ಪಾಂಡವಪುರ ಪುರಸಭೆ ವ್ಯಾಪ್ತಿ ಅಮೃತ್ ಯೋಜನೆ, ಮನೆ ಮನೆಗೆ ಕುಡಿಯುವ ನೀರಿನ ಕಾಮಗಾರಿಗೆ ತೆಗೆದಿರುವ ರಸ್ತೆ ಗುಂಡಿಗೆ ಬೈಕ್ ಸವಾರ ಆಯಾತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಟ್ಟಣದಲ್ಲಿ ಇತ್ತೀಚೆಗೆ ನಡೆದಿದೆ. ಪಟ್ಟಣದ ಹಿರೋಡೆ ಬೀದಿಯ ಪರಿಶಿಷ್ಟ ಜಾತಿ ಕಾಲೋನಿ ನಿವಾಸಿ ತುಕರಾಂ ಗಾಯಗೊಂಡವರು.

ಪಾಂಡವಪುರ:

ಪುರಸಭೆ ವ್ಯಾಪ್ತಿ ಅಮೃತ್ ಯೋಜನೆ, ಮನೆ ಮನೆಗೆ ಕುಡಿಯುವ ನೀರಿನ ಕಾಮಗಾರಿಗೆ ತೆಗೆದಿರುವ ರಸ್ತೆ ಗುಂಡಿಗೆ ಬೈಕ್ ಸವಾರ ಆಯಾತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಟ್ಟಣದಲ್ಲಿ ಇತ್ತೀಚೆಗೆ ನಡೆದಿದೆ.ಪಟ್ಟಣದ ಹಿರೋಡೆ ಬೀದಿಯ ಪರಿಶಿಷ್ಟ ಜಾತಿ ಕಾಲೋನಿ ನಿವಾಸಿ ತುಕರಾಂ ಗಾಯಗೊಂಡವರು.

ವಿಶ್ವೇಶ್ವರಯ್ಯ ನಾಲೆ ಏರಿ ಮೂಲಕ ಪಟ್ಟಣಕ್ಕೆ ಆಗಮಿಸುವ ವೇಳೆ ಬಿಎಸ್ ಎಲ್ ಎನ್ ಕಚೇರಿ ವೃತ್ತದಲ್ಲಿ ಗುಂಡಿಯಿಂದಾಗಿ ತುಕರಾಂ ಅವರು ಬೈಕ್ ನಿಂದ ಆಯತಪ್ಪಿ ಬಿದ್ದು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಅವರ ಎಡಗೈ ಬೆರಳು ಮುರಿದಿದ್ದು, ಮುಖ ಹಾಗೂ ಎಡಗೈ ತೋಳಿಗೆ ಗಾಯವಾಗಿದೆ.

ಅಮೃತ್ ಯೋಜನೆಯಡಿ ಕುಡಿಯುವ ನೀರಿನ ಕಾಮಗಾರಿ ಐದಾರು ವರ್ಷಗಳು ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ಇದರಿಂದಾಗಿ ಪಟ್ಟಣ ವ್ಯಾಪ್ತಿಯಲ್ಲಿ ತೆಗೆದಿರುವ ರಸ್ತೆ ಗುಂಡಿಗಳನ್ನು ಮುಚ್ಚದ ಕಾರಣ ಬೈಕ್ ಸವಾರರಿಗೆ ಬಹಳ ತೊಂದರೆ ಉಂಟಾಗುತ್ತಿದೆ. ಅನೇಕರು ಬಿದ್ದು ಗಾಯಗೊಳ್ಳುತ್ತಿದ್ದಾರೆ ಎಂದು ಪುರಸಭೆ ಅಧಿಕಾರಿಗಳ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.ಅಪರಿಚಿತ ವ್ಯಕ್ತಿ ಸಾವುಮದ್ದೂರು:

ಅನಾರೋಗ್ಯದಿಂದ ಬಳಲುತ್ತಿದ್ದ ಅಪರಿಚಿತ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಜರುಗಿದೆ.ಪಟ್ಟಣದ ಮದ್ದೂರಮ್ಮ ದೇವಾಲಯದ ಬಳಿ ಅಸ್ವಸ್ಥಗೊಂಡಿದ್ದ ಈತನನ್ನು ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಕೊನೆ ಉಸಿರೆಳೆದಿದ್ದಾನೆ. ಸುಮಾರು 40 ರಿಂದ 45 ವರ್ಷ ವಯಸ್ಸಿನ ವ್ಯಕ್ತಿ. 5.5 ಪಡಿ ಎತ್ತರವಿದ್ದು, ಗುಂಡು ಮುಖ, ಕಪ್ಪು ಮೈಬಣ್ಣ ಹೊಂದಿದ್ದಾನೆ. ತಲೆಯಲ್ಲಿ ಕಪ್ಪು ಮತ್ತು ಬಿಳಿ ಮಿಶ್ರಿತ ಕೂದಲು ಇದ್ದು, ಈತನ ಎಡಗೈನಲ್ಲಿ ಶಾರದಮ್ಮ ಎಂಬ ಹಸಿರು ಹಚ್ಚೆ ಗುರುತು ಇದೆ. ಮೈ ಮೇಲೆ ಗ್ರೇ ಟೀ-ಶರ್ಟು ಮತ್ತು ಪ್ಯಾಂಟ್ ಧರಿಸಿದ್ದಾನೆ. ಜನ ಬಗ್ಗೆ ಮಾಹಿತಿ ಉಳ್ಳವರು ಮದ್ದೂರು ಪೊಲೀಸರನ್ನು ಸಂಪರ್ಕಿಸುವಂತೆ ಕೋರಲಾಗಿದೆ.