- ಆದರೆ ಹಣವನ್ನು ಪ್ರೇಮಿ ಚೇತನ್‌ಗೆ ನೀಡಿದ್ದಳು!
- ತನಿಖೆಯ ವೇಳೆ ಒಂದೊಂದೇ ಸಂಗತಿ ಬಯಲುಪುಣೆ: ಭಾವಿ ಪತಿ ಕೇತನ್ ಅಗರ್ವಾಲ್‌ನನ್ನು ಕೊಂದ ಸಿಯಾ ಗೋಯಲ್ ಬಗ್ಗೆ ಮತ್ತೊಂದು ಸ್ಫೋಟಕ ಸಂಗತಿ ಬಯಲಾಗಿದೆ. ಆಕೆ ಮದುವೆ ಶಾಪಿಂಗ್ ನೆಪದಲ್ಲಿ ಕೇತನ್‌ನಿಂದ 1 ಕೋಟಿ ರು. ಹಣ ಡೆದಿದ್ದಳು. ಆದರೆ ಅದನ್ನು ಶಾಪಿಂಗ್‌ಗೆ ಬಳಸದೇ ತನ್ನ ಪ್ರಿಯಕರ ಚೇತನ್ ಚೌಧರಿ ಖಾತೆಗೆ ವರ್ಗಾಯಿಸಿದ್ದಳು ಎಂದು ತಿಳಿದು ಬಂದಿದೆ.
‘ಪೊಲೀಸರು ನಡೆಸಿದ ವೇಳೆ ಈ ಅಂಶ ಬಯಲಾಗಿದೆ. ಸಿಯಾ, ಕೇತನ್‌ನಿಂದ ಮದುವೆ ಶಾಪಿಂಗ್ ಹಾಗೂ ಇನ್ನಿತರ ಸಿದ್ಧತೆಗೆಂದು 1 ಕೋಟಿ ರು. ಹಣ ತೆಗೆದುಕೊಂಡಿದ್ದಳು. ಅದನ್ನು ತನ್ನ ಮದುವೆಗೆ ಬಳಸುವ ಬದಲು ಪೂರ್ತಿ ಹಣವನ್ನು ಚೇತನ್‌ಗೆ ವರ್ಗಾಯಿಸಿ ಆತನ ವೃತ್ತಿ ಜೀವನ ಕಟ್ಟಿಕೊಳ್ಳಲು ಮತ್ತು ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳುವುದಕ್ಕೆ ನೀಡಿದ್ದಳು’ ಎಂದು ಮೂಲಗಳು ಹೇಳಿವೆ.ಆ ಬಳಿಕ, ಕೇತನ್‌ನನ್ನು ಯಾರಿಗೂ ಗೊತ್ತಾಗದಂತೆ ಕೊಂದು 3 ವರ್ಷದ ಬಳಿಕ ಮದುವೆಯಾಗುವುದಕ್ಕೆ ಸಿಯಾ ಹಾಗೂ ಚೇತನ್ ಚೌಧರಿ ನಿರ್ಧರಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸ್ ವಶಕ್ಕೆ:
ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ಅವರ ಪೊಲೀಸ್ ಕಸ್ಟಡಿಯನ್ನು ಜು.3 ರವರೆಗೆ ಪುಣೆ ನ್ಯಾಯಾಲಯ ವಿಸ್ತರಿಸಿದೆ.