ಓಮಿನಿ ಹಿಂಬದಿ ಬಾಗಿಲು ತೆರೆದು ಕೆಳಗೆ ಬಿದ್ದ ನಾಲ್ಕು ವಿದ್ಯಾರ್ಥಿಗಳು

KannadaprabhaNewsNetwork |  
Published : Jun 27, 2026, 03:30 AM IST
Omni

ಸಾರಾಂಶ

ಖಾಸಗಿ ಶಾಲೆಗಳ ಮಕ್ಕಳನ್ನು ಕರೆದೊಯ್ಯುವಾಗ ಆಕಸ್ಮಿಕವಾಗಿ ಕಾರಿನ ಬಾಗಿಲು ತೆರೆದುಕೊಂಡ ಪರಿಣಾಮ ನಾಲ್ವರು ಮಕ್ಕಳು ಕೆಳಗೆ ಬಿದ್ದು ಗಾಯಗೊಂಡಿರುವ ಘಟನೆ ನಗರದ ಹೊರ ವಲಯದಲ್ಲಿ ನಡೆದಿದೆ.

 ಬೆಂಗಳೂರು :  ಖಾಸಗಿ ಶಾಲೆಗಳ ಮಕ್ಕಳನ್ನು ಕರೆದೊಯ್ಯುವಾಗ ಆಕಸ್ಮಿಕವಾಗಿ ಕಾರಿನ ಬಾಗಿಲು ತೆರೆದುಕೊಂಡ ಪರಿಣಾಮ ನಾಲ್ವರು ಮಕ್ಕಳು ಕೆಳಗೆ ಬಿದ್ದು ಗಾಯಗೊಂಡಿರುವ ಘಟನೆ ನಗರದ ಹೊರವಲಯದಲ್ಲಿ ನಡೆದಿದೆ.

ಕೆ.ಆರ್‌.ಪುರ ಸಮೀಪದ ಗಾಯಿತ್ರಿ ಲೇಔಟ್‌ನಲ್ಲಿ ಅಪಘಾತ

ಕೆ.ಆರ್‌.ಪುರ ಸಮೀಪದ ಗಾಯಿತ್ರಿ ಲೇಔಟ್‌ನಲ್ಲಿ ಗುರುವಾರ ಸಂಜೆ ಈ ಅಪಘಾತ ಸಂಭವಿಸಿದ್ದು, ಚಾಲಕ ಸರ್ವೇಶ್ ರಾವ್ ವಿರುದ್ಧ ಅಜಾಗರೂಕತೆ ಆರೋಪದ ಮೇರೆಗೆ ಕೆ.ಆರ್‌.ಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತಕ್ಕೀಡಾದ ಓಮಿನಿ ಕಾರನ್ನು ಪೊಲೀಸರು ಜಪ್ತಿ ಸಹ ಮಾಡಿದ್ದಾರೆ. ಗಾಯಿತ್ರಿ ಲೇಔಟ್‌ ಸುತ್ತಮುತ್ತಲಿನ 4 ಶಾಲೆಗಳ ಸುಮಾರು 9 ವಿದ್ಯಾರ್ಥಿಗಳನ್ನು ಪಿಕ್ ಅಂಡ್ ಡ್ರಾಪ್‌ಗೆ ಸರ್ವೇಶ್ ಮಾಡುತ್ತಿದ್ದ.  

ಮಾರ್ಗ ಮಧ್ಯೆ ಕಾರಿನ ಹಿಂಬದಿ ಬಾಗಿಲು ದಿಢೀರನೇ ತೆರೆದುಕೊಂಡಿದೆ

ಗುರುವಾರ ಸಂಜೆ ಶಾಲೆ ಮುಗಿದ ಬಳಿಕ ಮಕ್ಕಳನ್ನು ಮನೆಗೆ ಆತ ಕರೆದೊಯ್ಯುತ್ತಿದ್ದ. ಆಗ ಮಾರ್ಗ ಮಧ್ಯೆ ಕಾರಿನ ಹಿಂಬದಿ ಬಾಗಿಲು ದಿಢೀರನೇ ತೆರೆದುಕೊಂಡಿದೆ. ಇದರಿಂದ ನಾಲ್ವರು ವಿದ್ಯಾರ್ಥಿಗಳು ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಮಕ್ಕಳಿಗೆ ಸಣ್ಣಪುಟ್ಟ ಗಾಯವಾಗಿದೆ. ವಿಚಾರಣೆ ವೇಳೆ ಆಕಸ್ಮಿಕವಾಗಿ ಬಾಗಿಲು ತೆರೆದುಕೊಂಡಿದೆ ಎಂದು ಚಾಲಕ ಹೇಳಿಕೆ ಕೊಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಕಾಮಗಾರಿಗಾಗಿ ತೆಗೆದಿದ್ದ ಗುಂಡಿಗೆ ಬಿದ್ದು ಗಾಯಗೊಂಡ ಬೈಕ್ ಸವಾರ
ಮಹಿಳೆ ಮೇಲೆ ದೌರ್ಜನ್ಯ: ಅಪರಾಧಿಗಳಿಗೆ ದಂಡ