ದರ್ಶನ್‌ ಅಭಿಮಾನಿಗಳಿಂದ ಬೆದರಿಕೆ: ನಟ ಪ್ರಥಮ್‌ ದೂರು

ಸಾರಾಂಶ

ಕೊಲೆ ಆರೋಪ ಹೊತ್ತಿರುವ ನಟ ದರ್ಶನ್ ವಿರುದ್ಧ ಹೇಳಿಕೆ ನೀಡಿದ್ದಕ್ಕೆ ಅಭಿಮಾನಿಗಳ ಹೆಸರಿನಲ್ಲಿ 50ಕ್ಕೂ ಹೆಚ್ಚು ಬೆದರಿಕೆ ಕರೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಜ್ಞಾನಭಾರತಿ ಠಾಣೆ ಪೊಲೀಸರಿಗೆ ನಟ ಪ್ರಥಮ್ ಬುಧವಾರ ದೂರು ನೀಡಿದ್ದಾರೆ.

ಬೆಂಗಳೂರು : ಕೊಲೆ ಆರೋಪ ಹೊತ್ತಿರುವ ನಟ ದರ್ಶನ್ ವಿರುದ್ಧ ಹೇಳಿಕೆ ನೀಡಿದ್ದಕ್ಕೆ ಅಭಿಮಾನಿಗಳ ಹೆಸರಿನಲ್ಲಿ 50ಕ್ಕೂ ಹೆಚ್ಚು ಬೆದರಿಕೆ ಕರೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಜ್ಞಾನಭಾರತಿ ಠಾಣೆ ಪೊಲೀಸರಿಗೆ ನಟ ಪ್ರಥಮ್ ಬುಧವಾರ ದೂರು ನೀಡಿದ್ದಾರೆ.

 ಈ ದೂರನ್ನು ಸ್ವೀಕರಿಸಿದ ಪೊಲೀಸರು, ಗಂಭೀರ ಸ್ವರೂಪವಲ್ಲದ ಕೃತ್ಯ (ಎನ್‌ಸಿ) ಎಂದು ನಮೂದಿಸಿದ್ದಾರೆ.  

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಅವರ ಸಹಚರರ ಬಂಧನ ಬಳಿಕ ಘಟನೆ ಖಂಡಿಸಿ ಮಾಧ್ಯಮಗಳಿಗೆ ಪ್ರಥಮ್ ಹೇಳಿಕೆ ನೀಡಿದ್ದರು.

ಇದರಿಂದ ಕೋಪಕೊಂಡು ಪ್ರಥಮ್ ಅ‍ವರಿಗೆ ದರ್ಶನ್ ಅಭಿಮಾನಿಗಳ ಹೆಸರಿನಲ್ಲಿ 50 ಹೆಚ್ಚು ಬೆದರಿಕೆ ಕರೆಗಳು ಬಂದಿವೆ. ಈ ಬೆದರಿಕೆ ಕರೆಗಳ ಹಿನ್ನಲೆಯಲ್ಲಿ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಜ್ಞಾನಭಾರತಿ ಠಾಣೆಗೆ ತೆರಳಿ ಪ್ರಥಮ್ ದೂರು ಸಲ್ಲಿಸಿದ್ದಾರೆ.

Share this article