ಶ್ರೀರಂಗಪಟ್ಟಣ ಪುರಸಭೆ ವ್ಯಾಪ್ತಿಯಲ್ಲಿ ಚಿರತೆ, ಹುಲಿಗಳ ಪ್ರತ್ಯಕ್ಷ..?

KannadaprabhaNewsNetwork |  
Published : Oct 24, 2025, 01:00 AM IST
23ಕೆಎಂಎನ್ ಡಿ23 | Kannada Prabha

ಸಾರಾಂಶ

ಶ್ರೀರಂಗಪಟ್ಟಣ ಪಟ್ಟಣ ಪುರಸಭಾ ವ್ಯಾಪ್ತಿಯ ಗಂಜಾಂನ ಗುಂಬಸ್ ರಸ್ತೆಯಲ್ಲಿ ಚಿರತೆ ಹಾಗೂ ಹುಲಿಗಳು ಪ್ರತ್ಯೆಕ್ಷಗೊಂಡು ಓಡಾಡುತ್ತಿರುವಂತೆ ಕಿಡಿಗೇಡಿಗಳು ಚಿತ್ರಗಳನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟ ಹಿನ್ನೆಲೆಯಲ್ಲಿ ಇದನ್ನು ವೀಕ್ಷಣೆ ಮಾಡಿರುವ ಸಾರ್ವಜನಿಕರು ಭಯ ಭೀತರಾಗಿದ್ದಾರೆ.

ಶ್ರೀರಂಗಪಟ್ಟಣ:  ಪಟ್ಟಣ ಪುರಸಭಾ ವ್ಯಾಪ್ತಿಯ ಗಂಜಾಂನ ಗುಂಬಸ್ ರಸ್ತೆಯಲ್ಲಿ ಚಿರತೆ ಹಾಗೂ ಹುಲಿಗಳು ಪ್ರತ್ಯೆಕ್ಷಗೊಂಡು ಓಡಾಡುತ್ತಿರುವಂತೆ ಕಿಡಿಗೇಡಿಗಳು ಚಿತ್ರಗಳನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟ ಹಿನ್ನೆಲೆಯಲ್ಲಿ ಇದನ್ನು ವೀಕ್ಷಣೆ ಮಾಡಿರುವ ಸಾರ್ವಜನಿಕರು ಭಯ ಭೀತರಾಗಿದ್ದಾರೆ.

ಕಿಡಿಗೇಡಿಗಳು ಗಂಜಾಂ ರಸ್ತೆಯಲ್ಲಿ ಚಿರತೆಗಳು, ಹುಲಿಗಳು ಓಡಾಡುತ್ತಿರುವ ಚಿತ್ರಗಳನ್ನು ಹಾಕಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ್ದಾರೆ. ಚಿತ್ರಗಳನ್ನು ಎಡಿಟ್ ಮಾಡಿ, ವೈರಲ್ ಮಾಡಿರುವುದು ಸಾರ್ವಜನಿಕರಲ್ಲಿ ಆತಂಕವನ್ನು ಸೃಷ್ಟಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳನ್ನು ಹರಿಯಬಿಟ್ಟು ಭಯದ ವಾತಾವರಣ ಸೃಷ್ಟಿಸಿರುವ ಕಿಡಿಗೇಡಗಳನ್ನು ಪೊಲೀಸರು ಕಂಡು ಹಿಡಿದು ಶಿಕ್ಷೆಗೆ ಒಳಡಪಡಿಸುವಂತೆ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ಚಿತ್ರಗಳನ್ನು ಹಾಕಿರುವ ಕಿಡಿಗೇಡಿಗಳ ಹುಡುಕಾಟಕ್ಕೆ ಬಲೆ ಬೀಸಿದ್ದಾರೆ.

