ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಜೈಲಿನಲ್ಲಿದ್ದ ಮತ್ತೊಬ್ಬ ಶಂಕಿತನ ವಿಚಾರಣೆ

KannadaprabhaNewsNetwork |  
Published : Mar 16, 2024, 01:48 AM ISTUpdated : Mar 16, 2024, 08:51 AM IST
ಎನ್‌ಐಎ ಲೊಗೋ | Kannada Prabha

ಸಾರಾಂಶ

ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಮತ್ತೊಬ್ಬ ಶಿವಮೊಗ್ಗ ಜಿಲ್ಲೆಯ ಐಸಿಸ್ ಶಂಕಿತ ಉಗ್ರನನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ವಿಚಾರಣೆಗೊಳಪಡಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಮತ್ತೊಬ್ಬ ಶಿವಮೊಗ್ಗ ಜಿಲ್ಲೆಯ ಐಸಿಸ್ ಶಂಕಿತ ಉಗ್ರನನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ವಿಚಾರಣೆಗೊಳಪಡಿಸಿದೆ.

2022ರಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಬಾಂಬ್ ತಯಾರಿಸಿ ಪ್ರಯೋಗ ನಡೆಸಿದ ಪ್ರಕರಣದಲ್ಲಿ ಮಾಝ ಮುನೀರ್ ಅಹ್ಮದ್‌ ಬಂಧಿತನಾಗಿದ್ದ. 

ಅಂದಿನಿಂದ ಜೈಲಿನಲ್ಲಿದ್ದ ಆತನನ್ನು ನ್ಯಾಯಾಲಯದ ಅನುಮತಿ ಪಡೆದು ಎನ್‌ಐಎ ವಿಚಾರಣೆಗೊಳಪಡಿಸಿದೆ. ಕೆಫೆ ಬಾಂಬ್ ಸ್ಫೋಟದಲ್ಲಿ ಶಿವಮೊಗ್ಗ ಜಿಲ್ಲೆಯ ಶಂಕಿತ ಉಗ್ರರ ಕೈವಾಡ ಶಂಕೆ ಮೇರೆಗೆ ಮಾಝನನ್ನು ಎನ್‌ಐಎ ಗ್ರೀಲ್‌ ನಡೆಸಿದೆ ಎನ್ನಲಾಗಿದೆ.

ನ್ಯಾಯಾಲಯದ ಅನುಮತಿ ಪಡೆದು ಮಾಝನನ್ನು ಗುರುವಾರದಿಂದಲೇ ಎನ್‌ಐಎ ಪ್ರಶ್ನಿಸುತ್ತಿದ್ದು, ಆತನ ವಿಚಾರಣೆ ಶುಕ್ರವಾರ ಸಹ ನಡೆದಿದೆ.

ಅಲ್ಲದೆ 2020ರ ಮಂಗಳೂರಿನ ಗೋಡೆ ಬರಹ ಪ್ರಕರಣದಲ್ಲೂ ಆರೋಪಿಯಾಗಿದ್ದ ಮಾಝ, ಈಗ ತಲೆಮರೆಸಿಕೊಂಡಿರುವ ಮೋಸ್ಟ್ ವಾಟೆಂಡೆಡ್‌ ಐಸಿಸ್‌ ಶಂಕಿತ ಉಗ್ರ ತೀರ್ಥಹಳ್ಳಿ ತಾಲೂಕಿನ ಅಬ್ದುಲ್‌ ಮತೀನ್ ತಾಹಾ ಹಾಗೂ ಮುಸಾಬೀರ್ ಹುಸೇನ್ ಶಬಾಜ್‌ನ ಸಹಚರ ಕೂಡ ಆಗಿದ್ದ. ಹೀಗಾಗಿ ಕೆಫೆ ಕೃತ್ಯದಲ್ಲಿ ಮಾಝ ವಿಚಾರಣೆ ನಡೆಸಿರುವುದು ಮಹತ್ವದ ಪಡೆದುಕೊಂಡಿದೆ.

PREV

Recommended Stories

ಜಮೀನು ಅಕ್ರಮ ಪರಭಾರೆ: ಇಬ್ಬರ ಬಂಧನ
ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!