ಅಳತೆ ನೆಪದಲ್ಲಿ ಅಪ್ರಾಪ್ತೆಯ ಅಂಗಾಂಗ ಮುಟ್ಟಿದ ಸ್ಪರ್ಶಿಸಿದ ಟೈಲರ್‌: ಕೇಸ್‌ ರದ್ದು ಕೋರಿದ್ದ ಅರ್ಜಿ ವಜಾ

KannadaprabhaNewsNetwork |  
Published : Aug 22, 2026, 03:30 AM IST
ಸುರಪುರದ ಶಾಸಕ ರಾಜಾ ವೇಣುಗೋಪಾಲ ನಾಯಕ. | Kannada Prabha

ಸಾರಾಂಶ

ಬಟ್ಟೆ ಅಳತೆ ತೆಗೆದುಕೊಳ್ಳುವ ನೆಪದಲ್ಲಿ 13 ವರ್ಷದ ಅಪ್ರಾಪ್ತ ಬಾಲಕಿಯ ಅಂಗಾಂಗ ಸ್ಪರ್ಷಿಸಿದ ಆರೋಪದ ಮೇಲೆ 53 ವರ್ಷದ ಟೈಲರ್‌ ವಿರುದ್ಧ ಪೋಕ್ಸೋ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣ ರದ್ದುಪಡಿಸಲು ಹೈಕೋರ್ಟ್‌ ನಿರಾಕರಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಟ್ಟೆ ಅಳತೆ ತೆಗೆದುಕೊಳ್ಳುವ ನೆಪದಲ್ಲಿ 13 ವರ್ಷದ ಅಪ್ರಾಪ್ತ ಬಾಲಕಿಯ ಅಂಗಾಂಗ ಸ್ಪರ್ಷಿಸಿದ ಆರೋಪದ ಮೇಲೆ 53 ವರ್ಷದ ಟೈಲರ್‌ ವಿರುದ್ಧ ಪೋಕ್ಸೋ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣ ರದ್ದುಪಡಿಸಲು ಹೈಕೋರ್ಟ್‌ ನಿರಾಕರಿಸಿದೆ.

ಪೋಕ್ಸೋ ಕಾಯ್ದೆಯಡಿ ತನ್ನ ವಿರುದ್ಧ ವೈಟ್‌ಫೀಲ್ಡ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಮತ್ತು ಅದಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಆರ್.ವೆಂಕಟೇಶ್‌ ರೆಡ್ಡಿ (53) ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಆದೇಶಿಸಿದೆ. ಅರ್ಜಿಯ ಹಿಂದಿನ ವಿಚಾರಣೆ ವೇಳೆ, ಘಟನೆ ನಡೆದ ದಿನದಂದು ತಾನು ಸತ್ಯಸಾಯಿ ಉನ್ನತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆ ಎಂದು ತಿಳಿಸಿ ದಾಖಲೆ ಸಲ್ಲಿಸಿರುವುದಕ್ಕೆ ಹೈಕೋರ್ಟ್‌ ದಿಗ್ಭ್ರಮೆ ವ್ಯಕ್ತಪಡಿಸಿತ್ತು. ನಂತರ ಆಸ್ಪತ್ರೆಗೆ ತೆರಳಿ ಆರೋಪಿ ದಾಖಲಾದ, ಬಿಡುಗಡೆಯಾದ ಮತ್ತು ಪಡೆದಿರುವ ಚಿಕಿತ್ಸೆಯ ವಿವರ ಪಡೆದು ಪ್ರಮಾಣ ಪತ್ರ ಸಲ್ಲಿಸುವಂತೆ ತನಿಖಾಧಿಕಾರಿಗೆ ಸೂಚಿಸಿತ್ತು.

ಅದರಂತೆ ತನಿಖಾಧಿಕಾರಿಯು ಆಸ್ಪತ್ರೆಯಿಂದ ದಾಖಲೆ ಪಡೆದು ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದರು. ಪ್ರಮಾಣ ಪತ್ರ ಪರಿಶೀಲಿಸಿದ ನಂತರ ಅರ್ಜಿದಾರರ ಪರ ವಕೀಲರನ್ನು ಉದ್ದೇಶಿಸಿ ಪ್ರತಿಕ್ರಿಯಿಸಿದ ಪೀಠ, ಅರ್ಜಿದಾರ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿಯೇ ಇಲ್ಲ. ಆ ಆ ಕುರಿತು ಆಸ್ಪತ್ರೆಯೇ ಹೇಳಿದೆ. ಆದರೆ, ನೀವು ಮಾತ್ರ ಅರ್ಜಿದಾರ, ಏ.15ರಿಂದ 17ರವರೆಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು ಎಂದು ಹೇಳಿದ್ದೀರಿ. ಮಧುಮೇಹಕ್ಕೆ ಯಾರೂ ಒಳರೋಗಿಯಾಗಿ ಚಿಕಿತ್ಸೆ ಪಡೆಯುವುದಿಲ್ಲ. ಏ.15ರಂದು ಮೂರು ನಿಮಿಷ, ಏ.16ರಂದು ಐದು ನಿಮಿಷ ಹಾಗೂ ಏ.17ರಂದು ಎರಡು ನಿಮಿಷ ಕಾಲ ವೈದ್ಯರೊಂದಿಗೆ ಅರ್ಜಿದಾರ ಸಮಾಲೋಚಿಸಿದ್ದಾರೆ. ವೈದ್ಯರು ಗ್ಲೂಕೊಮೀಟರ್‌ನಲ್ಲಿ ಮಧುಮೇಹ ಪ್ರಮಾ ಪರಿಶೀಲಿಸಿ ವಾಪಸ್‌ ಕಳುಹಿಸಿದ್ದಾರೆ. ಅದು ಚಿಕಿತ್ಸೆಯೇ? ನಿಮ್ಮ ವಾದ ಸಂಪೂರ್ಣ ಸುಳ್ಳು ಅಲ್ಲವೇ? ನ್ಯಾಯಾಲಯಕ್ಕೆ ಸರಿಯಾದ ಮಾಹಿತಿ ನೀಡದಿದ್ದರೆ ಪ್ರಮಾಣ ಪತ್ರ ಸಲ್ಲಿಸಲು ತನಿಖಾಧಿಕಾರಿಗೆ ಸೂಚಿಸಬೇಕಾಗುತ್ತದೆ ಎಂದು ತಿಳಿಸಿ ಅರ್ಜಿ ವಜಾಗೊಳಿಸಿತು.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಖಾಸಗಿ ಬಸ್ ಡಿಕ್ಕಿ: ಸ್ಥಳದಲ್ಲೇ ಇಬ್ಬರು ಸಾವು, 20 ಮಂದಿಗೆ ಗಾಯ
ಮದ್ದೂರು: ಗಾರ್ಮೆಂಟ್ಸ್ ಗೋದಾಮಿನಲ್ಲಿ ಎಸಿ ಸ್ಫೋಟ!