ಮದ್ದೂರು ತಾಲೂಕಿನ ಬ್ಯಾಡರಹಳ್ಳಿಯಲ್ಲಿ ಜಮೀನು ವಿವಾದದ ಹಿನ್ನೆಲೆಯಲ್ಲಿ ಕಳೆದ ಏಳು ವರ್ಷಗಳ ಹಿಂದೆ ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣದ ಏಳು ಮಂದಿ ಅಪರಾಧಿಗಳಿಗೆ ಪಟ್ಟಣದ ಜೆಎಂಎಫ್‌ಸಿ 2 ನೇ ಅಪರ ಸಿವಿಲ್ ನ್ಯಾಯಾಲಯ ತಲಾ ಹತ್ತು ಸಾವಿರ ದಂಡ ವಿಧಿಸಿ ಸೋಮವಾರ ಆದೇಶ ಹೊರಡಿಸಿದೆ.
ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ಬ್ಯಾಡರಹಳ್ಳಿಯಲ್ಲಿ ಜಮೀನು ವಿವಾದದ ಹಿನ್ನೆಲೆಯಲ್ಲಿ ಕಳೆದ ಏಳು ವರ್ಷಗಳ ಹಿಂದೆ ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣದ ಏಳು ಮಂದಿ ಅಪರಾಧಿಗಳಿಗೆ ಪಟ್ಟಣದ ಜೆಎಂಎಫ್‌ಸಿ 2 ನೇ ಅಪರ ಸಿವಿಲ್ ನ್ಯಾಯಾಲಯ ತಲಾ ಹತ್ತು ಸಾವಿರ ದಂಡ ವಿಧಿಸಿ ಸೋಮವಾರ ಆದೇಶ ಹೊರಡಿಸಿದೆ.ಪ್ರಕರಣದ ಅಪರಾಧಿಗಳು ಆರು ತಿಂಗಳ ಕಾಲ ಯಾವುದೇ ಅಪರಾಧ ಕೃತ್ಯದಲ್ಲಿ ಭಾಗಿಯಾಗದಂತೆ ನಿರ್ಬಂಧ ವಿಧಿಸಿ ಎರಡನೇ ಹೆಚ್ಚುವರಿ ನ್ಯಾಯಾಧೀರಾದ ಎಸ್.ಆರ್.ನಂದಿನಿ ಅವರು ಆದೇಶ ಹೊರಡಿಸಿದ್ದಾರೆ.
ಬ್ಯಾಡರಹಳ್ಳಿಯ ಗವಿಶೆಟ್ಟಿ, ವೆಂಕಟ ಲಕ್ಷ್ಮಮ್ಮ, ಮುತ್ತುರಾಜು, ಭಾಗ್ಯ, ಮುತ್ತುಸ್ವಾಮಿ, ಜಯಮ್ಮ ಹಾಗೂ ಭಾಗ್ಯ ದಂಡದ ಶಿಕ್ಷೆಗೊಳಗಾದ ಅಪರಾಧಿಗಳು. ಇವರು ಕಳೆದ 2020ರ ಮಾರ್ಚ್ 22ರಂದು ಜಮೀನು ವಿವಾದದ ಹಿನ್ನೆಲೆಯಲ್ಲಿ ಗ್ರಾಮದ ಪುಟ್ಟಸ್ವಾಮಿ ಪತ್ನಿ ಮಹದೇವಮ್ಮ ಅವರಿಗೆ ಸೇರಿದ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ ತೆಂಗಿನ ಸಸಿಗಳನ್ನು ನಾಶ ಮಾಡಿ ಆರ್ಥಿಕ ನಷ್ಟ ಉಂಟು ಮಾಡಿದ್ದರು.ಈ ಹಿನ್ನೆಲೆಯಲ್ಲಿ ಮದ್ದೂರು ಪೊಲೀಸರು ಮಹ ದೇವಮ್ಮನೀಡಿದ ದೂರಿನ ಆಧಾರದ ಮೇಲೆ 7 ಮಂದಿ ಅಪರಾಧಿಗಳ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದ ಅಂದಿನ ಸಬ್ ಇನ್ಸ್ ಪೆಕ್ಟರ್ ಮಂಜೇಗೌಡ ಐಪಿಸಿ 143 .147. 427,447ರ ಅನ್ವಯ ಪ್ರಕರಣ ದಾಖಲು ಮಾಡಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ನಂತರ ವಿಚಾರಣೆ ನಡೆಸಿದ ಎರಡನೇ ಅಪರ ನ್ಯಾಯಾಧೀಶ ಎಸ್.ಆರ್.ನಂದಿನಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಪ್ರಾಸಿಕ್ಯೂಷನ್ ಪರ ಸಹಾಯಕ ಸರ್ಕಾರಿ ಅಭಿಯೋಜಕ ಪ್ರೀತಮ್ ಡೇವಿಡ್ ವಾದ ಮಂಡಿಸಿದ್ದರು.ಮಗನಿಗೆ ಚಾಲನೆ ನೀಡಲು ಬೈಕ್ ನೀಡಿ ಸಾವಿಗೆ ಕಾರಣರಾದ ತಂದೆಗೆ ದಂಡಮದ್ದೂರು:ವಿಮೆ ಮತ್ತು ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಮಗನಿಗೆ ಚಾಲನೆ ಮಾಡಲು ಬೈಕ್ ನೀಡಿ ಆತನ ಸಾವಿಗೆ ಕಾರಣ ಕಾರಣನಾಗಿದ್ದ ತಂದೆಗೆ ಜೆಎಂಎಫ್‌ಸಿ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶೆ ಎಸ್.ಆರ್.ನಂದಿನಿ ದಂಡ ವಿಧಿಸಿದ್ದಾರೆ. ತಾಲೂಕಿನ ಗೊರವನಹಳ್ಳಿ ರವಿ 42 ಅವರಿಗೆ ನ್ಯಾಯಾಧೀಶರು 1,500 ರು. ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ಕಳೆದ ಜು. 27ರಂದು ಆರೋಪಿ ರವಿ ತಮ್ಮ ಮಗ ರಾಹುಲ್ ಗೆ ಚಾಲನೆ ಮಾಡಲು ತಮ್ಮ ಮೋಟಾರ್ ಬೈಕ್ ನೀಡಿದ್ದರು. ಚಾಲನೆ ವೇಳೆ ರಾಹುಲ್ ಗೆ ಅಪಘಾತ ಆಗಿ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸುವ ವೇಳೆ ರವಿ ಮಾಲಿಕತ್ವದ ಬೈಕ್ ಗೆ ವಿಮೆ ಮತ್ತು ಮೃತ ರಾಹುಲ್ ಗೆ ಡ್ರೈವಿಂಗ್ ಲೈಸಸ್ ಇಲ್ಲದಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ಮದ್ದೂರು ಕಾನೂನು ಶಿಸ್ತು ವಿಭಾಗದ ಪೊಲೀಸರು ರವಿ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾ ರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.