ಕನ್ನಡಪ್ರಭ ವಾರ್ತೆ ಮದ್ದೂರು
ಆಟೋದಲ್ಲಿ ಪ್ರಯಾಣಿಸುತ್ತಿದ್ದ ತುಮಕೂರು ಜಿಲ್ಲೆ ಕುಣಿಗಲ್ ಟೌನ್ ನ ಜಾವಿದ್, ಪರ್ಹಾನ್ ಹಾಗೂ ನಾಗರಾಜು ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಳುಗಳೆಲ್ಲರನ್ನು ಮದ್ದೂರ್ ಆಸ್ಪತ್ರೆ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಜಾವೀದ್ ತನ್ನ ಆಟೋ ಚನ್ನಪಟ್ಟಣದಲ್ಲಿ ಕೆಟ್ಟು ಹೋಗಿದ್ದ ಕಾರಣ ಕುಣಿಗಲ್‌ನಿಂದ ಫರ್ಹಾನ್ ನನ್ನು ಕರದೊಯ್ದು ರಿಪೇರಿ ಮಾಡಿಸಿದ ನಂತರ ಮತ್ತೆ ಕುಣಿಗಲ್‌ಗೆ ಹೋಗುವ ಸಲುವಾಗಿ ತನ್ನ ಸ್ನೇಹಿತ ನಾಗರಾಜನನ್ನು ಗೌಡಗೆರೆ ಗ್ರಾಮದಲ್ಲಿ ಕೂರಿಸಿಕೊಂಡು ಬರುತ್ತಿರುವಾಗ ಚಾಕನಕೆರೆ ಗ್ರಾಮದ ಕೋತಿ ಕ್ರಾಸ್‌ನಲ್ಲಿ ಎದುರಿಂದ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಆಟೋ ಉರುಳಿ ಬಿದ್ದು ಅಪಘಾತ ಸಂಭವಿಸಿದೆ. ಈ ಸಂಬಂಧ ಕೆಸ್ತೂರು ಠಾಣೆ ಪೊಲೀಸರು ಪ್ರಕರಣ ದಾಖಲ ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.ಪರಿಹಾರ ವಿಳಂಬ: ರೈಲ್ವೆ ಇಲಾಖೆ ಪೀಠೋಪಕರಣಗಳ ಜಪ್ತಿಕನ್ನಡಪ್ರಭ ವಾರ್ತೆ ಮಂಡ್ಯ
ಶ್ರೀರಂಗಪಟ್ಟಣದ ಕಪ್ಪರನಕೊಪ್ಪಲು ಗ್ರಾಮದ ರೈತ ಬಾಲಕೃಷ್ಣ ಅವರಿಗೆ ಸೇರಿದ 4 ಗುಂಟೆ ಜಮೀನನ್ನ 2013ರಲ್ಲಿ ಕೇಂದ್ರ ರೈಲ್ವೆ ಇಲಾಖೆ ಸ್ವಾಧೀನಪಡಿಸಿಕೊಂಡಿತ್ತು. ನಂತರ ಇದಕ್ಕೆ ಪರಿಹಾರ ನೀಡುವುದಾಗಿ ಇಲಾಖೆ ಅಧಿಕಾರಿಗಳು ಭರವಸೆ ನೀಡಿದ್ದರು. ಹಲವು ವರ್ಷಗಳು ಕಳೆದರೂ ರೈತನಿಗೆ ಪರಿಹಾರದ ಹಣ ನೀಡದೆ ಅಧಿಕಾರಿಗಳು ಅಲೆದಾಡಿಸುತ್ತಿದ್ದರು. ಆದರೆ, ಛಲ ಬಿಡದ ರೈತ ನ್ಯಾಯಾಲಯದ ಮೊರೆ ಹೋಗಿದ್ದರು.
ಕಳೆದ ಎರಡು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಇದು ಹತ್ತನೇ ಸರ್ಕಾರಿ ಕಚೇರಿ ಜಪ್ತಿಗೆ ಆದೇಶ ಎನ್ನಲಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ಆಡಳಿತದ ಮೇಲೆ ಗಂಭೀರ ಪ್ರಶ್ನೆಗಳು ಉದ್ಭವವಾಗಿವೆ. ಅಲ್ಲದೆ ಈ ವಿಳಂಬ ಧೋರಣೆಗೆ ಬೇಸತ್ತ ನ್ಯಾಯಾಧೀಶರು ಜಪ್ತಿ ಆದೇಶ ನೀಡಿ ಅಧಿಕಾರಿಗಳಿಗೆ ಚಾಟಿ ಏಟು ನೀಡಿದ್ದಾರೆ. ಸದ್ಯ ಸರ್ಕಾರಿ ಇಲಾಖೆಗಳಲ್ಲಿ ಜವಾಬ್ದಾರಿತನ ಮತ್ತು ಸಮಯಪಾಲನೆ ಅತ್ಯವಶ್ಯಕವಾಗಿದ್ದು, ಇಲ್ಲವಾದಲ್ಲಿ ಇಂತಹ ಕಾನೂನು ಕ್ರಮಗಳು ಮುಂದುವರಿಯುವ ಸಾಧ್ಯತೆ ಇದೆ.