ಕೋಳಿ ಜೂಜು ಅಡ್ಡೆ ಮೇಲೆ ಪೊಲೀಸರ ದಾಳಿ: ಮೂವರ ಬಂಧನ

KannadaprabhaNewsNetwork |  
Published : Aug 26, 2025, 01:03 AM IST
25ಕೆಎಂಎನ್ ಡಿ23 | Kannada Prabha

ಸಾರಾಂಶ

ಶ್ರೀರಂಗಪಟ್ಟಣ ತಾಲೂಕಿನ ದೊಡ್ಡೇಗೌಡನಕೊಪ್ಪಲು ಗ್ರಾಮದ ಬಳಿ ಕೋಳಿ ಜೂಜು ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಪ್ರದೀಪ್, ಜಯಂತ್ ಹಾಗೂ ಉಲ್ಲಾಸ್ ಎಂಬುರನ್ನು ಬಂಧಿಸಲಾಗಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ದೊಡ್ಡೇಗೌಡನಕೊಪ್ಪಲು ಗ್ರಾಮದ ಬಳಿ ಕೋಳಿ ಜೂಜು ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ.

ಪ್ರಕರಣದಲ್ಲಿ ಪ್ರದೀಪ್, ಜಯಂತ್ ಹಾಗೂ ಉಲ್ಲಾಸ್ ಎಂಬುರನ್ನು ಬಂಧಿಸಲಾಗಿದೆ. ಬಂಧಿತರಿಂದ 7,600 ರು. ನಗದು, 12 ಬೈಕ್, ಒಂದು ಕಾರು, ಆಟೋವನ್ನು ಜಪ್ತಿ ಮಾಡಿದ್ದಾರೆ. ಜೂಜಿನಲ್ಲಿದ್ದ ಇನ್ನು 10 ಮಂದಿ ಸ್ಥಳದಿಂದ ಪರಾರಿಯಾಗಿದ್ದು, ಅವರಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

ಗ್ರಾಮದ ಕಾವೇರಿ ನದಿ ತೀರದ ಗೌತಮ ಕ್ಷೇತ್ರದ ಬಳಿ ಸಾರ್ವಜನಿಕ ರಸ್ತೆಯಲ್ಲಿ ಕೋಳಿ ಜೂಜು ನಡೆಯುವ ಖಚಿತ ಮಾಹಿತಿ ಪಡೆದ ಪೊಲೀಸರು ಏಕಾಏಕಿ ಕಾರ್ಯಾಚರಣೆ ಮಾಡಿದಾಗ ಪಾಂಡವಪುರದ ಕುಮಾರ್ ಎಂಬುವರು ಈ ಕೋಳಿ ಜೂಜು ಆಯೋಜನೆ ಮಾಡಿದ್ದು, ಪ್ರತಿ ವಾರ ಮಂಡ್ಯ, ಮೈಸೂರು, ರಾಮನಗರ, ಪಾಂಡವಪುರ ಸೇರಿದಂತೆ ಇತರೆಡೆಗಳಿಂದ ಜೂಜು ಕೋರರು ಆಗಮಿಸಿ ಜೂಜಿನಲ್ಲಿ ಭಾಗವಹಿ ಬಾರಿ ಹಣ ಕಟ್ಟಿ ಜೂಜಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಜೂಜಿನಲ್ಲಿದ್ದ ಕೋಳಿಗಳು ಪೊಲೀಸರ ವಶದಲ್ಲಿವೆ. ಕಾರ್ಯಾಚರಣೆಯಲ್ಲಿ ಸಿಪಿಐ ಬಿ.ಜಿ.ಕುಮಾರ್, ಪಿಎಸ್‌ಐ ಜನಭಾಯಿ, ಗಂಗಾಧರ್, ಎಎಸ್‌ಐ ಉದಯ್ ಶಂಕರ್, ಚಂದ್ರು, ಕೃಷ್ಣೇಗೌಡ, ಶ್ರೀನಿವಾಸ್ ಹಾಗೂ ಅಭಿಷೇಕ್ ಸೇರಿ ಇತರ ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಅಕ್ರಮ ಕೃತ್ಯಗಳಿಗೆ ‘ದಂಡ’ ವಿಧಿಸಿ ಮುಚ್ಚು ಹಾಕುತ್ತಿದ್ದ ಅಪಾರ್ಟ್ಮೆಂಟ್ ವಿರುದ್ಧ ಕೇಸು
ವಿವಾಹ ಪವಿತ್ರವಾದ ಶಾಶ್ವತ ಸಮ್ಮಿಲನ : ಹೈಕೋರ್ಟ್‌