ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಹಾಲಹಳ್ಳಿ ಲೇಬರ್ ಕಾಲೋನಿಯ ಮುಸ್ಲಿಂ ಬ್ಲಾಕ್ ಹತ್ತನೇ ಕ್ರಾಸ್‌ನ ಸಲ್ಮಾನ್ ಪಾಷಾ ಶಿಕ್ಷೆಗೊಳಗಾದ ಆರೋಪಿ. ಸಲ್ಮಾನ್ ಪಾಷಾ ಬಡಾವಣೆಯ ಬಾಲಕಿ ಶಾಲೆಗೆ ಮತ್ತು ಟ್ಯೂಷನ್‌ಗೆ ಹೋಗುವಾಗ ಮತ್ತು ಬರುವಾಗ ಆಕೆಯನ್ನು ಹಿಂಬಾಲಿಸಿಕೊಂಡು ಹೋಗಿ ತಿಂಡಿ ಕೊಟ್ಟು ಮಾತನಾಡಿಸುತ್ತಿದ್ದನು ಎನ್ನಲಾಗಿದೆ.
ಬಾಲಕಿ ಪ್ರತಿದಿನ ಸಂಜೆ ಟ್ಯೂಷನ್‌ಗೆ ಹೋಗುವಾಗ ಆರೋಪಿಯು ಬಾಲಕಿಯನ್ನು ಯಾರೂ ಇಲ್ಲದ ಸಮಯದಲ್ಲಿ ತನ್ನ ರೂಂಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. 2022ನೇ ಜುಲೈ 3ರಂದು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗುವ ಉದ್ದೇಶದಿಂದ ಮಧ್ಯರಾತ್ರಿ ಬಾಲಕಿಯ ಮನೆಯ ಕಾಂಪೌಂಡ್ ಒಳಗೆ ಅಕ್ರಮ ಪ್ರವೇಶ ಮಾಡಿ ಕಿಟಕಿಯ ಮೂಲಕ ಆಕೆಯನ್ನು ಕೂಗಿ ಎಬ್ಬಿಸಿ ಮನೆಯಿಂದ ಹೊರಗೆ ಕರೆದು, ನಂತರ ಲಿಫ್ಟ್ ಕೊಡುವುದಾಗಿ ಹೇಳಿ ಪುಸಲಾಯಿಸಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯವೆಸಗಿರುವುದು ದೃಢಪಟ್ಟಿದೆ.ಪ್ರಕರಣ ಕುರಿತಂತೆ ದೂರು ದಾಖಲಾದ ನಂತರ ಭಾರತೀಯ ದಂಡ ಸಂಹಿತೆ 354(ಡಿ), 366, 378(ಎಬಿ), 376(೨)(ಎನ್) ಐಪಿಸಿ ಕಲಂ 6, 12 ಪೋಕೋ ಕಾಯಿದೆ ಅಡಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿ ಅಂದಿನ ಇನ್ಸ್‌ಪೆಕ್ಟರ್ ಎಸ್.ಕೆ.ಕೃಷ್ಣ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ವಿಶೇಷ ಸರ್ಕಾರಿ ಅಭಿಯೋಜಕ ಹೆಬ್ಬಕವಾಡಿ ನಾಗರಾಜು ಸಂತ್ರಸ್ತ ಯುವತಿಯ ಪರ ವಾದ ಮಂಡಿಸಿದ್ದರು.