ತೆಲುಗು ಸಿನಿಮಾ ನಟನ ಜೊತೆಗೆ ರನ್ಯಾ ನಂಟು - ‘ನಟ ನಟಿಯರು ಕೊರಿಯರ್‌’ ಮಾತಿಗೆ ಮತ್ತಷ್ಟು ಪುಷ್ಟಿ

ಸಾರಾಂಶ

ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧಿತ ಏಟ್ರಿಯಾ ಹೋಟೆಲ್‌ ಮಾಲೀಲಿಕರ ಮೊಮ್ಮಗ ತರುಣ್ ರಾಜ್‌ಗೂ ಚಲನಚಿತ್ರರಂಗದ ನಂಟಿರುವುದು ಬೆಳಕಿಗೆ ಬಂದಿದೆ. ಈ ಮೂಲಕ ಚಿನ್ನ ಕಳ್ಳ ಸಾಗಣೆ ಜಾಲದಲ್ಲಿ ಸಿನಿಮಾ ನಟ-ನಟಿಯರು ಕೊರಿಯರ್‌ಗಳಾಗಿ ಬಳಕೆಯಾಗಿರುವ ಮಾತಿಗೆ ಪುಷ್ಟಿ ಸಿಕ್ಕಂತಾಗಿದೆ.

 ಬೆಂಗಳೂರು : ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧಿತ ಏಟ್ರಿಯಾ ಹೋಟೆಲ್‌ ಮಾಲೀಲಿಕರ ಮೊಮ್ಮಗ ತರುಣ್ ರಾಜ್‌ಗೂ ಚಲನಚಿತ್ರರಂಗದ ನಂಟಿರುವುದು ಬೆಳಕಿಗೆ ಬಂದಿದೆ. ಈ ಮೂಲಕ ಚಿನ್ನ ಕಳ್ಳ ಸಾಗಣೆ ಜಾಲದಲ್ಲಿ ಸಿನಿಮಾ ನಟ-ನಟಿಯರು ಕೊರಿಯರ್‌ಗಳಾಗಿ ಬಳಕೆಯಾಗಿರುವ ಮಾತಿಗೆ ಪುಷ್ಟಿ ಸಿಕ್ಕಂತಾಗಿದೆ.

2018ರ ತೆಲುಗಿನ ‘ಪರಿಚಯಂ’ ಚಿತ್ರದಲ್ಲಿ ವಿರಾಟ್ ಕೊಂಡುರು ರಾಜು ಹೆಸರಿನಿಂದ ಬೆಳ್ಳಿ ಪರೆದೆಗೆ ತರುಣ್ ಪ್ರವೇಶ ಪಡೆದಿದ್ದ. ನಂತರ ನಾಲ್ಕೈದು ಸಿನಿಮಾಗಳಲ್ಲೂ ನಟಿಸಿದ್ದ. ಆದರೆ ಆತನಿಗೆ ಯಶಸ್ಸು ಸಿಕ್ಕಿರಲಿಲ್ಲ. ತೆಲುಗು ಚಿತ್ರಗಳಲ್ಲಿ ನಟಿಸುವಾಗಲೇ ಆತನಿಗೆ ಡಿಜಿಪಿ ಮಲ ಮಗಳು ರನ್ಯಾರಾವ್ ಪರಿಚಯವಾಗಿತ್ತು ಎಂಬ ಮಾತುಗಳು ಕೇಳಿ ಬಂದಿವೆ.

ರನ್ಯಾ ಪತಿಯ ಮನೆಯ ಮೇಲೆ ಡಿಆರ್‌ಐ ರೈಡ್‌

ಚಿನ್ನ ಕಳ್ಳ ಸಾಗಣೆ ಪ್ರಕರಣ ಸಂಬಂಧ ನಟಿ ರನ್ಯಾರಾವ್‌ ಅವರ ಜತಿನ್‌ ಅವರಿಗೆ ಡಿಆರ್‌ಐ ತನಿಖೆ ಬಿಸಿ ಮತ್ತೆ ತಟ್ಟಿದ್ದು, ಕೋರಮಂಗಲದ ಫೋರಂ ಮಾಲ್ ಸಮೀಪದ ಅವರ ಮನೆ ಮೇಲೆ ದಾಳಿ ನಡೆಸಿ ಡಿಆರ್‌ಐ ಅಧಿಕಾರಿಗಳು ಗುರುವಾರ ತಪಾಸಣೆ ನಡೆಸಿದ್ದಾರೆ. ಈ ವೇಳೆ ಕೆಲ ದಾಖಲೆಗಳು ಹಾಗೂ ಹಣ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

Share this article