ಚಿರತೆ ಸೆರೆ ಹಿಡಿಯಲು ಬೋನ್ ಇಟ್ಟ ಅರಣ್ಯಾಧಿಕಾರಿಗಳುಕನ್ನಡಪ್ರಭ ವಾರ್ತೆ ಮದ್ದೂರು
ಚಿರತೆ ದಾಳಿಯಿಂದ ಮೂವರು ರೈತರು ಗಾಯಗೊಂಡಿರುವ ಘಟನೆ ತಾಲೂಕಿನ ಚಾಮನಹಳ್ಳಿಯಲ್ಲಿ ಗುರುವಾರ ಮಧ್ಯಾಹ್ನ ಜರುಗಿದೆ.ಗ್ರಾಮದ ಶಶಿಕುಮಾರ್ (45) ಸೇರಿದಂತೆ ಮೂವರು ರೈತರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ದಾಳಿಯಿಂದ ಆತಂಕಗೊಂಡ ಇಬ್ಬರು ಸ್ಥಳದಿಂದ ಪರಾರಿಯಾಗಿದ್ದು ಇವರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ದಾಳಿ ವೇಳೆ ಚಿರತೆ ಎರಡು ಮೇಕೆಗಳ ಪೈಕಿ ಒಂದು ಮೇಕೆಯನ್ನು ಎಳೆದೊಯ್ದಿದ್ದು ಭತ್ತದ ಗದ್ದೆಯಲ್ಲಿ ಮೇಕೆಯ ಕಳೆಬರ ಪತ್ತೆಯಾಗಿದೆ. ರೈತ ಶಶಿಕುಮಾರ್ ಗುರುವಾರ ಮಧ್ಯಾಹ್ನ ತಮ್ಮ ಜಮೀನಿನ ಪಕ್ಕದಲ್ಲಿ ಮೇಕೆಗಳನ್ನು ಮೇಯಿಸುತ್ತಿದ್ದರು. ಹಿಂಭಾಗದಿಂದ ಬಂದ ಚಿರತೆ ಏಕಾಏಕಿ ಮೇಕೆ ಮೇಲೆ ದಾಳಿ ಮಾಡಿದೆ.ಮೇಕೆ ಕೂಗಾಟದಿಂದ ಎಚ್ಚೆತ್ತ ಶಶಿಕುಮಾರ್ ಕಲ್ಲು ಮತ್ತು ಗುದ್ದಲಿ ಹಾಗೂ ದೊಣ್ಣೆಯಿಂದ ಚಿರತೆ ಮೇಲೆ ದಾಳಿ ಮಾಡಿ ಮೇಕೆ ರಕ್ಷಿಸಲು ಮುಂದಾಗಿದ್ದಾರೆ. ನಂತರ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಚಾಮನಹಳ್ಳಿಯ ಐದು ಮಂದಿ ರೈತರ ಗುಂಪು ಚಿರತೆಯಿಂದ ಮೇಕೆ ರಕ್ಷಿಸಲು ಹೋದಾಗ ಗದ್ದೆಯಲ್ಲಿ ಅಡಗಿ ಕುಳಿತ ಚಿರತೆ ಪಾರಾಗುವ ಭರದಲ್ಲಿ ಇಬ್ಬರ ಮೇಲೆ ದಾಳಿ ಮಾಡಿ ಪರಾರಿಯಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ವಲಯ ಅರಣ್ಯಾಧಿಕಾರಿ ಗವಿಯಪ್ಪ, ಉಪವಲಯ ಅರಣ್ಯಾಧಿಕಾರಿ ರತ್ನಾಕರ್ , ರವಿ, ಸಿಬ್ಬಂದಿ ಸುದರ್ಶನ್, ಸಾಗರ್, ರಮೇಶ್, ವೀರೇಗೌಡ, ಶಿವರಾಮು, ನಂಜುಂಡಯ್ಯ ಅವರುಗಳು ಡ್ರೋನ್ ಕ್ಯಾಮೆರಾ ಸಹಾಯದಿಂದ ಚಿರತೆಯ ಚಲನವಲನಗಳನ್ನು ತಿಳಿಯಲು ಪ್ರಯತ್ನಿಸಿದಾದರೂ ಯಾವುದೇ ಸುಳಿವು ಲಭ್ಯವಾಗಿಲ್ಲ.ಬಳಿಕ ಗ್ರಾಮದ ಹೊರವಲಯದಲ್ಲಿ ಚಿರತೆ ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ಬೋನ್ ಇಟ್ಟು ಕ್ರಮ ಕೈಗೊಂಡಿದ್ದಾರೆ.14ಕೆಎಂಎನ್ ಡಿ20,21,22
ಚಿರತೆ ದಾಳಿಯಿಂದ ಗಾಯಗೊಂಡಿರುವ ರೈತಚಿರತೆ ದಾಳಿಗೆ ಬಲಿಯಾಗಿರುವ ಮೇಕೆ
ಚಿರತೆ ಸೆರೆ ಹಿಡಿಯಲು ಬೋನ್ ಇಟ್ಟಿರುವ ಅರಣ್ಯಾಧಿಕಾರಿಗಳು.