ಕಿಕ್ಕೇರಿಯಲ್ಲಿ ಹಿರಿಯ ನಾಗರಿಕ ಕೆ.ಎಚ್.ವೆಂಕಟಪ್ಪಶೆಟ್ಟಿ ನಿಧನ : ಲಯನ್ಸ್ ಸಂಸ್ಥೆ ಮುಖಾಂತರ ನೇತ್ರ ದಾನ

KannadaprabhaNewsNetwork |  
Published : Sep 24, 2024, 01:51 AM ISTUpdated : Sep 24, 2024, 06:16 AM IST
Experts Warn Rubbing Eyes side effects

ಸಾರಾಂಶ

ಕಿಕ್ಕೇರಿಯ ಶತಮಾನದ ಸೊಸೈಟಿಯ ಮಾಜಿ ಅಧ್ಯಕ್ಷರು ಮತ್ತು ಗ್ರಾಪಂ ಮಾಜಿ ಸದಸ್ಯರಾದ ಕೆ.ಎಚ್.ವೆಂಕಟಪ್ಪಶೆಟ್ಟಿ (93) ಭಾನುವಾರ ನಿಧನರಾದರು. ಅವರ ಅಂತ್ಯಕ್ರಿಯೆ ಸೋಮವಾರ ನೆರವೇರಿತು.

 ಕಿಕ್ಕೇರಿ : ಪಟ್ಟಣದ ಮಂದಗೆರೆಯ ಹಿರಿಯ ನಾಗರೀಕ ಕೆ.ಎಚ್.ವೆಂಕಟಪ್ಪಶೆಟ್ಟಿ (93) ಅನಾರೋಗ್ಯದಿಂದ ಭಾನುವಾರ ರಾತ್ರಿ ನಿಧನರಾದರು.

ಕಾಫಿ ಪುಡಿ ಛೇರ್‍ಮನ್ ಮನೆತನದ ಮೃತರು ಕಿಕ್ಕೇರಿಯ ಶತಮಾನದ ಸೊಸೈಟಿ ಯೋಗನರಸಿಂಹಸ್ವಾಮಿ ಕೋ-ಆಫರೇಟಿವ್ ಸೊಸೈಟಿಯ ಮಾಜಿ ಅಧ್ಯಕ್ಷರು, ಗ್ರಾಪಂ ಮಾಜಿ ಸದಸ್ಯರು, ಕುರುಹಿನಶೆಟ್ಟಿ ಸಮಾಜದ ಮಾಜಿ ಅಧ್ಯಕ್ಷರಾಗಿ ಸಮಾಜಮುಖಿ ಸೇವೆ ಸಲ್ಲಿಸಿ ತಾಲೂಕಿನಾದ್ಯಂತ ಚಿರಪರಿಚಿತರಾಗಿದ್ದರು.

ಮೃತರಿಗೆ ಬಿಜೆಪಿ ಮುಖಂಡರಾದ ಕೆ.ವಿ.ಮೋಹನ್, ಕೆ.ವಿ.ಅರುಣಕುಮಾರ್ ಸೇರಿದಂತೆ ಮೂವರು ಪುತ್ರರು, ಓರ್ವ ಪುತ್ರಿ ಇದ್ದಾರೆ. ಕಳೆದ ವಾರ ಕಾಲುಜಾರಿ ಬಿದ್ದು ಅನಾರೋಗ್ಯದಿಂದ ಬೆಂಗಳೂರಿನ ಕ್ರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಮೃತರಾದರು.

ಮೃತರ ನೇತ್ರಗಳನ್ನು ಪುತ್ರರು ಬೆಂಗಳೂರಿನ ಲಯನ್ಸ್ ಸಂಸ್ಥೆ ಮುಖಾಂತರ ದಾನ ಮಾಡಿದರು. ಮೃತರ ಅಂತ್ಯಕ್ರಿಯೆ ಸೋಮವಾರ ಸ್ವಗ್ರಾಮ ಹಿಂದೂ ರುದ್ರಭೂಮಿಯಲ್ಲಿ ಜರುಗಿತು.

ಅಪರಿಚಿತ ವ್ಯಕ್ತಿ ಸಾವು

ಮಂಡ್ಯ:

ವಿದ್ಯಾನಗರದ ಗಾಂಧಿ ಭವನದ ಮುಂಭಾಗ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದೆ. ಮೃತನಿಗೆ ಸುಮಾರು 55-60 ವರ್ಷವಾಗಿದೆ. 5.3 ಅಡಿ ಎತ್ತರ, ತಲೆಯಲ್ಲಿ ಬಿಳಿ ಕೂದಲು, ಮೇಲ್ಭಾಗ ಬೊಕ್ಕ ತಲೆ, ಬಿಳಿ ಮೀಸೆ ಗಡ್ಡ ಬಿಟ್ಟಿದ್ದು, ಮೈ ಮೇಲೆ ಸಿಮೆಂಟ್ ಕಲರ್ ಅರ್ಧ ತೋಳಿನ ಟೀಶರ್ಟ್, ಗ್ರೇ ಕಲರ್ ನೈಟ್ ಪ್ಯಾಂಟ್ ಇದ್ದು, ಟೀ ಶರ್ಟ್ ಮೇಲೆ ಶ್ರೀ ಸವಿತ ಮಹರ್ಷಿ ಕೃಪೆ, ವಿಶ್ವನಾಥ್ ಲಗ್ಗೆರೆ ಸವುತ ಸಮಾಜ ಸೇವಕರು ಪೀಣ್ಯ ಕೈಗಾರಿಕಾ ಪ್ರದೇಶ ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ಎಂದು ಬರೆದಿದೆ. ವಾರಸುದಾರರಿದ್ದಲ್ಲಿ ದೂ-08232-224500, ದೂ-08232-22488, ದೂ-08232-224666 ಅನ್ನು ಸಂಪರ್ಕಿಸಬಹುದು ಎಂದು ಪಶ್ಚಿಮ ಪೊಲೀಸ್ ಠಾಣೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಕಿಲ್ಲರ್‌ ಡಾಕ್ಟರ್‌ಗೆ 10 ವೈದ್ಯೆಯರ ಜತೆ ಸಲುಗೆ
ರೌಡಿ ಶೀಟರ್‌ನಿಂದಲೇ ಮತ್ತೊಬ್ಬ ರೌಡಿ ಕಿಡ್ನಾಪ್‌