ವಾಟರ್ ಟ್ಯಾಂಕರ್ ಡಿಕ್ಕಿಯಾಗಿ ರಸ್ತೆ ಬದಿ ನಿಂತಿದ್ದ ಬಾಲಕಿ ಸಾವು

KannadaprabhaNewsNetwork |  
Published : Oct 16, 2025, 02:00 AM IST
Anushree | Kannada Prabha

ಸಾರಾಂಶ

ವಾಟರ್ ಟ್ಯಾಂಕರ್ ಡಿಕ್ಕಿಯಾಗಿ ರಸ್ತೆ ಬದಿಯಲ್ಲಿ ನಿಂತಿದ್ದ ಒಂಬತ್ತು ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ಜೆ.ಬಿ.ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಾಟರ್ ಟ್ಯಾಂಕರ್ ಡಿಕ್ಕಿಯಾಗಿ ರಸ್ತೆ ಬದಿಯಲ್ಲಿ ನಿಂತಿದ್ದ ಒಂಬತ್ತು ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ಜೆ.ಬಿ.ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.

ಕುಳ್ಳಪ್ಪ ಕಾಲೋನಿಯ ನಿವಾಸಿ ಅನುಶ್ರೀ (9) ಮೃತ ದುರ್ದೈವಿ. ಘಟನೆ ಸಂಬಂಧ ವಾಟರ್ ಟ್ಯಾಂಕರ್ ಬಿಟ್ಟು ಪರಾರಿಯಾಗಿರುವ ಚಾಲಕನ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಯಾದಗಿರಿ ಜಿಲ್ಲೆ ವಡಿಗೇರ ತಾಲೂಕು ತುಮಕೂರು ಗ್ರಾಮದ ತಿಮ್ಮಪ್ಪ ಕುಟುಂಬದ ಜತೆ ಕುಳ್ಳಪ್ಪ ಕಾಲೋನಿಯಲ್ಲಿ ನೆಲೆಸಿದ್ದಾರೆ. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಮನೆ ಸಮೀಪ ರಸ್ತೆ ಬದಿ ಬೆಳಗ್ಗೆ 11.30ರಲ್ಲಿ ಅನುಶ್ರೀ ನಿಂತಿದ್ದ ವೇಳೆ ಬಾಲಕಿಗೆ ಕೃಷ್ಣಾ ರೆಡ್ಡಿ ಲೇಔಟ್‌ ಕಡೆಯಿಂದ ಬಂದ ವಾಟರ್ ಟ್ಯಾಂಕರ್‌ ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಸಾಲದ ನೆಪದಲ್ಲಿ ವಂಚನೆ ಮಾಡಿದ ಆರೋಪಿಯ ಮನೆ, ಕಚೇರಿ ಸೇರಿ 9 ಕಡೆ ಸಿಐಡಿ ದಾಳಿ
ಪಾಲಕರನ್ನು ಬ್ಲ್ಯಾಕ್‌ಮೇಲ್‌ ಮಾಡಲು ಬೆತ್ತಲೆ ಫೋಟೋ ತೆಗೆದಿದ್ದ ಯುವತಿ !