ಮೊದಲ ಪತ್ನಿ ಇರುವಾಗಲೇ 2ನೇ ಪತ್ನಿಗೆ ಜೀವನಾಂಶ ಸಲ್ಲದು: ಕೋರ್ಟ್‌

KannadaprabhaNewsNetwork |  
Published : Sep 11, 2026, 04:00 AM ISTUpdated : Sep 11, 2026, 05:00 AM IST
Karnataka High Court

ಸಾರಾಂಶ

ಮೊದಲ ಪತ್ನಿಯ ಜೊತೆಗಿನ ವಿವಾಹ ವಿಚ್ಛೇದನ ಆದೇಶಕ್ಕೆ ನ್ಯಾಯಾಲಯ ತಡೆ ನೀಡಿದ್ದ ಸಂದರ್ಭದಲ್ಲಿ ಎರಡನೇ ಪತ್ನಿಯು ಜೀವನಾಂಶ ಪಡೆಯುವ ಅರ್ಹತೆ ಹೊಂದಿರುವುದಿಲ್ಲ ಎಂದು ಹೈಕೋರ್ಟ್​ ಸ್ಪಷ್ಟಪಡಿಸಿದೆ.

ಬೆಂಗಳೂರು : ಮೊದಲ ಪತ್ನಿಯ ಜೊತೆಗಿನ ವಿವಾಹ ವಿಚ್ಛೇದನ ಆದೇಶಕ್ಕೆ ನ್ಯಾಯಾಲಯ ತಡೆ ನೀಡಿದ್ದ ಸಂದರ್ಭದಲ್ಲಿ ಎರಡನೇ ಪತ್ನಿಯು ಜೀವನಾಂಶ ಪಡೆಯುವ ಅರ್ಹತೆ ಹೊಂದಿರುವುದಿಲ್ಲ ಎಂದು ಹೈಕೋರ್ಟ್​ ಸ್ಪಷ್ಟಪಡಿಸಿದೆ.

ತಾನು ಎರಡನೇ ಪತ್ನಿಯಾಗಿದ್ದು, ಪತಿಯಿಂದ ಜೀವನಾಂಶ ಕೊಡಿಸಲು ನಿರಾಕರಿಸಿರುವ ಕೌಟುಂಬಿಕ ನ್ಯಾಯಾಲಯ ಆದೇಶದ ರದ್ದುಪಡಿಸುವಂತೆ ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಬಿ. ಗೀತಾ ಅವರ ಪೀಠ ಈ ಆದೇಶ ಮಾಡಿದೆ.

ಅಲ್ಲದೆ, ಅರ್ಜಿದಾರೆಯ ಪತಿಯ ಮೊದಲ ಪತ್ನಿಯ ವಿವಾಹ ವಿಚ್ಛೇದನ ಮಂಜೂರು ಮಾಡಿ ಕೌಟುಂಬಿಕ ನ್ಯಾಯಾಲಯ ಆದೇಶವನ್ನು ಹೈಕೋರ್ಟ್‌ ತಡೆಹಿಡಿದಿದೆ. ಇದರಿಂದ ಮೊದಲ ವಿವಾಹ ಜಾರಿಯಲ್ಲಿರುತ್ತದೆ. ಮೊದಲ ಮದುವೆ ಚಾಲ್ತಿಯಲ್ಲಿರುವುದು ಅರ್ಜಿದಾರೆಗೆ ತಿಳಿದಿತ್ತು. ಆದ್ದರಿಂದ ಮೊದಲ ಪತ್ನಿಯ ವಿವಾಹ ರದ್ಧತಿಗೆ ತಡೆ ಆದೇಶವಿರುವಾಗ ಅರ್ಜಿದಾರೆಯನ್ನು ಕಾನೂನುಬದ್ಧ ಪತ್ನಿ ಎಂದು ಪರಿಗಣಿಸಲು ಸಾಧ್ಯವಿಲ್ಲ. ಆಕೆಗೆ ಜೀವನಾಂಶ ಪಡೆಯುವ ಹಕ್ಕು ಇರುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಪ್ರಕರಣದ ವಿವರ:

