ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿ
ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬೆಂಗಳೂರು ಉತ್ತರ ತಾಲೂಕಿನ ಕೆಂಗನಹಳ್ಳಿ ಗ್ರಾಮದ ಸರ್ವೆ ಸಂಖ್ಯೆ.12ರಲ್ಲಿ 6 ಎಕರೆಗೂ ಹೆಚ್ಚು ಗೋಮಾಳ ಜಾಗವಿದೆ. ಇದು ಗ್ರಾಮದ ಜಾನುವಾರುಗಳ ಹುಲ್ಲಿಗಾಗಿ ಮೀಸಲಿಸಲಾಗಿತ್ತು. ಕೆಲ ವ್ಯಕ್ತಿಗಳು ಮಣ್ಣು, ಕಲ್ಲು ಮಾರಾಟ ಮಾಡುವ ಜತೆ ಸರಕಾರಕ್ಕೆ ಅನುಭವದಲ್ಲಿ ಇದ್ದೇವೆ ಎಂದು ಬಿಂಬಿಸಿಕೊಳ್ಳಲು ಹುಲ್ಲುಗಾವಲನ್ನು ನಾಶ ಮಾಡಿದ್ದಾರೆ. ವಿಷಯ ತಿಳಿದ ತಕ್ಷಣ ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಹೋಗಿ ಜೆಸಿಬಿ ಹಾಗೂ ಟ್ರ್ಯಾಕ್ಟರ್‌ಗಳನ್ನು ವಶಕ್ಕೆ ಪಡೆದು ದೂರು ದಾಖಲಿಸಿಕೊಂಡಿದ್ದಾರೆ.
ಫೋಟೋ, ವಿಡಿಯೋ ವೈರಲ್:ಗೋಮಾಳ ಜಾಗದಲ್ಲಿ ಬಂಡೆ ಸ್ಫೋಟಿಸಿ ಸಾಗಾಟ ಮಾಡುತ್ತಿರುವ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಕಂದಾಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರಿಂದ ಆಕ್ರೋಶ ವ್ಯಕ್ತವಾಗಿದೆ.
ಮಾದನಾಯಕನಹಳ್ಳಿ ವ್ಯಾಪ್ತಿಯ ಕೆಂಗನಹಳ್ಳಿಯ ಗೋಮಾಳದಲ್ಲಿ ಬಂಡೆ ಒಡೆಯುತ್ತಿರುವ ವಿಚಾರ ತಿಳಿದು ಎರಡು ವಾಹನ ವಶಕ್ಕೆ ಪಡೆದಿದ್ದೇವೆ. ವಿಚಾರಣೆ ಮಾಡಲಾಗುತ್ತಿದ್ದು, ದೂರು ಸಹ ದಾಖಲಾಗಿದೆ.-ಮುರುಳಿ, ಇನ್‌ಸ್ಪೆಕ್ಟರ್, ಮಾದನಾಯಕನಹಳ್ಳಿ ಠಾಣೆ.
ಕೆಂಗನಹಳ್ಳಿ ಸರ್ವೆ ಸಂಖ್ಯೆ.12ರ ಗೋಮಾಳದಲ್ಲಿ ಅಕ್ರಮವಾಗಿ ಬಂಡೆ ಒಡೆಯುವುದು, ಮಣ್ಣು ತೆಗೆಯುವ ಬಗ್ಗೆ ಮಾಹಿತಿ ಇಲ್ಲ, ಈಗಲೇ ವಿಚಾರಿಸಿ ದೂರು ದಾಖಲು ಮಾಡುತ್ತೇವೆ.-ವಿಜಯಕುಮಾರ್ ಆರ್‌ಐ ಕೆಂಗನಹಳ್ಳಿ ವ್ಯಾಪ್ತಿ.