ಎತ್ತಿನ ಗಾಡಿಗೆ ಜೀಪ್‌ ಡಿಕ್ಕಿ: ಎರಡು ಎತ್ತುಗಳು ಸ್ಥಳದಲ್ಲೇ ಸಾವು

KannadaprabhaNewsNetwork |  
Published : Sep 14, 2026, 01:45 AM IST
13ಕೆಎಂಎನ್‌ಡಿ-2ಅಪಘಾತದಲ್ಲಿ ಜಖಂಗೊಂಡಿರುವ ಜೀಪ್‌. | Kannada Prabha

ಸಾರಾಂಶ

ಮಂಡ್ಯ ತಾಲೂಕಿನ ಸಾತನೂರು ಬಳಿ ಎತ್ತಿನ ಗಾಡಿಗೆ ಜೀಪ್‌ವೊಂದು ಡಿಕ್ಕಿ ಹೊಡೆದ ಪರಿಣಾಮ ಎತ್ತಿನ ಗಾಡಿ ಉರುಳಿ ಬಿದ್ದಿದ್ದು, ಸ್ಥಳದಲ್ಲೇ ಎರಡು ಎತ್ತುಗಳು ಸಾವನ್ನಪ್ಪಿದ್ದು, ಘಟನೆಯಿಂದ ಗಾಯಗೊಂಡಿದ್ದ ಬೈಕ್ ಸವಾರನೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪಿದ್ದಾನೆ.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಸಾತನೂರು ಬಳಿ ಎತ್ತಿನ ಗಾಡಿಗೆ ಜೀಪ್‌ವೊಂದು ಡಿಕ್ಕಿ ಹೊಡೆದ ಪರಿಣಾಮ ಎತ್ತಿನ ಗಾಡಿ ಉರುಳಿ ಬಿದ್ದಿದ್ದು, ಸ್ಥಳದಲ್ಲೇ ಎರಡು ಎತ್ತುಗಳು ಸಾವನ್ನಪ್ಪಿದ್ದು, ಘಟನೆಯಿಂದ ಗಾಯಗೊಂಡಿದ್ದ ಬೈಕ್ ಸವಾರನೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪಿದ್ದಾನೆ.

ಮೈಸೂರು ಕಲ್ಯಾಣಗಿರಿ ಅಜಯ್ (೨೧) ಮೃತ ದುರ್ದೈವಿ. ಎತ್ತಿನಗಾಡಿ ಮತ್ತು ಎತ್ತುಗಳು ಸಾತನೂರು ಗ್ರಾಮಕ್ಕೆ ಸೇರಿದ್ದವು ಎನ್ನಲಾಗಿದೆ. ಈ ಅಪಘಾತದಲ್ಲಿ ಮಟನ್‌ ಸ್ಟಾಲ್‌ ಅಂಗಡಿಗೂ ಹಾನಿಯಾಗಿದೆ.

ಆಗಿದ್ದೇನು?

ಸಾತನೂರು ಗ್ರಾಮದ ಪೂಜಾರಿ ಮಹೇಶ್ ಮೈಷುಗರ್ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಅನ್‌ಲೋಡ್‌ ಮಾಡಿ ಶನಿವಾರ ರಾತ್ರಿ ೧೧.೩೦ರ ವೇಳೆ ಖಾಲಿ ಎತ್ತಿನ ಗಾಡಿ ಹೊಡೆದುಕೊಂಡು ಗ್ರಾಮಕ್ಕೆ ವಾಪಸ್ ತೆರಳುತ್ತಿದ್ದರು. ಹಿಂಬದಿಯಿಂದ ವೇಗವಾಗಿ ಬಂದ ಜೀಪ್‌ ಎತ್ತಿನ ಗಾಡಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲೆ ಎರಡು ಹಸುಗಳು ಪ್ರಾಣ ಕಳೆದುಕೊಂಡಿವೆ. ಅದೃಷ್ಟವಶಾತ್ ಎತ್ತಿನ ಗಾಡಿ ಓಡಿಸುತ್ತಿದ್ದ ಪೂಜಾರಿ ಮಹೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೆರಗೋಡು ಹೋಬಳಿ ಕಲ್ಮಂಟಿದೊಡ್ಡಿ ಗ್ರಾಮದ ಯಶ್ವಂತ್ ಹಾಗೂ ವಸಂತ್ ಮಂಡ್ಯದಲ್ಲಿ ಊಟ ಮುಗಿಸಿಕೊಂಡು ಗ್ರಾಮಕ್ಕೆ ವಾಪಸ್ ತೆರಳುತ್ತಿದ್ದ ವೇಳೆ ಕತ್ತಲೆಯಲ್ಲಿ ನಿಧಾನವಾಗಿ ಚಲಿಸುತ್ತಿದ್ದ ಎತ್ತಿನ ಗಾಡಿ ಹೋಗುತ್ತಿರುವುದನ್ನು ಗ್ರಹಿಸದೆ ಡಿಕ್ಕಿ ಹೊಡೆದಿದ್ದಾರೆ. ಜೀಪ್‌ ಚಾಲಕನ ಅತಿ ವೇಗದ ಚಾಲನೆಯೇ ಘಟನೆಗೆ ಕಾರಣವಾಗಿದೆ.