ಅರ್ಜಿದಾರ ಮಹಿಳೆಯ ಪತಿಗೆ ಮತ್ತೋರ್ವಳೊಂದಿಗೆ ಮೊದಲ ವಿವಾಹವಾಗಿತ್ತು. ಆ ಮದುವೆಯನ್ನು ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ಮಂಜೂರು ಮಾಡಿತ್ತು. ಈ ನಡುವೆ ಅರ್ಜಿದಾರೆ ಮತ್ತು ಅರ್ಜಿಯಲ್ಲಿನ ಪ್ರತಿವಾದಿ ಪತಿ ಮದುವೆಯಾಗಿದ್ದರು. ಈ ಮದುವೆಗೆ ಮುನ್ನ ಪತಿ, ತನಗೆ ಈಗಾಗಲೇ ವಿವಾಹವಾಗಿದ್ದು, ಕೌಟುಂಬಿಕ ನ್ಯಾಯಾಲಯದಿಂದ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದುಕೊಂಡಿದ್ದೇನೆ ಎಂದು ತಿಳಿಸಿ, ಆದೇಶದ ಪ್ರತಿ ಸಹ ನೀಡಿ ವಿವರಿಸಿದ್ದರು. ಅದನ್ನು ಪರಿಶೀಲಿಸಿದ್ದ ಅರ್ಜಿದಾರರ ಕುಟುಂಬಸ್ಥರು ಎರಡನೇ ವಿವಾಹಕ್ಕೆ ಒಪ್ಪಿಕೊಂಡಿದ್ದರು.

ಹಿಂದೂ ಸಂಪ್ರದಾಯದ ಮೂಲಕ ವಿವಾಹ

ನಂತರ ಅರ್ಜಿದಾರ ಮಹಿಳೆ ಮತ್ತು ಪ್ರತಿವಾದಿ ಪತಿಯೊಂದಿಗೆ ಹಿಂದೂ ಸಂಪ್ರದಾಯದ ಮೂಲಕ ವಿವಾಹ ನಡೆದಿತ್ತು. ನಂತರ ಅರ್ಜಿದಾರೆಯೂ ಪತಿಯ ವಿರುದ್ಧ ಕೌಟುಂಬಿಕ ದೌರ್ಜನ್ಯ ಕೇಸು ದಾಖಲಿಸಿ, ವಿವಾಹದ ಬಳಿಕ ಎಂಟು ದಿನಗಳ ಕಾಲ ಪತಿಯ ಮನೆಯಲ್ಲಿದ್ದೆ. ಅಷ್ಟೂ ದಿನಗಳು ತನ್ನನ್ನು ಮನೆಯಲ್ಲಿ ಕೂಡಿ ಹಾಕಲಾಗಿತ್ತು. ಕಿಟಿಕಿಗಳನ್ನು ತೆಗೆಯದಂತೆ ನಿರ್ಬಂಧ ವಿಧಿಸಿ ಹಿಂಸೆ ನೀಡಲಾಗುತ್ತಿತ್ತು. ಆದ್ದರಿಂದ ಮನೆಯಿಂದ ಹೊರಬಂದಿದ್ದೇನೆ. ಜೀವನ ನಡೆಸಲು ಪತಿಯಿಂದ ಜೀವನಾಂಶ ಕೊಡಿಸುವಂತೆ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದನ್ನು ಕೌಟುಂಬಿಕ ನ್ಯಾಯಾಲಯ ವಜಾಗೊಳಿಸಿದ್ದರಿಂದ ಅರ್ಜಿದಾರ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಹೈಕೋರ್ಟ್‌ ಇದೀಗ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ವಿದೇಶಿ ಬಟ್ಟೆ ವ್ಯಾಪಾರಿ ಬಳಿ ₹18 ಕೋಟಿ ಡ್ರಗ್ಸ್!
ಬೆಂಗಳೂರು : ಕಾಣೆಯಾಗಿದ್ದ ವಿದ್ಯಾರ್ಥಿನಿ ಈಗ ಗರ್ಭಿಣಿಯಾಗಿ ಪತ್ತೆ