ವೃದ್ಧೆ ಬೆದರಿಸಿ ಕಿವಿ ಓಲೆ ಕಿತ್ತ ಕಳ್ಳರನ್ನು ಹಿಡಿದ ಗ್ರಾಮಸ್ಥರು..!

KannadaprabhaNewsNetwork |  
Published : Jun 17, 2026, 01:45 AM IST
16ಕೆಎಂಎನ್ ಡಿ22 | Kannada Prabha

ಸಾರಾಂಶ

ಚಾಕು ತೋರಿಸಿ ವೃದ್ಧೆ ಬೆದರಿಸಿ ಕಿವಿ ಓಲೆ ಕಿತ್ತು ಪರಾರಿಯಾಗುತ್ತಿದ್ದ ಇಬ್ಬರು ಕಳ್ಳರನ್ನು ಹಿಡಿದು ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿರುವ ಘಟನೆ ಹಲಗೂರು ಹೋಬಳಿಯ ಸಾಗ್ಯ- ಅಂಕನಹಳ್ಳಿ ಗ್ರಾಮಗಳ ಬಳಿ ನಡೆದಿದೆ.

ಹಲಗೂರು:

ಚಾಕು ತೋರಿಸಿ ವೃದ್ಧೆ ಬೆದರಿಸಿ ಕಿವಿ ಓಲೆ ಕಿತ್ತು ಪರಾರಿಯಾಗುತ್ತಿದ್ದ ಇಬ್ಬರು ಕಳ್ಳರನ್ನು ಹಿಡಿದು ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿರುವ ಘಟನೆ ಸಾಗ್ಯ- ಅಂಕನಹಳ್ಳಿ ಗ್ರಾಮಗಳ ಬಳಿ ನಡೆದಿದೆ.

ಸಮೀಪದ ಸಾಗ್ಯ ಗ್ರಾಮದ ಕೃಷ್ಣಪ್ಪರ ಪತ್ನಿ ಶಾಂತಮ್ಮರನ್ನು ಇಬ್ಬರು ಕಳ್ಳರು ಚಾಕು ತೋರಿಸಿ ಹೆದರಿಸಿ ಅವರ ಎರಡು ಕಿವಿಗಳಲ್ಲಿದ್ದ ಮೂರು ಗ್ರಾಂ ಚಿನ್ನದ ಓಲೆಗಳನ್ನು ಕಿತ್ತು ಪರಾರಿಯಾಗುತ್ತಿದ್ದ ಮಂಡ್ಯ ತಾಲೂಕು ಕೆರಗೋಡು ಸಮೀಪದ ಶಿವಾರ ಗ್ರಾಮದ ಹೊಂಬಾಳಯ್ಯ ಮತ್ತು ಅಪ್ರಾಪ್ತ ಬಾಲಕ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದಿದ್ದಾರೆ.

ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಶಾಂತಮ್ಮ ಎಂದಿನಂತೆ ಸಾಗ್ಯ ಗ್ರಾಮದ ಕೆಂಪೇಗೌಡರ ಜಮೀನಿನಲ್ಲಿ ಕೂಲಿ ಕೆಲಸ ಮಾಡಿ ನಂತರ ತಿಂಡಿ ತಿನ್ನುತ್ತಿದ್ದ ವೇಳೆ ಅಲ್ಲಿಗೆ ಬಂದ ಕಳ್ಳರು ಶಾಂತಮ್ಮನಿಗೆ ಚಾಕು ತೋರಿಸಿ ಬೆದರಿಸಿ ಅವರ ಎರಡು ಕಿವಿಗಳಲ್ಲಿದ್ದ ಓಲೆಗಳನ್ನು ಕಿತ್ತುಕೊಂಡಿದ್ದಾರೆ.

ನಂತರ ಕಳ್ಳರು ಪರಾರಿಯಾಗುತ್ತಿದ್ದಾಗ ಶಾಂತಮ್ಮ ಕೂಗಿಕೊಂಡಿದ್ದಾರೆ. ಅಕ್ಕಪಕ್ಕದ ಜಮೀನಿನವರು ವೃದ್ಧೆ ಶಬ್ಧ ಕೇಳಿ ತಕ್ಷಣ ಅಂಕನಹಳ್ಳಿ ಗ್ರಾಮಸ್ಥರಿಗೆ ದೂರವಾಣಿ ಮುಖಾಂತರ ವಿಷಯ ತಿಳಿಸಿದ್ದಾರೆ. ನಂತರ ಅಂಕನಹಳ್ಳಿ ಮತ್ತು ಸಾಗ್ಯ ಗ್ರಾಮಸ್ಥರು ಸೇರಿ ಕಳ್ಳರನ್ನು ಹಿಡಿದು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಸ್ಥಳಕ್ಕೆ ಬಂದ ಸಬ್ ಇನ್ಸ್‌ಪೆಕ್ಟರ್‌ ಲೋಕೇಶ್ ಆರೋಪಿಗಳನ್ನು ವಶಕ್ಕೆ ಪಡೆದು ಅವರ ಬಳಿ ಇದ್ದ ಓಲೆಗಳು, ಕಳ್ಳರ ಬಳಿ ಇದ್ದ ಚಾಕು, ಸ್ಕೂಟರ್‌ಗಳನ್ನು ವಶಪಡಿಸಿಕೊಂಡು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ.

ಸ್ಥಳಕ್ಕೆ ಜಿಲ್ಲಾ ವರಿಷ್ಠಾಧಿಕಾರಿ ಶೋಭಾರಾಣಿ, ಡಿವೈಎಸ್‌ಪಿ ಯಶ್ವಂತ್, ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಧರ್ ಭೇಟಿ ನೀಡಿ ಸ್ಥಳ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ. ಓಲೆ ಕಿತ್ತುಕೊಂಡಾಗ ಕಿವಿಯಿಂದ ರಕ್ತ ಬರುತ್ತಿದ್ದ ಶಾಂತಮ್ಮನನ್ನು ತಕ್ಷಣ ಮಳವಳ್ಳಿ ಆಸ್ಪತ್ರೆಗೆ ಕಳಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಧರ್ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಇನ್ನು ವಾರದಲ್ಲಿ 4 ದಿನ ದರ್ಶನ್‌ ಕೇಸ್‌ ವಿಚಾರಣೆ
ರೀಪಿಸ್ ಪಟ್ಟಿಯಿಂದ ಹೊಡೆದು ಹತ್ಯೆ : ಆರೋಪಿ ಸೆರೆ