ್ತುಕೊಳ್ಳಲು ಪ್ರಯತ್ನಿಸಿ ಹಲ್ಲೆ ನಡೆಸಿದ ಘಟನೆ ನಗರದ ಹೊರವಲಯದ ಗುಮ್ಮನಹಳ್ಳಿ ಕರಿಯಮ್ಮ ದೇವಿ ದೇವಸ್ಥಾನದ ಬಳಿ ನಡೆದಿದೆ.

ನಗರದ ಸಂತೇಪೇಟೆ ನಿವಾಸಿ ಮೂಡ್ಲಪ್ಪ ಜಮೀನಿಗೆ ದಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಆರು ಮಂದಿ ಕಿಡಿಗೇಡಿಗಳು ಏಕಾಏಕಿ ದಾಳಿ ನಡೆಸಿ, ದ್ವಿಚಕ್ರ ವಾಹನವನ್ನು ಕೊಡುವಂತೆ ಕೇಳಿದ್ದಾರೆ. ದ್ವಿಚಕ್ರ ವಾಹನ ಕೊಡಲು ನಿರಾಕರಿಸಿದ ರೈತನ ಮೇಲೆ ಕಿಡಿಗೇಡಿಗಳು ದಾಳಿ ಮಾಡಿದ್ದು, ರೈತ ಮೂಡ್ಲಪ್ಪ ಅವರು ಮೊಬೈಲ್ನಲ್ಲಿ ಕರೆ ಮಾಡಿ ತಮ್ಮ ಮನೆಯವರಿಗೆ ಕರೆ ಮಾಡುವಲ್ಲಿ ನಾಟಕ ಮಾಡಿದಾಗ ಕಿಡಿಗೇಡಿಗಳು ಬೈಕ್‌ ಕದ್ದು ಪರಾರಿಯಾಗಿದ್ದಾರೆ. ಕಿಡಿಗೇಡಿಗಳು ನಡೆಸಿದ ಹಲ್ಲೆಗೆ ರೈತ ಮುಡ್ಲಪ್ಪ ಗಾಯಗೊಂಡಿದ್ದು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ನಗರ ಪೊಲೀಸರಿಗೆ ದೂರು ನೀಡಿದ್ದಾರೆ.

ಹದಗೆಟ್ಟ ಕಾನೂನು ಸುವ್ಯವಸ್ಥೆ: ಪೊಲೀಸ್ ಸಿಬ್ಬಂದಿಯವರ ಮನೆಯಲ್ಲೇ ಕಳ್ಳತನಕ್ಕೆ ಪ್ರಯತ್ನಿಸಿ ಸಿಕ್ಕಿಬಿದ್ದಿರುವ ಘಟನೆ ಮಾಸುವ ಮುನ್ನವೇ ಘಟನೆ ಸಂಭವಿಸುತ್ತಿದ್ದು, ನಗರ ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದ್ದಾರೆ ಎಂದು ಮಾಜಿ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಸಂತೇಪೇಟೆ ನಟರಾಜು ಹಾಗೂ ಮುಖಂಡ ವಿಜಯರಾಜ್ ಆರೋಪಿಸಿದ್ದಾರೆ. ಪೊಲೀಸರು ಪಹರೆ ವ್ಯವಸ್ಥೆ ಮಾಡುತ್ತಿಲ್ಲ. ಕಿಡಿಗೇಡಿಗಳ ವಿರುದ್ಧ ಕೂಡಲೇ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಫೋಟೊ.......4ಶಿರಾ2, 3: ಹಲ್ಲೆಗೊಳಗಾದ ರೈತ ನಗರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು.

PREV

Recommended Stories

ಜಮೀನು ಅಕ್ರಮ ಪರಭಾರೆ: ಇಬ್ಬರ ಬಂಧನ
ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!