ಮೆಟ್ರೋದಲ್ಲಿ ಕರಿಮಣಿ ಮಾಲೀಕ ರೀಲ್ಸ್‌ ಮಾಡಿ ಕಿರುಚಾಡಿದ ಗುಂಪು: ಆಕ್ಷೇಪ

KannadaprabhaNewsNetwork |  
Published : Mar 06, 2024, 02:24 AM ISTUpdated : Mar 06, 2024, 01:50 PM IST
Namma metro

ಸಾರಾಂಶ

ನಮ್ಮ ಮೆಟ್ರೋ ರೈಲಿನೊಳಗೆ ಪ್ರಯಾಣಿಸುತ್ತಿದ್ದ ಯುವಕರ ಗೊಂಪೊಂದು ಟ್ರೆಂಡಿಂಗ್‌ನಲ್ಲಿರುವ ʻಕರಿಮಣಿ ಮಾಲೀಕ ನೀನಲ್ಲʼ ಹಾಡನ್ನು ಹಾಡಿ ರೀಲ್ಸ್ ಮಾಡಿರುವ ಘಟನೆ ನಡೆದಿದ್ದು ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಮ್ಮ ಮೆಟ್ರೋ ರೈಲಿನೊಳಗೆ ಪ್ರಯಾಣಿಸುತ್ತಿದ್ದ ಯುವಕರ ಗೊಂಪೊಂದು ಟ್ರೆಂಡಿಂಗ್‌ನಲ್ಲಿರುವ ʻಕರಿಮಣಿ ಮಾಲೀಕ ನೀನಲ್ಲʼ ಹಾಡನ್ನು ಹಾಡಿ ರೀಲ್ಸ್ ಮಾಡಿರುವ ಘಟನೆ ನಡೆದಿದ್ದು ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಸೋಮವಾರ ಸಂಚಾರ ಸಂಚಾರ ದಟ್ಟಣೆ ಇದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್‌ನಲ್ಲಿರುವ ಹಾಡನ್ನು ಹಾಡಿದ್ದಾರೆ. ಪ್ರಯಾಣಿಸುತ್ತಿದ್ದ ಇತರರು ಆಕ್ಷೇಪಿಸಿದರೂ ಲೆಕ್ಕಿಸದೆ ರೀಲ್ಸ್‌ ಮಾಡಿ ಜೋರಾಗಿ ಕಿರುಚಾಡಿದ್ದಾರೆ.

ಮೆಟ್ರೋ ರೈಲಿನೊಳಗೆ ಪ್ರಯಾಣಿಸುವಾಗ ದೊಡ್ಡದಾಗಿ ಮ್ಯೂಸಿಕ್‌, ಹಾಡು ಹಾಕುವುದಕ್ಕೆ ನಿರ್ಬಂಧವಿದೆ. ಇತರೆ ಪ್ರಯಾಣಿಕರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿರ್ಬಂಧ ವಿಧಿಸಿದೆ. ಈ ಹಿಂದೆ ರೀಲ್ಸ್‌ ಮಾಡಿದವರಿ ಬಿಎಂಆರ್‌ಸಿಎಲ್‌ ₹ 500 ದಂಡ ವಿಧಿಸಿ ಎಚ್ಚರಿಕೆ ನೀಡಿತ್ತು.

PREV

Recommended Stories

ಜಮೀನು ಅಕ್ರಮ ಪರಭಾರೆ: ಇಬ್ಬರ ಬಂಧನ
ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!