ಇ-ಕಾಮರ್ಸ್‌ ಡೆಲಿವರಿಗೆ ಹೋದಾಗ ಶೌಚಾಲಯ ಬಳಸುವ ನೆಪದಲ್ಲಿ ಮಹಿಳೆಗೆ ಯುವಕ ಕಿರುಕುಳ

KannadaprabhaNewsNetwork |  
Published : Jul 13, 2026, 03:30 AM ISTUpdated : Jul 13, 2026, 05:42 AM IST
Bengaluru Flipkart delivery Boy

ಸಾರಾಂಶ

ಡೆಲಿವರಿ ಕೊಡಲು ಹೋದ ವೇಳೆ ಅನುಮತಿಯಿಲ್ಲದೆ ಒಂಟಿಯಾಗಿದ್ದ ಮಹಿಳೆಯ ಮನೆಯಲ್ಲಿ ಶೌಚಾಲಯ ಬಳಸುವ ನೆಪದಲ್ಲಿ ಆಕೆಗೆ ಕಿರುಕುಳ ನೀಡಿದ ಆರೋಪದಡಿ ಡೆಲಿವರಿ ಬಾಯ್‌ನನ್ನು ಮಾರತ್ತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

  ಬೆಂಗಳೂರು :  ಡೆಲಿವರಿ ಕೊಡಲು ಹೋದ ವೇಳೆ ಅನುಮತಿಯಿಲ್ಲದೆ ಒಂಟಿಯಾಗಿದ್ದ ಮಹಿಳೆಯ ಮನೆಯಲ್ಲಿ ಶೌಚಾಲಯ ಬಳಸುವ ನೆಪದಲ್ಲಿ ಆಕೆಗೆ ಕಿರುಕುಳ ನೀಡಿದ ಆರೋಪದಡಿ ಡೆಲಿವರಿ ಬಾಯ್‌ನನ್ನು ಮಾರತ್ತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿಯ ಬೈಲಹೊಂಗಲ ಮೂಲದ ವಿಜಯ್ ಮಲ್ಲಿಕಾರ್ಜನ್‌ ಕಾಮತ್‌ (22) ಬಂಧಿತ ಆರೋಪಿ. ಆರೋಪಿ ಜು.11ರಂದು ಪಾಪಯ್ಯ ಗಾರ್ಡನ್ ಲೇಔಟ್‌ನಲ್ಲಿರುವ ಅಪಾರ್ಟ್‌ವೊಂದಕ್ಕೆ ಡೆಲಿವರಿಗೆ ಹೋದಾಗ ಕೃತ್ಯ ಎಸಗಿದ್ದಾನೆ. ಈ ಕುರಿತು ಮಹಿಳೆ ವಿಡಿಯೋ ಸಮೇತ ಜಾಲತಾಣದಲ್ಲಿ ಪೋಸ್ಟ್ ಮಾಡಿ, ಪೊಲೀಸರಿಗೆ ದೂರು ನೀಡಿದ್ದರು.

ಆರೋಪಿ, ಇ-ಕಾಮರ್ಸ್‌ವೊಂದರ ಡೆಲವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾನೆ. ಶನಿವಾರ ಪಾಪಯ್ಯ ಗಾರ್ಡನ್‌ನ ಅಪಾರ್ಟ್‌ಮೆಂಟ್‌ನಲ್ಲಿರುವ ಮಹಿಳೆಯೊಬ್ಬರು ವಸ್ತುವೊಂದನ್ನು ಆರ್ಡರ್‌ ಮಾಡಿದ್ದರು. ಅದನ್ನು ಮಹಿಳೆಗೆ ನೀಡಿದ ನಂತರ ಶೌಚಾಲಯ ಬಳಸಲು ಕೋರಿದ್ದಾನೆ. ಆಗ ಆಕೆ, ಮನೆಯಲ್ಲಿ ಯಾರು ಪುರುಷರು ಇಲ್ಲ ಎಂದು ನಿರಾಕರಿಸಿದ್ದಾರೆ.  

