ಚಂಡೀಗಢ: ಕೃಷಿ ಭೂಮಿಯಲ್ಲಿ ತ್ಯಾಜ್ಯಕ್ಕೆ ಬೆಂಕಿ ಇಡುವುದನ್ನು ತಡೆಯಲು ನೇಮಿಸಿದ್ದ ಅಧಿಕಾರಿಯಿಂದಲೇ ಬಲವಂತವಾಗಿ ರೈತರು ಬೆಂಕಿ ಕೊಡಿಸಿದ ಘಟನೆ ಪಂಜಾಬ್‌ನ ಬಠಿಂಡಾದಲ್ಲಿ ನಡೆದಿದೆ.
ವಾಯು ಮಾಲಿನ್ಯ ತಡೆಗೆ ಪಂಜಾಬ್ ಹಾಗೂ ಹರ್ಯಾಣದಲ್ಲಿ ಕೃಷಿ ತ್ಯಾಜ್ಯಕ್ಕೆ ಬೆಂಕಿ ಇಡುವುದನ್ನು ನಿಷೇಧಿಸಿದೆ. ಹೀಗಾಗಿ ಇದನ್ನು ನೋಡಿಕೊಳ್ಳಲು ಅಧಿಕಾರಿಗಳನ್ನು ನೇಮಿಸಿದೆ. ಆದರೆ ಇಲ್ಲಿನ ರೈತರು ಇದನ್ನು ತಡೆಯಲು ಬಂದ ಅಧಿಕಾರಿಗಳಿಂದಲೇ ಬಲವಂತವಾಗಿ ಗದ್ದೆಗೆ ಬೆಂಕಿ ಹೊತ್ತಿಸಿದ್ದಾರೆ.ಘಟನೆ ಸಂಬಂಧ ಜಿಲ್ಲಾಧಿಕಾರಿ ಎಸ್‌ಪಿ ಅವರಿಗೆ ಪತ್ರ ಬರೆದು ರೈತರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿದ್ದಾರೆ.ಮುಖ್ಯಮಂತ್ರಿ ಭಗವಂತ್ ಮಾನ್‌ಸಿಂಗ್ ಆಕ್ರೋಶ ಹೊರಹಾಕಿದ್ದು ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.