ಮಂಡ್ಯ:

ಪ್ರತ್ಯೇಕ ಬೈಕ್ ಕಳವು, ಸರಗಳ್ಳತನ ಪ್ರಕರಣ ಸಂಬಂಧ 9 ಆರೋಪಿಗಳನ್ನು ಬಂಧಿಸಿರುವ ಪೂರ್ವ ಠಾಣೆ ಪೊಲೀಸರು ಬಂಧಿತರಿಂದ ಲಕ್ಷಾಂತರ ರು. ಮೌಲ್ಯದ ಬೈಕ್ ಮತ್ತು ಚಿನ್ನದ ಗಟ್ಟಿ ತುಂಡನ್ನು ವಶಕ್ಕೆ ಪಡೆದಿದ್ದಾರೆ.

ನಗರದ ಗುತ್ತಲು ಅರ್ಕೇಶ್ವರ ದೇವಸ್ಥಾನದ ಬಳಿ ಕಳೆದ ಜ.19ರಂದು ಟಿವಿಎಸ್ ಎಕ್ಸ್ ಎಲ್ ಸ್ಕೂಟರ್ ಕಳವು ಮಾಡಿರುವ ಬಗ್ಗೆ ಮದ್ದೂರು ತಾಲೂಕಿನ ಗಟ್ಟಿಹಳ್ಳಿಯ ಶಿವಲಿಂಗಯ್ಯ ಪೂರ್ಣ ಠಾಣೆಗೆ ದೂರು ನೀಡಿದ್ದರು.

ಈ ಸಂಬಂಧ ತಾಲೂಕಿನ ಕಾಗೇಹಳ್ಳದ ದೊಡ್ಡಿ ಗ್ರಾಮದ ಲೇ.ಕಾಳಯ್ಯರ ಪುತ್ರ ಕೆ.ಚಂದ್ರಶೇಖರ್ (46) ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದಾಗ ಮದ್ದೂರು, ಸಾತನೂರು, ಹಲಗೂರು, ಮಳವಳ್ಳಿ, ಕಿರುಗಾವಲು ಹಾಗೂ ಪಾಂಡವಪುರದಲ್ಲಿ ಸುಮಾರು 15 ಟಿವಎಸ್ ಎಕ್ಸ್ ಎಲ್ ಸ್ಕೂಟರ್ ಕಳ್ಳತನ ಮಾಡಿದ್ದು, ಅವುಗಳನ್ನು ಮಾರಾಟ ಮಾಡಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಈತನಿಂದ 5.75 ಲಕ್ಷ ರು. ಮೌಲ್ಯದ 15 ಟಿವಿಎಸ್ ಎಕ್ಸ್ ಎಲ್ ಸ್ಕೂಟರ್ ವಶಕ್ಕೆ ಪಡೆಯಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಮಾ.5 ರಂದು ನಗರದ ಮಿಮ್ಸ್ ಆಸ್ಪತ್ರೆ ಆವರಣದಲ್ಲಿ ಡಿಯೋ ಸ್ಕೂಟರ್ ಕಳವು ಸಂಬಂಧ ಮಾಲೀಕ ಮೈಸೂರು ಬನ್ನಿಮಂಟಪದ ಬಿ.ಲೇ ಔಟ್ ನ ಇಮ್ರಾನ್ ಖಾನ್ ಪೊಲೀಸರಿಗೆ ದೂರು ನೀಡಿದ್ದರು.


ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಾ.6 ರಂದು ಆರೋಪಿಗಳಾದ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಗರಗೇಶ್ವರಿ ಕ್ವಾಟ್ರಸ್ ನ ಮುಜಿಬುಲ್ಲಾ ಪುತ್ರ ರಿಹಾನ್ ಪಾಷ, ಸೈಯದ್ ಅಪ್ರೋಸ್ ಪುತ್ರ ಸೈಯದ್ ಅಯಾನ್ , ಇದೇ ಬಡಾವಣೆಯ ಅಪ್ರಾಪ್ತ ಬಾಲಕನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಆರೋಪಿಗಳು ಮೈಸೂರು ಸಿಟಿ, ಜಿಲ್ಲೆಯ ವಿವಿಧೆಡೆ 12 ಡಿಯೋ ಸ್ಕೂಟರ್ ಕಳವು ಮಾಡಿ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿಗಳಿಂದ 8.50 ಲಕ್ಷ ರು. ಮೌಲ್ಯದ ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಪೊಲೀಸರ ತಂಡವನ್ನು ಜಿಲ್ಲಾ ಎಸ್ಪಿ ಶೋಭರಾಣಿ, ಎಎಸ್ಪಿ ಸೇರಿದಂತೆ ಹಿರಿಯ ಪೊಲೀಸರು ಅಭಿನಂದಿಸಿದ್ದಾರೆ.