ಪ್ರಜ್ವಲ್‌ ಕೇಸ್‌ ಸಂತ್ರಸ್ತೆಯರಿಂದ ಆತ್ಮಹತ್ಯೆ ಬೆದರಿಕೆ: ಮೂಲಗಳು

Published : May 03, 2024, 09:11 AM IST
Prajwal Revanna

ಸಾರಾಂಶ

ಸಂಸದ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾಗುತ್ತಿರುವ ಅಶ್ಲೀಲ ವಿಡಿಯೋಗಳಲ್ಲಿರುವ ಮಹಿಳೆಯರನ್ನು ಸಂಪರ್ಕಿಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ಹರಸಾಹಸ ಪಡುತ್ತಿದ್ದು, ಭೇಟಿ ಮಾಡಲು ಯತ್ನಿಸಿದ ವೇಳೆ ತಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಹಾಸನ: ಸಂಸದ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾಗುತ್ತಿರುವ ಅಶ್ಲೀಲ ವಿಡಿಯೋಗಳಲ್ಲಿರುವ ಮಹಿಳೆಯರನ್ನು ಸಂಪರ್ಕಿಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ಹರಸಾಹಸ ಪಡುತ್ತಿದ್ದು, ಭೇಟಿ ಮಾಡಲು ಯತ್ನಿಸಿದ ವೇಳೆ ತಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ತಿಳಿದು ಬಂದಿದೆ. 

ವಿಡಿಯೋದಲ್ಲಿರುವ ಬಹುತೇಕ ಮಹಿಳೆಯರು ಎಸ್‌ಐಟಿ ತಂಡದ ಸಿಬ್ಬಂದಿ ತಮ್ಮನ್ನು ಸಂಪರ್ಕಿಸಲು ಯತ್ನಿಸಿದಾಗ, ‘ತಾವು ಎಲ್ಲಿಗೂ ಬರುವುದಿಲ್ಲ. ನೀವ್ಯಾರೂ ನಮ್ಮನ್ನು ಸಂಪರ್ಕಿಸಬೇಡಿ. ನಾವು ಯಾವ ಹೇಳಿಕೆಯನ್ನೂ ಕೊಡುವುದಿಲ್ಲ. ನಮ್ಮ ಮೇಲೆ ಒತ್ತಡ ಹಾಕಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’ ಎಂದು ಬೆದರಿಕೆ ಹಾಕುತ್ತಿದ್ದಾರೆ ಎನ್ನಲಾಗಿದೆ.

 ಈ ಮಹಿಳೆಯರ ಪೈಕಿ ಕೆಲವರು ಈವರೆಗೂ ಮನೆ ಬಿಟ್ಟು ಹೊರಗೆ ಬಂದಿಲ್ಲ. ಇನ್ನು ಕೆಲವರು ಊರು ತೊರೆದು ಅಜ್ಞಾತ ಸ್ಥಳಗಳಲ್ಲಿ ತಲೆಮರೆಸಿಕೊಂಡಿದ್ದಾರೆ. ಮಹಿಳೆಯರ ಈ ಅಸಹಕಾರ ಎಸ್‌ಐಟಿ ತಂಡದ ತನಿಖೆಗೆ ತೀವ್ರ ಅಡ್ಡಿಯಾಗುತ್ತಿದೆ.

ಎರಡು ದಿನಗಳಿಂದ ಜಿಲ್ಲೆಯಲ್ಲಿ ಎಸ್‌ಐಟಿ ತಂಡ ಕಾರ್ಯೋನ್ಮುಖವಾಗಿದ್ದು, ವಿಡಿಯೋಗಳಲ್ಲಿರುವ ಮಹಿಳೆಯರನ್ನು ಸಂಪರ್ಕಿಸುವ ಎಸ್‌ಐಟಿ ಯತ್ನ ಫಲ ಕೊಡುತ್ತಿಲ್ಲ. ಏಕೆಂದರೆ

ಎಸ್‌ಐಟಿ ಬುಧವಾರ ಹೊಳೆನರಸೀಪುರದಲ್ಲಿರುವ ರೇವಣ್ಣ ಅವರ ಮನೆ ಮುಂದೆ ತನಿಖೆಗೆ ಹಾಜರಾಗುವಂತೆ ನೋಟಿಸ್‌ ಅಂಟಿಸಿತ್ತು. ರೇವಣ್ಣ ಹಾಗೂ ಭವಾನಿ ರೇವಣ್ಣ ಅವರು ಮನೆಯೊಳಗೇ ಇದ್ದರೂ ಎಸ್‌ಐಟಿ ತಂಡವನ್ನು ಮನೆಯೊಳಗೆ ಬಿಟ್ಟಿಲ್ಲ. ಹಾಗಾಗಿ ಗೇಟಿನ ಮುಂದಿನ ಕಾಂಪೌಂಡ್‌ ಮೇಲೆ ನೋಟಿಸ್‌ ಅಂಟಿಸಿತ್ತು.

PREV

Recommended Stories

ಮಹಿಳೆಯರ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು
ನಾಯಿ ರಕ್ಷಣೆಗೆ ರಸ್ತೆ ಬದಿ ನಿಂತಿದ್ದ ಯುವತಿ ಮೈಮುಟ್ಟಿ ಇಂಜಿನಿಯರ್‌ ದುರ್ವರ್ತನೆ : ಬಂಧನ