ಹಲಗೂರು:
ಗ್ರಾಮದ ಕಾಳರಾಜು ಅವರ ಜಮೀನಿನಲ್ಲಿ ಮಂಗಳವಾರ ಬೆಳಗಿನ ಜಾವ ಚಿರತೆ ಕಾಣಿಸಿಕೊಂಡು ಕರುವಿನ ಕತ್ತಿನ ಭಾಗ ಕಚ್ಚಿ ರಕ್ತ ಕುಡಿದ ನಂತರ ಹೊಟ್ಟೆ ಭಾಗವನ್ನು ಬಗೆದು ಮಾಂಸ ತಿಂದು ಪರಾರಿಯಾಗಿದೆ. ಇದರಿಂದ ಸುಮಾರು ರು. 10,000ಕ್ಕೂ ಹೆಚ್ಚು ನಷ್ಟ ಸಂಭವಿಸಿದೆ.
ಮೂಲತಃ ಗೊಲ್ಲರಹಳ್ಳಿಯ ಕಾಳರಾಜು ಅವರು ಚಿಲ್ಲಾಪುರದಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಸೋಮವಾರ ಸಂಜೆ ಸಾಗ್ಯ ಸರಗೂರು ಜಾತ್ರೆಗೆ ಹೋಗಿ ಮಂಗಳವಾರ ಬೆಳಗಿನ ಜಾವ ವಾಪಸ್ ಅವರ ಜಮೀನಿಗೆ ಬಂದಾಗ ಕರು ಸತ್ತಿರುವುದು ಕಂಡುಬಂದಿದೆ.ಅರಣ್ಯ ಇಲಾಖೆಗೆ ವಿಷಯ ತಿಳಿಸಿದ ಮೇರೆಗೆ ಸ್ಥಳಕ್ಕೆ ಪ್ರಾದೇಶಿಕ ಅರಣ್ಯವಲಯದ ಗಸ್ತು ಅರಣ್ಯಪಾಲಕ ಪಿ.ಎಂ.ಕೃಷ್ಣ ಭೇಟಿ ನೀಡಿ ಪರಿಶೀಲಿಸಿ ಪಶುವೈದಾಧಿಕಾರಿ ಮುತ್ತಪ್ಪ ಕರುವಿನ ಶವಪರೀಕ್ಷೆ ನಡೆಸಿದರು.
ಬಾಲಕನಿಗೆ ಬೈಕ್ ನೀಡಿದ ಮಾಲೀಕನಿಗೆ 25 ಸಾವಿರ ರು. ದಂಡ
ಬಾಲಕನಿಗೆ ಚಾಲನೆ ಮಾಡಲು ಬೈಕ್ ನೀಡಿದ ಬೈಕ್ ಮಾಲೀಕನಿಗೆ ಮಳವಳ್ಳಿ ಜೆಎಂಎಫ್‌ಸಿ ನ್ಯಾಯಾಲಯ 25 ಸಾವಿರ ರು. ದಂಡ ವಿಧಿಸಿದೆ.
ಈ ಸಂಬಂಧ ವಿಚಾರಣೆ ನಡೆಸಿದ ಮಳವಳ್ಳಿ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಮಹೇಂದ್ರ ಅವರು ಸೋಮವಾರ ಬೈಕ್ ನೀಡಿದ್ದ ಮಾಲೀಕ ಬೀರಯ್ಯ ಗೆ 25 ಸಾವಿರ ರು.ದಂಡ ಹಾಗೂ ಮೂರು ದಿನಗಳ ಸಾಧಾರಣ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ. ಈಗಾಗಲೇ ಬೀರಯ್ಯ 2025ರ ಜುಲೈನಲ್ಲಿ ಮೂರು ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದ ಕಾರಣ ದಂಡ ಪಾವತಿಗೆ ಮಾತ್ರ ಆದೇಶಿಸಿರುವ ನ್ಯಾಯಾಧೀಶರು ದಂಡ ಪಾವತಿ ವಿಫಲರಾದರೆ 22 ದಿನಗಳ ಸಾಧಾರಣ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ.