ಮಲಯಾಳಿ ಚಿತ್ರ ‘2018’ ಆಸ್ಕರ್‌ ರೇಸ್‌ನಿಂದ ಔಟ್‌: ಅಂತಿಮ 15ರಲ್ಲಿ ಸ್ಥಾನವಿಲ್ಲ

KannadaprabhaNewsNetwork |  
Published : Dec 23, 2023, 01:47 AM IST
ಕಳೆದ ಬಾರಿ ಎಲಿಫೆಂಟ್‌ ವಿಸ್ಪರರ್ಸ್ ಚಿತ್ರಕ್ಕೆ ಅಸ್ಕರ್‌ ಪ್ರಶಸ್ತಿ ಲಭಿಸಿತ್ತು. | Kannada Prabha

ಸಾರಾಂಶ

ಪ್ರವಾಹ ಕುರಿತ ಮಲಯಾಳಿ ಚಲನಚಿತ್ರ 2018 ಆಸ್ಕರ್‌ ನಾಮನಿರ್ದೇಶನ ಪಟ್ಟಿಯಿಂದ ತಿರಸ್ಕೃತಗೊಂಡಿದೆ

ನವದೆಹಲಿ: ಟೊವಿನೋ ಥಾಮಸ್‌ ಅವರ ಮುಖ್ಯಭೂಮಿಕೆಯಲ್ಲಿ ಮೂಡಿಬಂದಿದ್ದ ಮಲಯಾಳಿ ಚಲನಚಿತ್ರ ‘2018’ ಅಧಿಕೃತವಾಗಿ ಆಸ್ಕರ್‌ ರೇಸ್‌ನಿಂದ ಹೊರಬಿದ್ದಿದೆ. ಆಸ್ಕರ್‌ ನಾಮನಿರ್ದೇಶನ ಮಂಡಳಿಯು ಶುಕ್ರವಾರದಂದು 9 ವಿಭಾಗಗಳಲ್ಲಿ 15 ಅತ್ಯುತ್ತಮ ಚಿತ್ರಗಳ ಪಟ್ಟಿ ಪ್ರಕಟಿಸಿದ್ದು, ಅದರಲ್ಲಿ ಭಾರತದಿಂದ ಅಧಿಕೃತವಾಗಿ ನಾಮನಿರ್ದೇಶನ ಮಾಡಲಾಗಿದ್ದ ಜೂಡ್‌ ಆ್ಯಂಟನಿ ಜೊಸೆಫ್ ನಿರ್ದೇಶಿತ ಚಿತ್ರ ಸ್ಥಾನ ಗಿಟ್ಟಿಸಿಲ್ಲ. ಈ ಕುರಿತು ನಿರ್ದೇಶಕ ಜೊಸೆಫ್‌ ನಿರಾಶೆ ವ್ಯಕ್ತಪಡಿಸಿದ್ದು, ತಮ್ಮ ಅಭಿಮಾನಿಗಳಿಗೆ ನಿರಾಶೆ ಉಂಟುಮಾಡಿದ್ದಕ್ಕೆ ಕ್ಷಮೆಯಾಚಿಸಿದ್ದಾರೆ. 96ನೇ ಆಸ್ಕರ್‌ ಪ್ರಶಸ್ತಿ ಪ್ರದಾನವು ಮಾ.10, 2024ರಂದು ಲಾಸ್‌ ಏಂಜಲೀಸ್‌ನಲ್ಲಿ ನಡೆಯಲಿದೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಪ್ರೇಕ್ಷಕನಿಗೆ ಸಿನಿಮಾಗೆ ರೇಟಿಂಗ್ ಕೊಡುವ ಹಕ್ಕಿಲ್ಲವೇ!
ಟಾಕ್ಸಿಕ್ ಚಿತ್ರದ ಕಾರ್‌ ಸೀನ್‌ನಲ್ಲಿರೋ ನಟೇಲಿ ಬರ್ನ್‌ ಯಾರು?