ಪುರುಷರು ಇರುವ ಮನೆಯಲ್ಲಿ ಶೌಚಾಲಯಕ್ಕೆ ಹೋಗುವಂತೆ ಸೂಚಿಸಿದ್ದಾರೆ.

 ಅಲ್ಲದೆ, ಪುರುಷರು ಇರುವ ಮನೆಯಲ್ಲಿ ಶೌಚಾಲಯಕ್ಕೆ ಹೋಗುವಂತೆ ಸೂಚಿಸಿದ್ದಾರೆ. ಆದರೂ ಆರೋಪಿ ಮನೆಯೊಳಗೆ ನುಗ್ಗಿ ಬೆಡ್‌ರೂಮ್‌ನಲ್ಲಿರುವ ಶೌಚಾಲಯ ಬಳಸಿದ್ದಾನೆ. ವಾಪಸ್‌ ಬರುವಾಗ ಅನುಚಿತವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಅದರಿಂದ ಆಘಾತಕ್ಕೊಳಗಾದ ಮಹಿಳೆ, ಕೂಡಲೇ ಮನೆಯಿಂದ ಹೊರಗಡೆ ಹೋಗಿ ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದ್ದಾರೆ. ಆತಂಕಗೊಂಡ ಆರೋಪಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಮತ್ತೊಂದೆಡೆ ಇಡೀ ಘಟನೆಯನ್ನು ಮಹಿಳೆ ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಈ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧಿಸಲಾಗಿದೆ.

ಲೈಂಗಿಕ ಕಿರುಕುಳ ನೀಡಿಲ್ಲ: ಆರೋಪಿ

ಆರೋಪಿಯ ವಿಚಾರಣೆಯಲ್ಲಿ ಲೈಂಗಿಕ ಕಿರುಕುಳ ನೀಡಲು ಮನೆಯೊಳಗೆ ಹೋಗಿಲ್ಲ. ಶೌಚಾಲಯಕ್ಕೆ ತುರ್ತಾಗಿ ಹೋಗಬೇಕಿತ್ತು. ಹೀಗಾಗಿ ಆಕೆಯ ಅನುಮತಿ ಇಲ್ಲದೆ ಹೋಗಿದ್ದೆ. ಹೊರತು ಆಕೆಗೆ ಯಾವುದೇ ರೀತಿಯ ಕಿರುಕುಳ ನೀಡಿಲ್ಲ. ಶೌಚಾಲಯದಲ್ಲಿದ್ದಾಗ ಆಕೆ ಜೋರಾಗಿ ಕೂಗಿಕೊಂಡರು. ಅದರಿಂದ ಗಾಬರಿಗೊಂಡು ಪ್ಯಾಂಟ್‌ ಜಿಪ್‌ ಹಾಕಿಕೊಳ್ಳದೆ, ಹೊರಬಂದು ನಂತರ ಜಿಪ್‌ ಹಾಕಿಕೊಳ್ಳುತ್ತಿದ್ದೆ. ಅದೇ ವೇಳೆ ಆಕೆ ವಿಡಿಯೋ ಮಾಡಿಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

2 ತೊಲೆ ಚಿನ್ನಕ್ಕಾಗಿ ಅತ್ತೆಯನ್ನೇ ಕೊಡಲಿಯಿಂದ ಕೊಚ್ಚಿ ಕೊಂದ ಅಳಿಯ
ಬೆಂಗಳೂರು ತ್ರಿಬಲ್‌ ಮರ್ಡರ್‌ ಕೇಸ್‌ : ಆತ್ಮ*ತ್ಯೆ ಮಾಡಿಕೊಳ್ಳುವೆ ಎಂದಿದ್ದ ಮಗನನ್ನು ತಡೆದಿದ್ದ ಕುಟುಂಬಸ್ಥರು!