ಹೊಸಪೇಟೆ: ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಯುದ್ಧದ ಸಂದರ್ಭದಲ್ಲಿ ಪ್ಯಾಲೆಸ್ತೀನ್ ಪರ ಒಕ್ಕಣೆವುಳ್ಳ ಬರಹ ಮತ್ತು ವಿಡಿಯೋವನ್ನು ತನ್ನಮೊಬೈಲ್‌ನಲ್ಲಿ ಸ್ಟೇಟಸ್‌ಗೆ ಹಾಕಿದ ಆರೋಪದ ಮೇರೆಗೆ ನಗರದ ಪಟ್ಟಣ ಠಾಣೆ ಪೊಲೀಸರು ಗುರುವಾರ ಯುವಕನೋರ್ವನನ್ನು ವಶಕ್ಕೆ ಪಡೆದಿದ್ದಾರೆ. ನಗರದ ಸಿದ್ದಲಿಂಗಪ್ಪ ಚೌಕಿ ನಿವಾಸಿ ಆಲಂ ಬಾಷಾ(20) ಎಂಬ ಯುವಕ ಪ್ಯಾಲೆಸ್ತೀನ್ ಪರ ಒಕ್ಕಣೆವುಳ್ಳ ಬರಹ ಮತ್ತು ವಿಡಿಯೋಗಳನ್ನು ಹರಿಬಿಟ್ಟಿರುವುದನ್ನುಗಮನಿಸಿ ಸ್ಥಳೀಯ ಪಟ್ಟಣ ಠಾಣೆ ಪೊಲೀಸರು, ನಗರದಲ್ಲಿ ಶಾಂತಿಭಂಗ ಉಂಟು ಮಾಡುವ ಪ್ರಕರಣಗಳು ಆಗಬಾರದು ಎಂದು ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ. ಪ್ಯಾಲೆಸ್ತೀನ್ ಪರ ಒಕ್ಕಣೆವುಳ್ಳ ಬರಹ ಮತ್ತು ವಿಡಿಯೋವನ್ನು ತನ್ನ ಮೊಬೈಲ್‌ನಲ್ಲಿ ಸ್ಟೇಟ್ಸ್ ಇಟ್ಟ ಹಿನ್ನೆಲೆಯಲ್ಲಿ ಯುವಕನೋರ್ವನ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಎಸ್ಪಿ ಶ್ರೀಹರಿಬಾಬು ದೃಢಪಡಿಸಿದ್ದಾರೆ.