ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣ ಸಮೀಪದ ಗಂಜಾಂನ ನಿಮಿಷಾಂಬ ರಸ್ತೆಯ ಆನಂದ ರೈಸ್ ಮಿಲ್ ಬಳಿಯ ಕಾವೇರಿ ನದಿ ಸ್ನಾನಘಟ್ಟದಲ್ಲಿ ಸುಮಾರು 34 ರಿಂದ 36ವರ್ಷ ವಯೋಮಾನದ ಯುವಕನ ಶವ ಪತ್ತೆಯಾಗಿದೆ.
ಕೊಲೆಯದ ಯುವಕನ ಮುಖ, ತಲೆ, ಕುತ್ತಿಗೆ ಭಾಗಗಳಿಗೆ ಮಚ್ಚು ಬೀಸಿರುವ ಗುರುತುಗಳಿವೆ. ಬೇರೆಡೆ ಕೃತ್ಯ ಎಸಗಿ ಮೈಸೂರು- ಬೆಂಗಳೂರು ಹೆದ್ದಾರಿಯ ಸೇತುವೆ ಮೇಲಿಂದ ಕಾವೇರಿ ನದಿಗೆ ತಂದು ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ.ವಿಷಯ ತಿಳಿದು ಸ್ಥಳಕ್ಕೆ ಇನ್ಸ್ ಪೆಕ್ಟರ್ ಬಿ.ಜಿ.ಕುಮಾರ್ ನೇತೃತ್ವದಲ್ಲಿ ಪೊಲೀಸರು ಹಾಗೂ ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ, ಅಪರ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್, ಡಿವೈಎಸ್ಪಿ ಯೂ.ಡಿ.ಕೃಷ್ಣಕುಮಾರ್ ಭೇಟಿ ನೀಡಿ ಸ್ಥಳೀಯ ಪೊಲೀಸರಿಂದ ಮಾಹಿತಿ ಪಡೆದ ಅಧಿಕಾರಿಗಳು ಮುಂದಿನ ತನಿಖೆ ಕೈಗೊಡಿದ್ದಾರೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣಎಡಮುರಿ ಪ್ರವಾಸಿ ತಾಣದಲ್ಲಿ ಪ್ರವಾಸಿಗರ ಮೊಬೈಲ್ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಕೆ.ಆರ್.ಸಾಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೈಸೂರು ಜಿಲ್ಲೆ ಬೆಳವಾಡಿ ಗ್ರಾಮದ ಪ್ರಕಾಶ್ ಬಂಧಿತ ಆರೋಪಿ.
ಎಸ್ಪಿ ಶೋಭರಾಣಿ, ಡಿವೈಎಸ್ಪಿ ಕೃಷ್ಣಕುಮಾರ್ ಮತ್ತು ಕೆ.ಆರ್.ಸಾಗರ ಪೊಲೀಸ್ ವೃತ್ತ ನಿರೀಕ್ಷಕ ವಿವೇಕನಂದ ಮಾರ್ಗದರ್ಶನದಲ್ಲಿ ಕೆ.ಆರ್.ಸಾಗರ ಪೊಲೀಸ್ ಠಾಣೆ ಪಿಎಸೈ ಜಗದೀಶ್ ಧೂಳ್‌ಶೆಟ್ಟರ್ ಮತ್ತು ಸಿಬ್ಬಂದಿ ಕಾರ್ಯಚರಣೆ ನಡೆಸಿ, ಆರೋಪಿಯಿಂದ ಸುಮಾರು 1.50 ಲಕ್ಷ ಮೌಲ್ಯದ ವಿವಿಧ ಕಂಪನಿಗಳ 13 ಮೊಬೈಲ್‌ಗಳನ್ನು ವಶ ಪಡಿಸಿಕೊಳ್ಳಲಾಗಿದೆ.