ರೇಣುಕಾಸ್ವಾಮಿ ಕೊಲೆ ಕೇಸ್- ದರ್ಶನ್‌ಗೆ ಡಬಲ್ ಶಾಕ್ : 14 ದಿನ ನ್ಯಾಯಾಂಗ ಬಂಧನದಲ್ಲಿ

Published : Jul 19, 2024, 10:20 AM IST
darshan jail

ಸಾರಾಂಶ

ಎಲ್ಲರಿಗೂ ಆಗಸ್ಟ್ 1ರ ತನಕ ನ್ಯಾಯಾಂಗ ಬಂಧನ ಮುಂದುವರಿಯಲಿದೆ. ಈ ಮೂಲಕ ದರ್ಶನ್ ಮತ್ತೆ ಹಿನ್ನೆಡೆಯಾಗಿದ್ದು ದರ್ಶನ್ಗೆ ದೊಡ್ಡ ನಿರಾಸೆ ಎದುರಾಗಿದೆ

ಬೆಂಗಳೂರು :  ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ  ದರ್ಶನ್ ಗ್ಯಾಂಗ್‌ಗೆ ಅವರ ನ್ಯಾಯಾಂಗ ಬಂಧನವನ್ನು ಮತ್ತೆ 14 ದಿನಗಳ ಕಾಲ ವಿಸ್ತರಣೆ ಮಾಡಲಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ   ಆರೋಪಿಗಳ ನ್ಯಾಯಾಂಗ ಬಂಧನದ  ಅವಧಿ ಮುಕ್ತಾಯವಾದ ಹಿನ್ನೆಲೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ವಿಡಿಯೋ ಕಾನ್ಫರೆನ್ಸ್ ಮೂಲಕ ದರ್ಶನ್ , ಪವಿತ್ರಾ ಗೌಡ ಹಾಗೂ ಇನ್ನುಳಿದ ಆರೋಪಿಗಳು ಹಾಜರಾಗಿದ್ದರು. 

ಎಲ್ಲರಿಗೂ ಆಗಸ್ಟ್ 1ರ ತನಕ ನ್ಯಾಯಾಂಗ ಬಂಧನ ಮುಂದುವರಿಯಲಿದೆ. ಈ ಮೂಲಕ ದರ್ಶನ್ ಮತ್ತೆ ಹಿನ್ನೆಡೆಯಾಗಿದ್ದು ದರ್ಶನ್ಗೆ ದೊಡ್ಡ ನಿರಾಸೆ ಎದುರಾಗಿದೆ. ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬಾತನನ್ನು ಪವಿತ್ರಗೌಡಾಗೆ ಅಶ್ಲೀಲ ಮೆಸೇಜ್ ಕಳುಹಿಡಿದ ಎಂಬ ಕಾರಣಕ್ಕೆ ಬೆಂಗಳೂರಿಗೆ ಕರೆದುಕೊಂಡು ಬಂದು, ಕೊಲೆ ಮಾಡಿದ ಆರೋಪದಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿ 17 ಜನರು ಜೈಲು ಪಾಲಾಗಿದ್ದಾರೆ. 

ಆದಷ್ಟು ಬೇಗ ಜಾಮೀನು ಪಡೆಯಬೇಕು ಎಂದು ದರ್ಶನ್ ಪ್ರಯತ್ನಿಸುತ್ತಿದ್ದಾರೆ. ಆದರೆ ಇದು ಕೊಲೆ ಪ್ರಕರಣ ಆದ್ದರಿಂದ ಅವರಿಗೆ ಜಾಮೀನು ಪಡೆಯುವುದು ಕಷ್ಟವಾಗಿದೆ. ಇನ್ನೂ 14 ದಿನಗಳ ಕಾಲ ಅವರು ಜೈಲಿನಲ್ಲಿ ಕಾಲ ಕಳೆಯುವುದು ಅನಿವಾರ್ಯ ಆಗಿದೆ. ದರ್ಶನ್‌ಗೆ ಮತ್ತೆ ಜೈಲೂಟವೇ ಫಿಕ್ಸಾಗಿದೆ. ಇದು ಅವರ ಅಭಿಮಾನಿಗಳಿಗೂ ನುಂಗಲಾರದ ತುತ್ತಾಗಿದೆ. ನ್ಯಾಯಾಂಗ ಬಂಧನ ಅವಧಿ ವಿಸ್ತರಣೆಗೂ ಮುನ್ನವೇ ಹೈಕೋರ್ಟ್‌ನಲ್ಲಿ ದರ್ಶನ್ ಅವರಿಗೆ ನಿರಾಸೆಯಾಗಿದೆ.

PREV

Recommended Stories

ಸೈಬರ್‌ ಕ್ರೈಂ ಭೇದಿಸುವುದು ಬಹುದೊಡ್ಡ ಸವಾಲು: ಪರಮೇಶ್ವರ್‌ ಅಸಹಾಯಕತೆ
ಬ್ಯಾಡರಹಳ್ಳಿ ಬಳಿ ವಿದ್ಯುತ್‌ ತಂತಿ ಕಟ್‌: 3 ಉಪ ಕೇಂದ್ರ ವ್ಯಾಪ್ತಿ ಪವರ್‌ ಸ್ಥಗಿತ