ಜೂಜು: 8 ಮಂದಿ ಬಂಧನ

ಮಳವಳ್ಳಿ: ತಾಲೂಕಿನ ಉಪ್ಪಲಿಗೇರಿಕೊಪ್ಪಲು ಗ್ರಾಮದ ಹೊರವಲಯದ ಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ಜೂಜಾಡುತ್ತಿದ್ದ 8 ಮಂದಿಯನ್ನು ಕಿರುಗಾವಲು ಪೊಲೀಸರು ಬಂಧಿಸಿದ್ದಾರೆ.

ಗ್ರಾಮದ ಶಿವಣ್ಣ ರ ಜಮೀನಿನ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಜೂಜಿನಲ್ಲಿ ತೊಡಗಿದ್ದ ಖಚಿತ ಮಾಹಿತಿ ಮೇರೆಗೆ ಕಿರುಗಾವಲು ಪಿಎಸ್ಐ ಎಂ.ಸಿದ್ದರಾಜು ನೇತೃತ್ವದಲ್ಲಿ ದಾಳಿ ಮಾಡಿದ ಪೊಲೀಸರು 8 ಮಂದಿಯನ್ನು ಬಂಧಿಸಿ ಪಣಕ್ಕಿಟ್ಟಿದ್ದ 48 ಸಾವಿರ ರು ನಗದು ವಶ ಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈಜಲು ಹೋಗಿ ನೀರು ಪಾಲಾದ ಯುವಕ

ಶ್ರೀರಂಗಪಟ್ಟಣ:  ಕಾವೇರಿ ನದಿಯಲ್ಲಿ ಈಜಲು ಹೋದ ಯುವಕ ನೀರು ಪಾಲಾದ ಘಟನೆ ತಾಲೂಕಿನ ಪ್ರಸಿದ್ಧ ಪ್ರವಾಸಿತಾಣ ಬಲಮುರಿಯಲ್ಲಿ ಬುಧವಾರ ಸಂಜೆ ನಡೆದಿದೆ.

ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಜಿ.ಬಿ.ಸರಗೂರು ನಿವಾಸಿ ದಿನೇಶ್ (24) ನೀರಲ್ಲಿ ಮುಳಗಿ ಸಾವನಪ್ಪಿರುವ ಯುವಕ. ಚಿಕನ್ ಅಂಗಡಿಯಲ್ಲಿ ಕೆಲಸಕ್ಕಿದ್ದ ದಿನೇಶ್ ತನ್ನ ನಾಲ್ವರು ಸ್ನೇಹಿತರ ಜೊತೆ ಪ್ರವಾಸಕ್ಕೆ ಬಂದು ನೀರಿಗಿಳಿದು ಆಟವಾಡುವಾಗ ಈ ಘಟನೆ ನಡೆದಿದೆ. ಸ್ಥಳಕ್ಕೆ ಕೆಆರ್‌ಎಸ್‍ ಪೊಲೀಸರು ಆಗಮಿಸಿ ನೀರಲ್ಲಿ ಮುಳಗಿದ್ದ ಶವದ ಶೋಧಕಾರ್ಯ ನಡೆಸಿ ನಂತರ ಮೈಸೂರಿನ ಶವಗಾರಕ್ಕೆ ಕಳುಹಿಸಿ ಪಂಚನಾಮೆ ಮಾಡಿಸಿ ಶವವನ್ನು ಪೋಷಕರಿಗೆ ಒಪ್ಪಿಸಿದ್ದಾರೆ. ಈ ಕುರಿತು ಕೆಆರ್ ಎಸ್‍ ಪೊಲೀಸ್‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Read more Articles on

Recommended Stories

ಮದ್ಯ ಸೇವಿಸಿ ಶಾಲಾ ವಾಹನಗಳ ಚಾಲನೆ ಮಾಡಿದ 36 ಚಾಲಕರ ವಿರುದ್ಧ ಕೇಸ್‌
ಸಾರಿಗೆ ಬಸ್- ಕಾರಿನ ನಡುವೆ ಭೀಕರ ಅಪಘಾತ : ಕಾರು ಚಾಲಕ ಸ್ಥಳದಲ್ಲೇ ಸಾವು