ಪ್ರಾಜೆಕ್ಟ್‌ಗಾಗಿ ಉತ್ತರಿ ಬೆಟ್ಟಕ್ಕೆ ತೆರಳುತ್ತಿದ್ದಇಬ್ಬರು ವಿದ್ಯಾರ್ಥಿಗಳು ಅಪಘಾತಕ್ಕೆ ಬಲಿ

KannadaprabhaNewsNetwork |  
Published : Nov 18, 2026, 04:00 AM IST
ಪೋಟೋ 5 : ಮೃತಪಟ್ಟ ಜಾನವಿ | Kannada Prabha

ಸಾರಾಂಶ

ಕಾರೊಂದು ವೇಗವಾಗಿ ಚಲಿಸುವ ವೇಳೆ ಕಾರಿನ ಚಕ್ರ ಗುಂಡಿಗೆ ಇಳಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ನೆಲಮಂಗಲ ತಾಲೂಕಿನ ಬೆಂಗಳೂರು-ಹಾಸನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ

ಕಾರೊಂದು ವೇಗವಾಗಿ ಚಲಿಸುವ ವೇಳೆ ಕಾರಿನ ಚಕ್ರ ಗುಂಡಿಗೆ ಇಳಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ನೆಲಮಂಗಲ ತಾಲೂಕಿನ ಬೆಂಗಳೂರು-ಹಾಸನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿದೆ.

ಬೆಂಗಳೂರಿನ ಸಪ್ತಗಿರಿ ಕಾಲೇಜಿನ ವಿದ್ಯಾರ್ಥಿಗಳಾದ ಜಾನವಿ (19), ವೈಷ್ಣವಿ (19) ಸಾವನ್ನಪ್ಪಿದ್ದಾರೆ. ಗಗನ್, ಜಶ್ವಂತ್, ಹರ್ಷಿಣಿ.ಎಸ್, ಹರ್ಷಿಶಿ.ಜಿ ಎಂಬ ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿದ್ದಾರೆ.

ಘಟನಾ ವಿವರ: ಅಪಘಾತದಲ್ಲಿ ಮೃತಪಟ್ಟ ಇಬ್ಬರು ಹಾಗೂ ಗಾಯಗೊಂಡಿರುವ ನಾಲ್ವರು ಒಟ್ಟು ಆರು ವಿದ್ಯಾರ್ಥಿಗಳು, ಬೆಂಗಳೂರಿನ ಸಪ್ತಗಿರಿ ಕಾಲೇಜಿನಲ್ಲಿ ಎರಡನೇ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು, ಕಾಲೇಜಿನಿಂದ ಪ್ರಾಜೆಕ್ಟ್ ವರ್ಕ್ ಮೇಲೆ ಕುಣಿಗಲ್ ಬಳಿಯ ಉತ್ತರಿ ಬೆಟ್ಟಕ್ಕೆ ಹೋಗುವಾಗ ಈ ದುರ್ಘಟನೆ ನಡೆದಿದೆ. ಗಾಯಾಳುಗಳಾದ ಗಗನ್, ಜಶ್ವಂತ್‌ರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಿದ್ದು, ಹರ್ಷಿಣಿ ಎಸ್, ಹರ್ಷಿಣಿ ಜಿ ಎಂಬ ಗಾಯಾಳುಗಳಿಗೆ ನೆಲಮಂಗಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕಾಲೇಜಿನ ವಿರುದ್ಧ ಕುಟುಂಬಸ್ಥರ ಆಕ್ರೋಶ: ಬೆಂಗಳೂರು ಸಪ್ತಗಿರಿ ಕಾಲೇಜಿನವರು ಈ ವಿದ್ಯಾರ್ಥಿಗಳನ್ನು ಕಾಲೇಜಿನಿಂದಲೇ ಪ್ರಾಜೆಕ್ಟ್ ವರ್ಕ್‍ಗಾಗಿ ವಿದ್ಯಾರ್ಥಿಗಳನ್ನು ತಂಡಗಳನ್ನಾಗಿ ಮಾಡಿ ಕುಣಿಗಲ್ ಬಳಿಯ ಉತ್ತರಿ ಬೆಟ್ಟಕ್ಕೆ ಪ್ರಾಜೆಕ್ಟ್ ವರ್ಕ್ ಮಾಡಲು ಕಳಿಸಿದ್ದರು. ಕಾಲೇಜಿನವರು ವಿದ್ಯಾರ್ಥಿಗಳನ್ನು ಕಳಿಸಿಕೊಟ್ಟ ಮೇಲೆ ಕಾಲೇಜಿನಿಂದಲೇ ವಾಹನದ ವ್ಯವಸ್ಥೆ ಕಲ್ಪಿಸಿ ವಿದ್ಯಾರ್ಥಿಗಳನ್ನು ಕಳಿಸಬೇಕಿತ್ತು ಆದರೆ ವಾಹನ ವ್ಯವಸ್ಥೆ ಮಾಡದ ಹಿನ್ನೆಲೆಯಲ್ಲಿ ಈ ಅವಘಡ ಸಂಬಂಧಿಸಿದ್ದು, ನಮ್ಮ ಮಕ್ಕಳ ಸಾವಿಗೆ ಕಾಲೇಜು ಆಡಳಿತ ಮಂಡಳಿಯೇ ನೇರ ಹೊಣೆ ಎಂದು ಪೋಷಕರು ಆಕ್ರೋಶ ಹೊರಹಾಕಿದರು. ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಪೊಲೀಸರಿಂದಲೇ ತಪ್ಪಿತಸ್ಥರಿಗೆ ರಕ್ಷಣೆ: ಬಿ.ಟಿ.ವಿಶ್ವನಾಥ್
ವ್ಯವಹಾರದಲ್ಲಿ ನಷ್ಟ ಆಗಿದ್ದಕ್ಕೆ ಗೆಳೆಯನ ಹತ್ಯೆ