ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಯುವತಿ ಪತ್ತೆ: ಕೊಲೆ ಶಂಕೆ

KannadaprabhaNewsNetwork | Updated : Mar 13 2024, 07:31 AM IST

ಸಾರಾಂಶ

ಸೂರ್ಯ ನಗರ ಠಾಣಾ ವ್ಯಾಪ್ತಿಯ ಚಂದಾಪುರ ಹೆಡ್ ಮಾಸ್ಟರ್ ಬಡಾವಣೆಯಲ್ಲಿ ಕಂಡು ಬಂದಿದ್ದು ಪೊಲೀಸರು ಕೊಲೆಯಾಗಿರಬಹುದು ಎಂದು ಶಂಕೆ ವ್ಯಕ್ತ ಪಡಿಸಿದ್ದಾರೆ.

ಆನೇಕಲ್: ಸೂರ್ಯ ನಗರ ಠಾಣಾ ವ್ಯಾಪ್ತಿಯ ಚಂದಾಪುರ ಹೆಡ್ ಮಾಸ್ಟರ್ ಬಡಾವಣೆಯಲ್ಲಿ ಕಂಡು ಬಂದಿದ್ದು ಪೊಲೀಸರು ಕೊಲೆಯಾಗಿರಬಹುದು ಎಂದು ಶಂಕೆ ವ್ಯಕ್ತ ಪಡಿಸಿದ್ದಾರೆ.

ಹೆಡ್ ಮಾಸ್ಟರ್ ಬಡಾವಣೆಯ ನಾಲ್ಕನೇ ಮಹಡಿಯಲ್ಲಿ ಬಾಡಿಗೆಗೆ ಇದ್ದ ಒರಿಸ್ಸಾ ಮೂಲದ ಸಪನ್ ಕುಮಾರ್ ಜೊತೆಗಿದ್ದ ಯುವತಿ ಶವವಾಗಿದ್ದು, ಕಳೆದ ನಾಲ್ಕೈದು ದಿನಗಳ ಹಿಂದೆ ಕೊಲೆಯಾಗಿರಬಹುದು ಎಂದು ಅಂದಾಜಿಸಲಾಗಿದೆ.

ಯುವತಿಯ ಹೆಸರು ಮಾಹಿತಿಯನ್ನು ಕಲೆ ಹಾಕುತ್ತಿದ್ದು, ತಪನ್ ಕುಮಾರನ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಆತ ನಾಪತ್ತೆಯಾಗಿದ್ದಾನೆ. ಬೆಂಗಳೂರು ನಗರ ಸೇರಿದಂತೆ ವಿವಿಧ ಠಾಣೆಗಳಲ್ಲಿ ಮಿಸ್ಸಿಂಗ್ ಕೇಸ್ ಬಗ್ಗೆ ಮಾಹಿತಿ ನೀಡಿದ್ದು, ಇದುವರೆವಿಗೂ ಯುವತಿಯ ವಾರಸುದಾರರು, ಪೋಷಕರು ಸಂಪರ್ಕ ಮಾಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಶವ ಪತ್ತೆಯಾದ ಸ್ಥಳದಲ್ಲಿ ಮದ್ಯದ ಬಾಟಲಿಗಳು ಕಂಡು ಬಂದಿವೆ. ಕೊಲೆಗೂ ಮೊದಲು ಮದ್ಯ ಸೇವಿಸಿ ಕೊಲೆ ಮಾಡಿರುವ ಸಾಧ್ಯತೆಗಳಿವೆ. ತಪನ್‌ ಪತ್ತೆಗೆ ತಂಡ ರಚಿಸಿದ್ದು, ಮೊಬೈಲ್, ಸಿಸಿ ಕ್ಯಾಮೆರಾ ದಾಖಲೆಗಳ ಆಧಾರದ ಮೇಲೆ ತನಿಖೆ ಕೈ ಕೊಳ್ಳಲಾಗುವುದು ಎಂದಿದ್ದಾರೆ.

