3.20 ಕೋಟಿ ಹಣ ಪಡೆದು ನಟ ಧ್ರುವ ಸರ್ಜಾ ನಟನೆಯ ಚಲನಚಿತ್ರಕ್ಕೆ ಗ್ರಾಫಿಕ್ಸ್‌ ವಿನ್ಯಾಸ ಮಾಡಿ ಕೊಡದೆ ವಂಚನೆ: ಸೆರೆ

KannadaprabhaNewsNetwork |  
Published : Jul 19, 2024, 02:01 AM ISTUpdated : Jul 19, 2024, 05:02 AM IST
ಬಂಧನ | Kannada Prabha

ಸಾರಾಂಶ

ಹಣ ಪಡೆದು ನಟ ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಚಲನಚಿತ್ರಕ್ಕೆ ಗ್ರಾಫಿಕ್ಸ್‌ ವಿನ್ಯಾಸ ಮಾಡಿ ಕೊಡದೆ ₹3.20 ಕೋಟಿ ವಂಚಿಸಿದ ಆರೋಪದ ಮೇರೆಗೆ ಗ್ರಾಫಿಕ್ಸ್ ವಿನ್ಯಾಸಕರನೊಬ್ಬನ್ನು ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು :  ಹಣ ಪಡೆದು ನಟ ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಚಲನಚಿತ್ರಕ್ಕೆ ಗ್ರಾಫಿಕ್ಸ್‌ ವಿನ್ಯಾಸ ಮಾಡಿ ಕೊಡದೆ ₹3.20 ಕೋಟಿ ವಂಚಿಸಿದ ಆರೋಪದ ಮೇರೆಗೆ ಗ್ರಾಫಿಕ್ಸ್ ವಿನ್ಯಾಸಕರನೊಬ್ಬನ್ನು ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಹದೇವಪುರದ ಸತ್ಯರೆಡ್ಡಿ ಬಂಧಿತನಾಗಿದ್ದು, ಈ ವಂಚನೆ ಸಂಬಂಧ ಬಸವೇಶ್ವರನಗರ ಠಾಣೆಗೆ ಮಾರ್ಟಿನ್ ಚಲನಚಿತ್ರದ ನಿರ್ಮಾಪಕ ಉದಯ್‌ ಮೆಹ್ತಾ ದೂರು ನೀಡಿದ್ದರು. ಈ ವಂಚನೆ ಪ್ರಕರಣ ದಾಖಲಾದ ಬಳಿಕ ನಗರ ತೊರೆದು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿ ಪೊಲೀಸರು ಕರೆ ತಂದಿದ್ದಾರೆ.

ಧ್ರುವ ಸರ್ಜಾ ನಟನೆಯ ಮಾರ್ಟಿನ್‌ ಸಿನಿಮಾಗೆ ವಿಶೇಷ ಗ್ರಾಫಿಕ್ಸ್ ವಿನ್ಯಾಸಕ್ಕೆ ಸತ್ಯರೆಡ್ಡಿ ಜತೆ ನಿರ್ಮಾಪಕ ಮೆಹ್ತಾ ಒಪ್ಪಂದ ಮಾಡಿಕೊಂಡಿದ್ದು, ಅಂತೆಯೇ ಆತನಿಗೆ ₹3.20 ಕೋಟಿಯನ್ನು ಬ್ಯಾಂಕ್ ಮೂಲಕ ಮೆಹ್ತಾ ಪಾವತಿಸಿದ್ದರು. ಆದರೆ ಹಣ ಸ್ವೀಕರಿಸಿದ ಬಳಿಕ ಪೂರ್ವ ಒಪ್ಪಂದಂತೆ ಕೆಲಸ ಮಾಡದೆ ಸತ್ಯ ರೆಡ್ಡಿ ವಂಚಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಸರ್ಕಾರಕ್ಕೆ ಆರ್ಥಿಕ ನಷ್ಟ: ಸಹಾಯಕ ಎಂಜಿನಿಯರ್ ಅಮಾನತು
ಹುದ್ದೆಗಳ ಭರ್ತಿಗೆ ಯೋಜನೆ ರೆಡಿ ಇದೆ, ಧೈರ್‍ಯವಾಗಿರಿ: ಡಿಕೆ