2025ರಲ್ಲಿ ಜಾಗತಿಕ ಆರ್ಥಿಕತೆ ಕುಂಠಿತವಾದರೂ ಭಾರತದ ಪ್ರಗತಿ ಉತ್ತಮ ಬೆಳವಣಿಗೆ : ತಜ್ಞರು !

KannadaprabhaNewsNetwork |  
Published : Jan 17, 2025, 12:45 AM ISTUpdated : Jan 17, 2025, 04:32 AM IST
ಆರ್ಥಿಕತೆ | Kannada Prabha

ಸಾರಾಂಶ

ನವದೆಹಲಿ: 2025ರಲ್ಲಿ ಜಾಗತಿಕ ಆರ್ಥಿಕತೆ ಕುಂಠಿತವಾಗುವ ನಿರೀಕ್ಷೆ ಇದೆ. ಆದರೂ ಈ ಅವಧಿಯಲ್ಲಿ ಭಾರತದ ಆರ್ಥಿಕತೆ ಉತ್ತಮ ಬೆಳವಣಿಗೆ ಕಾಣಲಿದೆಯೆಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.

ನವದೆಹಲಿ: 2025ರಲ್ಲಿ ಜಾಗತಿಕ ಆರ್ಥಿಕತೆ ಕುಂಠಿತವಾಗುವ ನಿರೀಕ್ಷೆ ಇದೆ. ಆದರೂ ಈ ಅವಧಿಯಲ್ಲಿ ಭಾರತದ ಆರ್ಥಿಕತೆ ಉತ್ತಮ ಬೆಳವಣಿಗೆ ಕಾಣಲಿದೆಯೆಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.

ದಾವೋಸ್‌ನಲ್ಲಿ ಶೀಘ್ರವೇ ವಿಶ್ವ ಆರ್ಥಿಕ ಶೃಂಗ ನಡೆಯಲಿದ್ದು, ಅದಕ್ಕೂ ಮುನ್ನ ವಲ್ಡ್‌ ಎಕನಾಮಿಕ್‌ ಫೋರಂ ಆರ್ಥಿಕ ತಜ್ಞರ ಸಮೀಕ್ಷೆ ನಡೆಸಿ ವರದಿಯೊಂದನ್ನು ಬಿಡುಗಡೆ ಮಾಡಿದೆ. ವರದಿ ಅನ್ವಯ, ‘2025ರಲ್ಲಿ ಜಾಗತಿಕ ಆರ್ಥಿಕತೆ ಅನೇಕ ಸವಾಲುಗಳನ್ನು ಎದುರಿಸಲಿದೆ ಎಂದು ತಿಳಿಸಿದೆ.ಜೊತೆಗೆ ಸಮೀಕ್ಷೆಯಲ್ಲಿ ಪಾಲ್ಗೊಂಡ ಅರ್ಥಶಾಸ್ತ್ರಜ್ಞರ ಪೈಕಿ ಶೇ.56ರಷ್ಟು ಮಂದಿ ಆರ್ಥಿಕ ಪರಿಸ್ಥಿತಿ ಹದಗೆಡಲಿದೆ ಎಂದರೆ, ಕೇವಲ ಶೇ.17ರಷ್ಟು ಜನ ಸುಧಾರಣೆಯ ನಿರೀಕ್ಷೆಯಲ್ಲಿದ್ದಾರೆ.

ಅಮೆರಿಕದ ಆರ್ಥಿಕತೆ ಉತ್ತಮ ಬೆಳವಣಿಗೆ ಕಾಣಲಿದ್ದು, ದಕ್ಷಿಣ ಏಷ್ಯಾ, ಮುಖ್ಯವಾಗಿ ಭಾರತವೂ ಬೆಳವಣಿಗೆಯ ಹಾದಿಯಲ್ಲಿ ಸಾಗಲಿದೆ. ಆದರೆ ಯುರೋಪ್‌ನ ಆರ್ಥಿಕತೆ ಪಥನವಾಗುವ ಸಾಧ್ಯತೆಯಿದೆ. ಕಡಿಮೆಯಾದ ಗ್ರಾಹಕ ಬೇಡಿಕೆ ಮತ್ತು ದುರ್ಬಲ ಉತ್ಪಾದಕತೆಯಿಂದಾಗಿ ಚೀನಾದ ಪರಿಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಜಾಗತಿಕ ಆರ್ಥಿಕತೆ ಕುಸಿತಕ್ಕೆ ಸಂರಕ್ಷಣಾವಾದ, ಯುದ್ಧಗಳು, ನಿರ್ಬಂಧ ಹಾಗೂ ರಾಷ್ಟ್ರೀಯ ಭದ್ರತಾ ಕಾಳಜಿಗಳೇ ಕಾರಣ ಎನ್ನಲಾಗಿದೆ.

ಇತ್ತೀಚಿನ ಭಾರತದ ರಾಷ್ಟ್ರೀಯ ಖಾತೆಗಳ ಅಂಕಿಅಂಶಗಳ ಪ್ರಕಾರ 2024ರ 3ನೇ ತ್ರೈಮಾಸಿಕದಲ್ಲಿ ಶೇ.5.4ರಷ್ಟು ಆರ್ಥಿಕ ಬೆಳವಣಿಗೆಯಾಗಿದ್ದು, ಇದರಿಂದಾಗಿ ಆರ್‌ಬಿಐ ವಾರ್ಷಿಕ ಬೆಳವಣಿಗೆಯ ಮುನ್ಸೂಚನೆಯನ್ನು ಕೊಂಚ ತಗ್ಗಿಸಿತ್ತು.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಕರ್ತವ್ಯ ಲೋಪ, ಭ್ರಷ್ಟಾಚಾರದ ಆರೋಪ; ವಿಚಾರಣೆಗೆ ಅಧಿಕಾರಿಗಳ ನೇಮಕ
ಶ್ರೀರಂಗಪಟ್ಟಣ: ಕುಡಿದ ಮತ್ತಿನಲ್ಲಿದ್ದ ಸ್ನೇಹಿತನ ಕೊಲೆ