ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ಗಂಗಾಮತ ಬೀದಿಯಲ್ಲಿ ಗಣೇಶಮೂರ್ತಿ ಕೂರಿಸಲು ವೇದಿಕೆ ನಿರ್ಮಾಣ ಮಾಡಲು ಮಣ್ಣು ತರಲು ಹೋಗಿದ್ದ ಶಿವು ಆಟೋದಲ್ಲಿ ವಾಪಸ್ ಬರುತ್ತಿದ್ದ ವೇಳೆ ಪಟ್ಟಣದ ಬೀರೇಶ್ವರ ದೇವಸ್ಥಾನ ರಸ್ತೆ ಬಳಿ ಭಾನುವಾರ ಮಧ್ಯಾಹ್ನ ಆಟೋ ಉರುಳಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ನಂತರ ಗಾಯಾಳುವಿಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ರಾತ್ರಿ ಸಾವನ್ನಪ್ಪಿದ್ದಾರೆ.
ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಗೂಡ್ಸ್ ಟೆಂಪೋ ಡಿಕ್ಕಿ: ಮುರಿದು ಬಿದ್ದ ವಿದ್ಯುತ್ ಕಂಬಗಳುಮಳವಳ್ಳಿ:
ತಾಲೂಕಿನ ಕಿರುಗಾವಲಿನಿಂದ ತಿ.ನರಸೀಪುರ ಕಡೆಗೆ ಹೊರಟಿದ್ದ ಗೂಡ್ಸ್ ಟೆಂಪೋ ಕಲ್ಕುಣಿ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಎರಡು ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದು ಕಂಬಗಳು ಮುರಿದು ಹೋಗಿದೆ. ಅಲ್ಲದೇ, ವಿದ್ಯುತ್ ತಂತಿಗಳು ಸಹ ತುಂಡಾಗಿ ಬಿದ್ದಿವೆ. ಘಟನೆಯಲ್ಲಿ ಟೆಂಪೋದಲ್ಲಿದ್ದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.