ಜೀಪ್‌ ಡಿಕ್ಕಿ ಹೊಡೆದ ರಭಸಕ್ಕೆ ಎತ್ತಿನಗಾಡಿ ಉರುಳಿ ಬಿದ್ದಿದ್ದು, ಎದುರಕಡೆಯಿಂದ ಬರುತ್ತಿದ್ದ ಬೈಕ್ ಹಾಗೂ ಜೀಪ್‌ ಸಂಪೂರ್ಣ ಜಖಂಗೊಂಡಿದ್ದವು. ಘಟನೆಯಿಂದ ಮಂಡ್ಯ-ಕೆರಗೋಡು ರಸ್ತೆ ಸಂಚಾರ ಸಂಪುರ್ಣ ಅಸ್ತವ್ಯವಸ್ತವಾಗಿತ್ತು.

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಉರುಳಿಬಿದ್ದಿದ್ದ ಎತ್ತಿನ ಗಾಡಿ ಹಾಗೂ ಜೀಪ್‌ ನ್ನು ಕ್ರೇನ್ ಮೂಲಕ ಸ್ಥಳಾಂತರಿಸುವ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಮಾತುಕತೆ ಮೂಲಕ ಇತ್ಯರ್ಥ:

ಜೀಪ್‌ ಮಾಲೀಕ ಕಲ್ಮಂಟಿ ದೊಡ್ಡಿ ಹಾಗೂ ಎತ್ತಿನ ಗಾಡಿ, ಎತ್ತುಗಳ ಮಾಲೀಕ ಸಾತನೂರು ಗ್ರಾಮದವರಾಗಿದ್ದು, ಎರಡು ಗ್ರಾಮಗಳು ಅಕ್ಕ-ಪಕ್ಕದ ಗ್ರಾಮಗಳಾಗಿರುವುದರಿಂದ ಗೋಪಾಲಪುರ ಪಾಪಣ್ಣ ನೇತೃತ್ವದಲ್ಲಿ ಮಾತುಕತೆ ನಡೆದು ಎತ್ತಿನ ಗಾಡಿ ಹಾಗೂ ಮೃತಪಟ್ಟ ಹಸುಗಳಿಗೆ ಜೀಪ್‌ ಮಾಲೀಕ ಯಶ್ವಂತ್ ೩.೫೦ ಲಕ್ಷ ರು. ಪರಿಹಾರ ಕೊಡಬೇಕೆಂದು ಗ್ರಾಮಸ್ಥರ ಸಮ್ಮುಖದಲ್ಲಿ ಮಾತುಕತೆ ಮೂಲಕ ಇತ್ಯರ್ಥಪಡಿಸಿಕೊಂಡರು.

ಘಟನೆಯಿಂದಾಗಿ ರಸ್ತೆ ಬದಿಯಲ್ಲಿದ್ದ ಮಟನ್ ಸ್ಟಾಲ್ ಅಂಗಡಿ ಸೀಟ್‌ಗಳು ಸಂಪೂರ್ಣ ಜಖಂಗೊಂಡಿದ್ದವು. ಮಟನ್ ಸ್ಟಾಲ್ ಮಾಲೀಕರಿಗೆ ಕಾರು ಚಾಲಕ ೮೦ ಸಾವಿರ ರು. ಹಣ ನಿಡುವಂತೆ ತೀರ್ಮಾನ ಮಾಡಿದ್ದಾರೆ. ಮೃತ ಬೈಕ್ ಸವಾರ ಅಜಯ್‌ ಕುಟುಂಬಸ್ಥರು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ತನ್ನದಲ್ಲದ ತಪ್ಪಿಗೆ ಬಲಿಯಾದ ಬೈಕ್‌ ಸವಾರ

