ಆಸ್ಪತ್ರೆ ವೆಚ್ಚಕ್ಕೆ ಸ್ನೇಹಿತೆಯಚಿನ್ನ ಕದ್ದ ಮಹಿಳಾ ಟೈಲರ್

KannadaprabhaNewsNetwork |  
Published : Jan 31, 2024, 02:16 AM IST
Lakshmi | Kannada Prabha

ಸಾರಾಂಶ

ಪದೇ ಪದೇ ಆರೋಗ್ಯ ಹದಗೆಡುತ್ತಿದ್ದರಿಂದ ವೆಚ್ಚಕ್ಕಾಗಿ ಸ್ನೇಹಿತೆಯ ಚಿನ್ನಾಭರಣ ಕದ್ದಿದ್ದ ಮಹಿಳೆಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ತನ್ನ ಸ್ನೇಹಿತೆ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ ಮಹಿಳಾ ಟೈಲರ್‌ವೊಬ್ಬರನ್ನು ಕೆ.ಪಿ.ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಚೋಳರಪಾಳ್ಯದ ನಿವಾಸಿ ಲಕ್ಷ್ಮಿ ಬಂಧಿತರಾಗಿದ್ದು, ಆರೋಪಿಯಿಂದ ₹4.22 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಚೋರಳಪಾಳ್ಯದ 3ನೇ ಅಡ್ಡರಸ್ತೆಯಲ್ಲಿ ಗಾರ್ಮೆಂಟ್ಸ್ ಮಹಿಳಾ ಉದ್ಯೋಗಿ ಮನೆಯಲ್ಲಿ ಕಳ್ಳತನ ನಡೆದಿತ್ತು. ಈ ಕೃತ್ಯದ ತನಿಖೆ ನಡೆಸಿದ ಪೊಲೀಸರು, ಶಂಕೆ ಮೇರೆಗೆ ಸಂತ್ರಸ್ತೆ ಪರಿಚಯಸ್ಥರನ್ನು ಠಾಣೆಗೆ ಕರೆಸಿ ತೀವ್ರ ವಿಚಾರಣೆಗೊಳಪಡಿಸಿದರು. ಆಗ ಕೊನೆಗೆ ತಾನು ಕಳ್ಳತನ ಮಾಡಿರುವುದಾಗಿ ಲಕ್ಷ್ಮಿ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತನ್ನ ಕುಟುಂಬದ ಜತೆ ನೆಲೆಸಿದ್ದ ಲಕ್ಷ್ಮಿ, ಟೈಲರಿಂಗ್ ಮಾಡಿ ಜೀವನ ಸಾಗಿಸುತ್ತಿದ್ದಳು. ಆಕೆಯ ಪತಿ ಗುತ್ತಿಗೆದಾರನಾಗಿದ್ದಾನೆ. ಈಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದ ಆಕೆ ವೈದ್ಯಕೀಯ ವೆಚ್ಚಕ್ಕೆ ಸಾಕಷ್ಟು ಹಣ ವ್ಯಯಿಸಿದ್ದರು. ಆದರೆ ನಿರೀಕ್ಷಿತ ಮಟ್ಟದಲ್ಲಿ ಆರೋಗ್ಯ ಸುಧಾರಿಸಿರಲಿಲ್ಲ. ಈಗ ಮತ್ತೆ ವೈದ್ಯಕೀಯ ಚಿಕಿತ್ಸೆಗೆ ಹಣದ ಅವಶ್ಯಕತೆ ಇದ್ದ ಕಾರಣ ಗೆಳತಿ ಮನೆಯಲ್ಲಿ ಕಳ್ಳತನ ಮಾಡಿದ್ದಾಗಿ ವಿಚಾರಣೆ ವೇಳೆ ಲಕ್ಷ್ಮಿ ಹೇಳಿರುವುದಾಗಿ ತಿಳಿದು ಬಂದಿದೆ.

ಬಹಳ ವರ್ಷಗಳಿಂದ ಗಾರ್ಮೆಂಟ್ಸ್ ಉದ್ಯೋಗಿ ಹಾಗೂ ಲಕ್ಷ್ಮಿ ಸ್ನೇಹಿತರಾಗಿದ್ದು, ಆಗಾಗ್ಗೆ ಗೆಳತಿ ಮನೆಗೆ ಲಕ್ಷ್ಮಿ ಹೋಗಿ ಬರುತ್ತಿದ್ದಳು. ಹೀಗಾಗಿ ಸ್ನೇಹಿತೆ ಮನೆಯಲ್ಲಿ ಚಿನ್ನಾಭರಣಗಳನ್ನಿಡುವ ಸಂಗತಿಗೆ ಆಕೆಗೆ ತಿಳಿದಿತ್ತು. ಕೆಲ ದಿನಗಳ ಹಿಂದೆ ತನ್ನ ಗೆಳತಿಗೆ ಊರಿಗೆ ಹೋಗಿದ್ದಾಗ ಆಕೆಯ ಮನೆಯಲ್ಲಿ ಲಕ್ಷ್ಮಿ ಕಳ್ಳತನ ಮಾಡಿದ್ದಳು. ಬೀಗ ಮುರಿಯದೆ ಕಳ್ಳತನ ಮಾಡಿದ್ದರಿಂದ ಕೃತ್ಯದಲ್ಲಿ ಪರಿಚಿತರ ಕೈವಾಡ ಶಂಕೆ ಮೇರೆಗೆ ತನಿಖೆ ನಡೆಸಿದಾಗ ಆರೋಪಿ ಸಿಕ್ಕಿಬಿದ್ದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಆಕ್ಟಿವೇ ಮಾಡದ ಹೊಸ ಕ್ರೆಡಿಟ್ ಕಾರ್ಡ್‌ ಬಳಸಿ 1.08 ಲಕ್ಷ ರು. ದೋಚಿದ ಸೈಬರ್ ಖದೀಮರು
ನಿದ್ರೆಗೆ ಜಾರಿದ ಪ್ರಯಾಣಿಕನ ದೋಚಿ ಮಾರ್ಗ ಮಧ್ಯೆಯೇ ಇಳಿಸಿ ಕ್ಯಾಬ್‌ ಚಾಲಕ ಪರಾರಿ!