ಹಿಂದಿನಿಂದ ಖಾಸಗಿ ಬಸ್ ಡಿಕ್ಕಿ : ಕಾರು ಬಾಲಕ, ಮಹಿಳೆ ಪಾರು..!

KannadaprabhaNewsNetwork |  
Published : Nov 08, 2025, 01:30 AM IST
Accident

ಸಾರಾಂಶ

  ಪಂಚರ್ ಆಗಿ ನಿಂತಿದ್ದ ಕಾರಿಗೆ ಖಾಸಗಿ ಬಸ್ ಹಿಂದಿನಿಂದ ಡಿಕ್ಕಿ ಮಾಡಿದ ಪರಿಣಾಮ ಕೇರಳ ಮೂಲದ ಓರ್ವ ಬಾಲಕ, ಮಹಿಳೆ ಗಾಯಗೊಂಡು ಚಾಲಕ ಆಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮದ್ದೂರು ತಾಲೂಕಿನ ಅಗರಲಿಂಗನ ದೊಡ್ಡಿ ಗ್ರಾಮದ ಬೆಂಗಳೂರು, ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಜರುಗಿದೆ.

 ಮದ್ದೂರು :  ಹೆದ್ದಾರಿ ಬದಿ ಪಂಚರ್ ಆಗಿ ನಿಂತಿದ್ದ ಕಾರಿಗೆ ಖಾಸಗಿ ಬಸ್ ಹಿಂದಿನಿಂದ ಡಿಕ್ಕಿ ಮಾಡಿದ ಪರಿಣಾಮ ಕೇರಳ ಮೂಲದ ಓರ್ವ ಬಾಲಕ, ಮಹಿಳೆ ಗಾಯಗೊಂಡು ಚಾಲಕ ಆಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಾಲೂಕಿನ ಅಗರಲಿಂಗನ ದೊಡ್ಡಿ ಗ್ರಾಮದ ಬೆಂಗಳೂರು, ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಮುಂಜಾನೆ ಜರುಗಿದೆ. ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ನವನೀತನ್, ಗಿರಿಯನ್, ಈತನ ಪತ್ನಿ ಶೈಲಾ ಗಾಯಗೊಂಡಿದ್ದು, ಮಂಡ್ಯ ಡಿಆರ್‌ಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರು ಚಾಲನೆ ಮಾಡುತ್ತಿದ್ದ ಗಿರೀಶನ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗಾಯಾಳುಗಳು ಮತ್ತು ಕಾರು ಚಾಲಕ ಕೇರಳದಿಂದ ಬೆಂಗಳೂರಿಗೆ ತೆರಳುತ್ತಿದ್ದರು. ಅಗರಲಿಂಗದೊಡ್ಡಿ ಬಳಿಯ ಹೆದ್ದಾರಿಯಲ್ಲಿ ಮುಂಜಾನೆ 6:30ರ ಸಮಯದಲ್ಲಿ ಕಾರಿನ ಟೈಯರ್ ಪಂಚರ್ ಆದ ಕಾರಣ ರಸ್ತೆ ಬದಿ ನಿಲ್ಲಿಸಿ ಪರಿಶೀಲನೆ ನಡೆಸುತ್ತಿದ್ದ ವೇಳೆ ಮೈಸೂರು ಕಡೆಯಿಂದ ವೇಗವಾಗಿ ಬಂದ ನ್ಯಾಷನಲ್ ಟ್ರಾವೆಲ್ಸ್ ಸಂಸ್ಥೆ ಬಸ್ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಈ ಸಂಬಂಧ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಾಹನ ಡಿಕ್ಕಿ: ಅಪರಿಚಿತ ವ್ಯಕ್ತಿ ಸ್ಥಳದಲ್ಲೇ ಸಾವು

ಮದ್ದೂರು:  ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯ ತಾಲೂಕಿನ ಅಗರಲಿಂಗನ ದೊಡ್ಡಿ ಮತ್ತು ರುದ್ರಾಕ್ಷಿಪುರ ನಡುವಿನ ಸರ್ವಿಸ್ ರಸ್ತೆಯಲ್ಲಿ ವಾಹನ ವೂಂದು ಡಿಕ್ಕಿ ಹೊಡೆದು ಅಪರಿಚಿತ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸೋಮವಾರ ಮುಂಜಾನೆ ಜರುಗಿದೆ. ವಾಹನ ಡಿಕ್ಕಿ ಹೊಡೆದ ರಭಸಕ್ಕೆ ತಲೆ ಕೈ ಕಾಲುಗಳಿಗೆ ತೀವ್ರವಾಗಿ ಬಿದ್ದ ಪೆಟ್ಟಿನಿಂದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತನು ದುಂಡು ಮುಖ, ಗೋದಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದಾನೆ. ಈತನ ಮೈಮೇಲೆ ಸಿಮೆಂಟ್ ಬಣ್ಣದ ಸ್ವೆಟರ್, ಕಂದು ಬಣ್ಣದ ಅಂಡರ್ವೇರ್ ಧರಿಸಿದ್ದು, ಕುತ್ತಿಗೆಯಲ್ಲಿ ತಾಯತ ಇರುತ್ತದೆ. ಮೃತರ ಬಗ್ಗೆ ವಾರಸುದಾರರು ಇದ್ದಲ್ಲಿ ಮದ್ದೂರು ಸಂಚಾರಿ ಠಾಣೆಗೆ ಮಾಹಿತಿ ನೀಡಲು ಕೋರಲಾಗಿದೆ. 

ವೃತ್ತ ನಿರೀಕ್ಷಕರಾಗಿ ನವೀನ್ ಅಧಿಕಾರ ಸ್ವೀಕಾರ

ಮದ್ದೂರು: ಪಟ್ಟಣ ಠಾಣೆ ನೂತನ ವೃತ್ತ ನಿರೀಕ್ಷಕರಾಗಿ ಎಚ್.ಎಸ್.ನವೀನ ಶುಕ್ರವಾರ ಅಧಿಕಾರ ವಹಿಸಿಕೊಂಡರು.

ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರದ ಡಿಸಿಆರ್‌ಬಿಯಲ್ಲಿ ಪೋಲಿಸ್ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ನವೀನ ಅವರನ್ನು ಹಿಂದಿನ ವೃತ್ತ ನಿರೀಕ್ಷಕ ಶಿವಕುಮಾರ್ ಅವರ ತೆರವಾದ ಸ್ಥಾನಕ್ಕೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಶುಕ್ರವಾರ ಸಂಜೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರನ್ನು ಭೇಟಿ ಮಾಡಿ ದ ನಂತರ ಠಾಣೆಗೆ ಹಾಜರಾಗಿ ಅಧಿಕಾರ ವಹಿಸಿಕೊಂಡರು.

PREV
Read more Articles on

Recommended Stories

ಮದ್ಯದ ಅಮಲಿನಲ್ಲಿ ಜಗಳ: ಬಿಯರ್‌ ಬಾಟಲಿಯಲ್ಲಿ ಹೊಡೆದು ಸ್ನೇಹಿತನನ್ನು ಕೊಂದ
ಅನೈತಿಕ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಹಲ್ಲೆ ನಡೆಸಿ ಪ್ರಿಯತಮೆಯ ಕೊಂದ ಚಾಲಕ