‘ಆಕೆಯನ್ನು ಪ್ರೀತಿಸಿದ್ದೆ, ಆದರೆ ನನ್ನನ್ನು ಸಿಲುಕಿಸಲು ಯತ್ನಿಸಿದಳು’ : ಮಹಾಲಕ್ಷ್ಮಿಯ ಪ್ರಿಯಕರ

ಸಾರಾಂಶ

‘ನಾನು ಆಕೆಯನ್ನು ಪ್ರೀತಿಸಿದ್ದೆ. ಆದರೆ ಆಕೆ ನನ್ನನ್ನು ಅಪಹರಣ ಪ್ರಕರಣದಲ್ಲಿ ಸಿಕ್ಕಿಹಾಕಿಸುವುದಾಗಿ ಬೆದರಿಕೆ ಹಾಕಿದ್ದಳು’ ಎಂದು ಬೆಂಗಳೂರಿನಲ್ಲಿ ಗೆಳತಿ ಮಹಾಲಕ್ಷ್ಮೀಯನ್ನು ಹತ್ಯೆಗೈದು 59 ತುಂಡು ಮಾಡಿದ ಆರೋಪಿ ಮುಕ್ತಿ ರಂಜನ್‌ ರಾಯ್‌ ಹೇಳಿದ್ದಾನೆ.

ಭುವನೇಶ್ವರ: ‘ನಾನು ಆಕೆಯನ್ನು ಪ್ರೀತಿಸಿದ್ದೆ. ಆದರೆ ಆಕೆ ನನ್ನನ್ನು ಅಪಹರಣ ಪ್ರಕರಣದಲ್ಲಿ ಸಿಕ್ಕಿಹಾಕಿಸುವುದಾಗಿ ಬೆದರಿಕೆ ಹಾಕಿದ್ದಳು’ ಎಂದು ಬೆಂಗಳೂರಿನಲ್ಲಿ ಗೆಳತಿ ಮಹಾಲಕ್ಷ್ಮೀಯನ್ನು ಹತ್ಯೆಗೈದು 59 ತುಂಡು ಮಾಡಿದ ಆರೋಪಿ ಮುಕ್ತಿ ರಂಜನ್‌ ರಾಯ್‌ ಹೇಳಿದ್ದಾನೆ.

ಹತ್ಯೆ ಬಳಿಕ ತವರಿಗೆ ತೆರಳಿ ತನ್ನ ತಾಯಿ ಬಳಿ ತನ್ನ ನೋವನ್ನು ಹಂಚಿಕೊಂಡಿದ್ದ ರಾಯ್‌, ‘ನಾನು ಆಕೆಯನ್ನು ಪ್ರೀತಿಸಿದ್ದೆ. ಆಕೆಗಾಗಿ ಸಾಕಷ್ಟು ಹಣ ವೆಚ್ಚ ಮಾಡಿದ್ದೆ. ಆದರೆ ಆಕೆಯ ವರ್ತನೆ ಸರಿ ಇರಲಿಲ್ಲ. ಜೊತೆಗೆ ನನ್ನನ್ನು ಅಪಹರಣ ಕೇಸಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದಳು. ಹೀಗಾಗಿ ಆಕೆಯನ್ನು ಹತ್ಯೆಗೈದೆ ಎಂದು ಹೇಳಿಕೊಂಡು ಅತ್ತಿದ್ದ’ ಎಂದು ಒಡಿಶಾದ ಪೊಲೀಸ್‌ ಮೂಲಗಳು ತಿಳಿಸಿವೆ.

ಇದನ್ನು ಆತ ಆತ್ಮಹತ್ಯೆಗೂ ಮುನ್ನ ಬರೆದಿಟ್ಟ ಪತ್ರದಲ್ಲೂ ಉಲ್ಲೇಖಿಸಿದ್ದ.

‘ಬೆಂಗಳೂರಿನ ಮಾಲ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದ ಮುಕ್ತಿ ರಂಜನ್‌ ಮತ್ತು ಮಹಾಲಕ್ಷ್ಮಿ ಪರಸ್ಪರ ಪ್ರೀತಿಸುತ್ತಿದ್ದರು. ತನ್ನನ್ನು ಮದುವೆಯಾಗುವಂತೆ ಆಕೆ ಪೀಡಿಸುತ್ತಿದ್ದಳು. ಇದರಿಂದ ಕೋಪಗೊಂಡ ರಂಜನ್‌ ಅವಳನ್ನು ಕೊಂದಿದ್ದ. ಈ ಘಟನೆ ಸೆ.2 ಅಥವ 3ರಂದು ನಡೆದಿದ್ದು, ಸೆ.21ರಂದು ಆಕೆಯ ಶವ ಫ್ರಿಡ್ಜ್‌ನಲ್ಲಿ ಪತ್ತೆಯಾಗಿತ್ತು’ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.

Share this article