ಬೈಕ್ ಸವಾರ ಅಜಯ್‌ ತನ್ನದಲ್ಲದ ತಪ್ಪಿಗೆ ಪ್ರಾಣ ಕಳೆದುಕೊಂಡಿದ್ದಾನೆ. ಮೈಸೂರಿನಿಂದ ಸ್ನೇಹಿತರೊಂದಿಗೆ ಸಾತನೂರಿಗೆ ಗಣೇಶ ಮೂರ್ತಿಯನ್ನು ಕೊಂಡೊಯ್ಯಲು ಅಜಯ್‌ ಬಂದಿದ್ದರು. ಸ್ನೇಹಿತರೆಲ್ಲರೂ ವಾಹನದಲ್ಲಿ ಗಣೇಶ ಮೂರ್ತಿಯನ್ನು ಮೈಸೂರಿಗೆ ಕೊಂಡೊಯ್ಯತ್ತಿದ್ದರು. ಅಜಯ್ ಮಾತ್ರ ಮಧ್ಯರಾತ್ರಿ ಬೈಕ್‌ನಲ್ಲಿ ತೆರಳುತ್ತಿದ್ದಾಗ ಎದುರುಗಡೆಯಿಂದ ಜೀಪ್‌ ಬಂದು ಡಿಕ್ಕಿ ಹೊಡೆದಿದೆ. ಜೀಪ್‌ ಡಿಕ್ಕಿ ಹೊಡೆದ ರಭಸಕ್ಕೆ ಗಂಭೀರ ಗಾಯಗೊಂಡಿದ್ದ ಅಜಯ್‌ನನ್ನು ಸ್ಥಳೀಕರು ಕೂಡಲೇ ಮಿಮ್ಸ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಭಾನುವಾರ ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಬೈಕ್ ಸವಾರ ಮೃತಪಟ್ಟಿದ್ದಾನೆ.

ಕಸಾಯಿ ಕಾನೆಗೆ ಸಾಗುಸುತ್ತಿದ್ದ ಹಸು, ಕರುಗಳ ರಕ್ಷಣೆ, ಮೂವರ ಬಂಧನ

ಹಲಗೂರು:ಕಸಾಯಿ ಖಾನೆಗೆ ಸಾಗಿಸುತ್ತಿದ್ದ 6 ಹಸು, ಕರುಗಳನ್ನು ರಕ್ಷಿಸಿ ಗೋಶಾಲೆಗೆ ಬಿಟ್ಟಿರುವ ಘಟನೆ ಸಮೀಪದ ವಳಗೆರೆದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಮಳವಳ್ಳಿ ಕಡೆಯಿಂದ ರಾಮನಗರಕ್ಕೆ ಟೆಂಪೋ ಗಾಡಿಯಲ್ಲಿ ಮೂರು ಹಸುಗಳು ಹಾಗೂ ಮೂರು ಕರುಗಳನ್ನು ಕಸಾಯಿ ಕಾನೆಗೆ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಸಬ್ ಇನ್ಸ್ ಪೆಕ್ಟರ್ ಲೋಕೇಶ್ ಮದ್ದೂರು ರಸ್ತೆಯ ವಳಗೆರೆದೊಡ್ಡಿ ಗ್ರಾಮದ ಬಳಿ ಟೆಂಪೋವನ್ನು ನಿಲ್ಲಿಸಿ ತಪಾಸಣೆ ಮಾಡಿದಾಗ ಹಸು ಮತ್ತು ಕರುಗಳು ಇರುವುದನ್ನು ಕಂಡು ವಶಕ್ಕೆ ಪಡೆದಿದ್ದಾರೆ.ಆರೋಪಿಗಳಾದ ಫರ್ಹಾಜ್ ಖರೇಫಿ ಬಿನ್ ಉಮ್ಮರಾಜು ಖರೇಫಿ, ಸುಖೇಶ ಬಿನ್ ರಾಜೇಶ್ ಮತ್ತು ಸಿದ್ದೇಶ ಬಿನ್ ಸಿದ್ದರಾಜು ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಗಾಮನಹಳ್ಳಿ ಬಳಿಯ ಲಾಳನಕೆರೆ ಗೋಶಾಲೆಗೆ ಹಸು ಕರುಗಳನ್ನು ಬಿಡಲಾಗಿದೆ.ಹಲಗೂರು ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಅರ್ಜಿ ಹಾಕಿದ ಅರ್ಧದಷ್ಟು ಜನಕ್ಕೆ ‘ಪಿಆರ್‌ಸಿ’ ಮರೀಚಿಕೆ
ಗೃಹಿಣಿಯ ಮಾಸಿಕ ಕಾಲ್ಪನಿಕ ಆದಾಯ 30,000: ಕೋರ್ಟ್‌