- - -

ಮನೆ ಎದುರು ಕಸ ಗುಡಿಸುವ ವಿಚಾರಕ್ಕೆ ವೃದ್ಧೆ ಮೇಲೆ ಹಲ್ಲೆಕನ್ನಡಪ್ರಭ ವಾರ್ತೆ ಬೆಂಗಳೂರುಮನೆ ಎದುರು ಕಸ ಗುಡಿಸುವ ವಿಚಾರಕ್ಕೆ ಎದುರು ಮನೆಯ ವ್ಯಕ್ತಿಯೊಬ್ಬ ದೊಣ್ಣೆಯಿಂದ ವೃದ್ಧೆಯ ತಲೆಗೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಎಚ್‌ಎಎಲ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಇಸ್ಲಾಂಪುರ ನಿವಾಸಿ ದಿಲ್‌ಷಾದ್‌ ಬೇಗಂ(60) ಹಲ್ಲೆಗೆ ಒಳಗಾದವರು. ಈ ಸಂಬಂಧ ಗಾಯಾಳುವಿನ ಪುತ್ರ ರೆಹಮತ್‌ ಎಂಬುವವರು ನೀಡಿದ ದೂರಿನ ಮೇರೆಗೆ ಎದುರು ಮನೆಯ ಕಲೀಂ(43) ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಏನಿದು ಘಟನೆ?:ದಿಲ್‌ಷಾದ್ ಬೇಗಂ ಭಾನುವಾರ ರಾತ್ರಿ 10 ಗಂಟೆ ಸುಮಾರಿಗೆ ಮನೆಯ ಎದುರು ಕಸ ಗುಡಿಸುತ್ತಿದ್ದರು. ಈ ವೇಳೆ ಎದುರು ಮನೆಯ ಕಲೀಂ ರಸ್ತೆಯಲ್ಲಿ ವಾಕಿಂಗ್‌ ಮಾಡುತ್ತಿದ್ದ. ಕಸ ಗುಡಿಸುವುದರಿಂದ ಧೂಳು ಹಾರುತ್ತಿದೆ ಎಂದು ಆಕೆ ಜತೆಗೆ ಜಗಳ ತೆಗೆದಿದ್ದಾನೆ. ಹೀಗೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಕಲೀಂ ಮನೆಯಿಂದ ದೊಣ್ಣೆ ತಂದು ದಿಲ್‌ಷಾದ್ ಬೇಗಂ ಅವರ ತಲೆಗೆ ಹಲ್ಲೆ ಮಾಡಿದ್ದಾನೆ.ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡು ಕುಸಿದು ಬಿದ್ದ ದಿಲ್‌ಷಾದ್‌ ಬೇಗಂ ಅವರನ್ನು ಕುಟುಂದವರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಚಿಕಿತ್ಸೆ ಮುಂದುವರೆದಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಈ ಸಂಬಂಧ ದಿಲ್‌ಷಾದ್‌ ಬೇಗಂ ಪುತ್ರ ರೆಹಮತ್‌ ನೀಡಿದ ದೂರಿನ ಮೇರೆಗೆ ಎಚ್‌ಎಎಲ್‌ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಕಲೀಂನನ್ನು ವಶಕ್ಕೆ ಪಡೆದಿದ್ದಾರೆ.ಆರೋಪಿ ಕಲೀಂನ ಮಾನಸಿಕ ಸ್ಥಿತಿ ಸರಿಯಿಲ್ಲ ಎಂದು ತಿಳಿದು ಬಂದಿದೆ. ಕಸ ಗುಡಿಸುವ ವಿಚಾರಕ್ಕೆ ಹಿಂದೆ ಸಹ ಕಲೀಂ ಕಿರಿಕ್‌ ಮಾಡಿದ್ದ ಎನ್ನಲಾಗಿದೆ. ಹೀಗಾಗಿ ಆತನನ್ನು ನಿಮ್ಹಾನ್ಸ್‌ಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share this article