ಕನ್ನಡಪ್ರಭ ವಾರ್ತೆ ಮಂಡ್ಯ
ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಸತೀಶ್ ದಾಳಿಗೆ ಒಳಗಾದ ಅಧಿಕಾರಿ. ಲೋಕಾಯುಕ್ತ ಪೊಲೀಸ್ ಅಧಿಕ್ಷಕ ಸುರೇಶ್ ಬಾಬು ನೇತೃತ್ವದಲ್ಲಿ ಸತೀಶ್ ಅವರ ಮನೆ, ಕಚೇರಿ, ಪತ್ನಿಯ ತವರು ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದರು. ಲೋಕಾಯುಕ್ತ ಇನ್ಸ್‌ಪೆಕ್ಟರ್ ಬ್ಯಾಟರಾಯಗೌಡ ನೇತೃತ್ವದಲ್ಲಿ ಆಸ್ತಿಗೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆ ನಡೆಸಿದರು.
ಬಂದೀಗೌಡ ಬಡಾವಣೆಯಲ್ಲಿರುವ ಬಾಡಿಗೆ ಮನೆ, ಮರೀಗೌಡ ಬಡಾವಣೆಯಲ್ಲಿರುವ ತಂದೆ ಮನೆ, ಕಚೇರಿ, ಪತ್ನಿಯ ತವರು ಮನೆಗೂ ಅಧಿಕಾರಿಗಳು ತೆರಳಿ ಪರಿಶೀಲಿಸಿದರು. ದಾಳಿ ಸಮಯದಲ್ಲಿ 6 ಲಕ್ಷ ರು. ನಗದು, ಕಾವೇರಿ ಸಿರಿ ಲೇಔಟ್‌ನಲ್ಲಿ ಎರಡು ನಿವೇಶನ, ಬೆಂಗಳೂರು ಸತ್ವದಲ್ಲಿ 1 ಪ್ಲಾಟ್, ಆರ್‌ಪಿಸಿ ಲೇಔಟ್‌ನಲ್ಲಿ ಒಂದು ನಿವೇಶ, ಮಂಡ್ಯ ತಾಲೂಕು ಕಾತುಂಗೆರೆ ಗ್ರಾಮಕ್ಕೆ ಹೊಂದಿಕೊಂಡಿರುವ ಮನುಗನಹಳ್ಳಿ ವ್ಯಾಪ್ತಿಯಲ್ಲಿ 5 ಎಕರೆ ಜಮೀನು ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.ಸತೀಶ್ ಬಳಿ ಇರುವ ಆಸ್ತಿ ಏಷ್ಟು..?ಸ್ಥಿರಾಸ್ತಿ ಮೌಲ್ಯ ಒಟ್ಟು 2,19,68, 976 ರು.ಮೂರು ನಿವೇಶನಗಳ ಅಂದಾಜು ವೆಚ್ಚ 97, 22,976 ರು.
ಚರಾಸ್ತಿ ಒಟ್ಟು ಮೌಲ್ಯ 2,26,90,000 ರು.ಒಟ್ಟು ನಗದು ಹಣ- 6,70,000 ರು.
ಬ್ಯಾಂಕ್ ಖಾತೆಯಲ್ಲಿರುವ ಹಣ, ನಿಶ್ಚಿತ ಠೇವಣಿ ಇತರೆ ಖರ್ಚು ಸೇರಿ 1,77,20,000 ರು.ಕಾನೂನು ಬದ್ಧ ಆದಾಯ 1,45,00,000 ರು.
1 ಕಾವೇರಿ ಸತ್ವದಲ್ಲಿ ಸೈಟ್ ನಂ.329-35,42,976 ರು.2 ಕಾವೇರಿ ಸತ್ವದಲ್ಲಿ ಸೈಟ್ ನಂ.330- 33 ಲಕ್ಷ ರು.
5 ಎಕ್ಸ್ ಯು ವಿ 700 ಎಎಸ್ 7 ಕಾರ್- 23 ಲಕ್ಷ ರು.ಒಟ್ಟು- 1,59,42,976 ರು.