;Resize=(412,232))
ಬೆಂಗಳೂರು : ಪ್ರಿಯಕರನ ಲೈಂ*ಕ ಕಿರುಕುಳದಿಂದ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹಾಸನ ಮೂಲದ ಅಚಲಾ (22) ಆತ್ಮ*ತ್ಯೆಗೆ ಶರಣಾದವರು. ಈಕೆ ಸ್ಯಾಂಡಲ್‌ವುಡ್ ಖ್ಯಾತ ನಟಿಯೊಬ್ಬರ ಸಂಬಂಧಿ ಎಂದು ತಿಳಿದು ಬಂದಿದೆ. ನ.21ರಂದು ಪುಟ್ಟೇನಹಳ್ಳಿಯ ಪಾಂಡುರಂಗ ನಗರದ ಸಂಬಂಧಿಕರ ಮನೆಯಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೃತಳ ಪೋಷಕರು ನೀಡಿದ ದೂರಿನ ಮೇರೆಗೆ ಮೃತಳ ಪ್ರಿಯಕರ ಮಾಯಾಂಕ್ ಮತ್ತು ಆತನ ತಾಯಿ ಮೈನಾ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.
ಅಚಲಾ ಎಂಜಿನಿಯರಿಂಗ್ ಪದವಿಧರೆಯಾಗಿದ್ದು, ಉದ್ಯೋಗದ ಹುಡುಕಾಟದಲ್ಲಿದ್ದರು. ಕೆಲ ತಿಂಗಳಿಂದ ಪುಟ್ಟೇನಹಳ್ಳಿಯ ಪಾಂಡುರಂಗನಗರದ ಸಂಬಂಧಿಕರ ಮನೆಯಲ್ಲಿ ನೆಲೆಸಿದ್ದರು. ಈ ನಡುವೆ ದೂರದ ಸಂಬಂಧಿ ಮಾಯಾಂಕ್ ಮತ್ತು ಅಚಲಾ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರು ಹಲವು ಕಡೆ ಸುತ್ತಾಡಿದ್ದರು. ಮಾಯಾಂಕ್ ಮದುವೆಗೂ ಮುನ್ನ ದೈಹಿಕ ಸಂಪರ್ಕ ಬೆಳೆಸಲು ಅಚಲಾಗೆ ಪೀಡಿಸುತ್ತಿದ್ದ. ಇದಕ್ಕೆ ಅಚಲಾ ನಿರಾಕರಿಸಿದ್ದರು. ಈ ವಿಚಾರವಾಗಿ ಮಾಯಾಂಕ್, ಅಚಲಾ ಮೇಲೆ ದೈಹಿಕ ಹಲ್ಲೆ ಸಹ ನಡೆಸಿದ್ದ ಎನ್ನಲಾಗಿದೆ. ಈತನ ಕಿರುಕುಳ ಹೆಚ್ಚಾದ ಹಿನ್ನೆಲೆಯಲ್ಲಿ ಮಾಯಾಂಕ್ ತಾಯಿ ಮೈನಾಗೆ ವಿಚಾರ ತಿಳಿಸಿದಾಗ ಆಕೆ ಕೂಡ ಅಚಲಾಳನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು ಎನ್ನಲಾಗಿದೆ.
ಇತ್ತೀಚೆಗೆ ಮಾಯಾಂಕ್, ಅಚಲಾಗೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದ. ನಾನು ಬೇರೆ ಯುವತಿ ಜತೆಗೆ ಮದುವೆಯಾಗಲು ತೀರ್ಮಾನಿಸಿದ್ದೇನೆ. ಇದಕ್ಕೆ ತನ್ನ ತಾಯಿಯ ಒಪ್ಪಿಗೆ ಸಹ ಇದೆ ಎಂದು ಹೇಳಿದ್ದ ಎನ್ನಲಾಗಿದೆ. ಇದರಿಂದ ಅಚಲಾ ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದರು. ಹೀಗಾಗಿ ಆಕೆಯ ಪೋಷಕರು ಪಾಂಡುರಂಗ ನಗರದ ಸಂಬಂಧಿಕರ ಮನೆಯಲ್ಲಿ ಆಕೆಯನ್ನು ಬಿಟ್ಟಿದ್ದರು. ನ.21ರಂದು ಅಚಲಾ ನೇಣು ಬಿಗಿದುಕೊಂಡು ಆತ್ಮ*ತ್ಯೆ ಮಾಡಿಕೊಂಡಿದ್ದಾರೆ.
ಮಾಯಾಂಕ್ ವಿರುದ್ಧ ದೂರು:
ಪುತ್ರಿಯ ಆತ್ಮ*ತ್ಯೆಗೆ ಮಾಯಾಂಕ್ ಮತ್ತು ಆತನ ತಾಯಿ ಕಿರುಕುಳ, ನಿಂದನೆ, ಪ್ರಚೋದನೆಯೇ ಕಾರಣ ಎಂದು ಅಚಲಾಳ ಪೋಷಕರು ಆರೋಪಿಸಿದ್ದಾರೆ. ಈ ಸಂಬಂಧ ಮಾಯಾಂಕ್ ಮತ್ತು ಆತನ ತಾಯಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ. ಈ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.