ದಕ್ಷಿಣ ಭಾರತದಲ್ಲೂ ಸಂಸತ್‌ ಅಧಿವೇಶನ ನಡೆಸಬೇಕು ಎಂಬ ಕೂಗು : ದಕ್ಷಿಣದ ಸಂಸದರಿಂದಲೇ ಅಸಪ್ವರ

KannadaprabhaNewsNetwork |  
Published : Dec 03, 2024, 12:31 AM ISTUpdated : Dec 03, 2024, 06:36 AM IST
Yaduveer

ಸಾರಾಂಶ

ದಕ್ಷಿಣ ಭಾರತದಲ್ಲೂ ಸಂಸತ್‌ ಅಧಿವೇಶನ ನಡೆಸಬೇಕು ಎಂಬ ಕೂಗು ಕೇಳಿಬಂದಿದೆ.   ವೈಎಸ್ಸಾರ್‌ ಕಾಂಗ್ರೆಸ್ ಸಂಸದ ಮದ್ದಿಲ ಗುರುಮೂರ್ತಿ ಈ ಬೇಡಿಕೆ ಇರಿಸಿದ್ದು, ವರ್ಷಕ್ಕೆ ಕನಿಷ್ಠ 2 ಅಧಿವೇಶನಗಳನ್ನು ದಕ್ಷಿಣದಲ್ಲಿ ನಡೆಸಬೇಕು ಆಗ್ರಹಿಸಿ ಕೇಂದ್ರ ಸಂಸದೀಯ ಸಚಿವ ಕಿರಣ್‌ ರಿಜಿಜು ಅವರಿಗೆ ಪತ್ರ ಬರೆದಿದ್ದಾರೆ.

ನವದೆಹಲಿ: ದಕ್ಷಿಣ ಭಾರತದಲ್ಲೂ ಸಂಸತ್‌ ಅಧಿವೇಶನ ನಡೆಸಬೇಕು ಎಂಬ ಕೂಗು ಕೇಳಿಬಂದಿದೆ. ಆಂಧ್ರಪ್ರದೇಶದ ವೈಎಸ್ಸಾರ್‌ ಕಾಂಗ್ರೆಸ್ ಸಂಸದ ಮದ್ದಿಲ ಗುರುಮೂರ್ತಿ ಈ ಬೇಡಿಕೆ ಇರಿಸಿದ್ದು, ವರ್ಷಕ್ಕೆ ಕನಿಷ್ಠ 2 ಅಧಿವೇಶನಗಳನ್ನು ದಕ್ಷಿಣದಲ್ಲಿ ನಡೆಸಬೇಕು ಆಗ್ರಹಿಸಿ ಕೇಂದ್ರ ಸಂಸದೀಯ ಸಚಿವ ಕಿರಣ್‌ ರಿಜಿಜು ಅವರಿಗೆ ಪತ್ರ ಬರೆದಿದ್ದಾರೆ.

ಆದರೆ ಇದರ ಬೆನ್ನಲ್ಲೇ ದಕ್ಷಿಣದ ಸಂಸದರಿಂದಲೇ ಇದಕ್ಕೆ ಅಸಪ್ವರ ವ್ಯಕ್ತವಾಗಿದೆ. ಮೈಸೂರು ಸಂಸದ ಯದುವೀರ ಒಡೆಯರ್‌, ಈ ಪ್ರಸ್ತಾಪ ವಿರೋಧಿಸಿ, ‘ಸಂಸತ್‌ ಕಲಾಪ ನಡೆಸುವುದಕ್ಕೆ ಇಡೀ ಸರ್ಕಾರಿ ತಂತ್ರವನ್ನೇ ದಕ್ಷಿಣಕ್ಕೆ ಸ್ಥಳಾಂತರ ಮಾಡಬೇಕಾಗುತ್ತದೆ. ಇದು ತುಂಬಾ ಕ್ಲಿಷ್ಟಕರ ಪ್ರಕ್ರಿಯೆ ಹಾಗೂ ಸಮಯ ವ್ಯರ್ಥಕ್ಕೆ ಕಾರಣವಾಗುತ್ತದೆ’ ಎಂದಿದ್ದಾರೆ.

ಗುರುಮೂರ್ತಿ ವಾದವೇನು?:

‘ದೆಹಲಿಯಲ್ಲಿನ ಹವಾಮಾನ ವೈಪರೀತ್ಯದ ಸಂದರ್ಭದಲ್ಲಿ ಸಂಸದರು ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಹಾಗೂ ರಾಷ್ಟ್ರೀಯ ಏಕೀಕರಣವನ್ನು ಬಲಪಡಿಸುವ ವಿಶಾಲ ಗುರಿ ದೃಷ್ಟಿಕೋನದೊಂದಿಗೆ ದಕ್ಷಿಣದಲ್ಲೂ ವರ್ಷಕ್ಕೆ 2 ಸಂಸತ್‌ ಅಧಿವೇಶನ ನಡೆಸಬೇಕು’ ಎಂದು ವೈಎಸ್ಸಾರ್‌ ಕಾಂಗ್ರೆಸ್‌ ಸಂಸದ ಗುರುಮೂರ್ತಿ ಕೋರಿದ್ದಾರೆ.

ಒಡೆಯರ್‌ ಹೇಳಿದ್ದೇನು?:

ಗುರುಮೂರ್ತಿ ಆಗ್ರಹಕ್ಕೆ ಎನ್‌ಡಿಟೀವಿ ಮುಂದೆ ಪ್ರತಿಕ್ರಿಯಿಸಿದ ಮೈಸೂರು ಬಿಜೆಪಿ ಸಂಸದ ಒಡೆಯರ್, ‘ರಾಷ್ಟ್ರ ನಿರ್ಮಾಣ ಎಂಬುದು ಒಂದು ಉದಾತ್ತ ಪ್ರಕ್ರಿಯೆಯಾಗಿದೆ. ಅಸ್ತಿತ್ವದಲ್ಲಿರುವ ಚೌಕಟ್ಟಿನಲ್ಲೇ ರಾಷ್ಟ್ರನಿರ್ಮಾಣ ನಡೆದಿದೆ. ಇನ್ನು ಉತ್ತರದ ಹವಾಮಾನಕ್ಕೆ ಸಂಬಂಧಿಸಿ ಗುರುಮೂರ್ತಿ ಪ್ರಶ್ನೆ ಎತ್ತಿದ್ದಾರೆ. ನಾವು ಕಲಾಪ ನಡೆಸುವುದು ಸಂಸತ್ತಿನ 4 ಗೋಡೆಗಳ ನಡುವೆ. ಅಲ್ಲಿ ಸಮಸ್ಯೆ ಆಗದಂತೆ ಎಲ್ಲ ಮುನ್ನೆಚ್ಚರಿಕೆ ವಹಿಸಲಾಗಿದೆ. ಹೀಗಾಗಿ ದಕ್ಷಿಣದಲ್ಲಿ ಅಧಿವೇಶನ ನಡೆಸಿ ಎಂಬ ಕೋರಿಕೆ ಸ್ವೀಕಾರಾರ್ಹವಲ್ಲ’ ಎಂದರು.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಶಾಸಕ ಬೈರತಿಗೆ ಕಂಟಕವಾದ ಕುಂಭಮೇಳ ಯಾತ್ರೆ!
5 ಜಿಲ್ಲೆಗಳಿಗೆ 2 ದಿನ ಶೀತ ಅಲೆ ರೆಡ್‌ ಅಲರ್ಟ್‌