ವ್ಯಕ್ತಿಯಿಂದ ಬೆದರಿಕೆ: ನೇಣು ಬಿಗಿದು ತಾಯಿ-ಮಗಳು ಆತ್ಮಹತ್ಯೆ

KannadaprabhaNewsNetwork |  
Published : Feb 09, 2026, 01:45 AM IST
8ಕೆಎಂಎನ್ ಡಿ25,26 | Kannada Prabha

ಸಾರಾಂಶ

ವ್ಯಕ್ತಿಯೊಬ್ಬ ಬೆದರಿಕೆ ಹಾಕಿದ್ದರಿಂದ ತಾಯಿ, ಮಗಳು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಲಗೂರು ಸಮೀಪದ ದಳವಾಯಿಕೋಡಿಹಳ್ಳಿಯಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ. ಗ್ರಾಮದ ಎಂ.ಮಹೇಶ್ ಅವರ ಪತ್ನಿ ಶಕುಂತಲಾ (37) ಮತ್ತು ಪುತ್ರಿ ಪ್ರಿಯಾ (18) ಮೃತಪಟ್ಟವರು.

ಹಲಗೂರು:

ವ್ಯಕ್ತಿಯೊಬ್ಬ ಬೆದರಿಕೆ ಹಾಕಿದ್ದರಿಂದ ತಾಯಿ, ಮಗಳು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ದಳವಾಯಿಕೋಡಿಹಳ್ಳಿಯಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.

ಗ್ರಾಮದ ಎಂ.ಮಹೇಶ್ ಅವರ ಪತ್ನಿ ಶಕುಂತಲಾ (37) ಮತ್ತು ಪುತ್ರಿ ಪ್ರಿಯಾ (18) ಮೃತಪಟ್ಟವರು.

ನಮ್ಮ ಪಕ್ಕದ ಮನೆಯ ನಿವಾಸಿ 35 ವರ್ಷದ ವಿವಾಹಿತ ಮುತ್ತುರಾಜು ನನ್ನ ಮಗಳಾದ ಪ್ರಿಯಾಳನ್ನು ಪರಿಚಯ ಮಾಡಿಕೊಂಡು ನಿನ್ನನ್ನು ಮದುವೆ ಮಾಡಿಕೊಳ್ಳುತ್ತೇನೆ ಎಂದು ಪುಸಲಾಯಿಸಿದ್ದು, ಇದಕ್ಕೆ ಒಪ್ಪದ ಶಕುಂತಲಾ ಮತ್ತು ಮಹೇಶ್ ಅವರು ನಿನಗೆ ಈಗಾಗಲೇ ಮದುವೆಯಾಗಿದೆ. ಹೆಂಡತಿ ಮತ್ತು ಮಕ್ಕಳಿದ್ದಾರೆ. ಮತ್ತೆ ಮದುವೆ ಸಾಧ್ಯವಿಲ್ಲ ಎಂದು ಬುದ್ಧಿ ಹೇಳಿದ್ದಾರೆ.

ನಂತರ ಪುತ್ರಿ ಪ್ರಿಯಾಳಿಗೆ ಬೇರೆ ವರನಿಗೆ ಮದುವೆ ಮಾಡೋಣ ಎಂದು ಸಿದ್ಧತೆ ಮಾಡಿಕೊಳ್ಳುತ್ತಿರುವ ವಿಷಯ ತಿಳಿದ ಮುತ್ತುರಾಜು ಶಕುಂತಲಾರಿಗೆ ಕರೆ ಮಾಡಿ ಪ್ರಿಯಾಳನ್ನು ಬೇರೆ ಕಡೆಗೆ ಮದುವೆ ಮಾಡಿದರೆ ನಿಮ್ಮನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ಮನನೊಂದ ಶಕುಂತಲಾ ಮತ್ತು ಪ್ರಿಯಾ ಇಬ್ಬರು ಭಾನುವಾರ ಬೆಳಗ್ಗೆ ಮನೆ ತೊಲೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಂದೆ ಪ್ರಿಯಾಳ ಎಂ.ಮಹೇಶ್ ದೂರಿನಲ್ಲಿ ತಿಳಿಸಿದ್ದಾರೆ

ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಕೈಕೊಟ್ಟ ಪ್ರಿಯತಮೆಯಿಂದ ನೊಂದು ರಾಜ್ಯಮಟ್ಟದ ಬಾಡಿ ಬಿಲ್ಡರ್‌ ಆತ್ಮಹತ್ಯೆ
ಕೌಟುಂಬಿಕ ಕಲಹ: ಮಗುವಿನೊಂದಿಗೆ ತಾಯಿ ಆತ್ಮಹತ್ಯೆ