3 ತಿಂಗಳು, 58 ಸಿನಿಮಾಗಳು, 1 ಹಿಟ್ ರೂ.200+ ಕೋಟಿ ಹೂಡಿಕೆ, ಕೇಳಬೇಡಿ ಗಳಿಕೆ

Published : Mar 27, 2026, 01:23 PM IST
Theater

ಸಾರಾಂಶ

2026ನೇ ವರ್ಷದ ಮೊದಲ ತ್ರೈಮಾಸಿಕ ಕೊನೆಗೊಳ್ಳುತ್ತಿದೆ. ಈ ಮೂರು ತಿಂಗಳಲ್ಲಿ 58 ಕನ್ನಡ ಸಿನಿಮಾಗಳು ಬಿಡುಗಡೆಯಾಗಿವೆ. ಅದರಲ್ಲಿ ಹಿಟ್ ಅಂತ ಹೇಳಬಹುದಾದದ್ದು 1 ಸಿನಿಮಾ. ಈ ವರ್ಷದ ಮೊದಲ ತ್ರೈಮಾಸಿಕದ ಕರುಣಾರ್ದ್ರ ವರದಿ ಇಲ್ಲಿದೆ.

ವರ್ಷದ ಮೊದಲ ತ್ರೈಮಾಸಿಕ ವರದಿ  

ಮೊದಲ ಮೂರು ತಿಂಗಳಲ್ಲಿ 58 ಕನ್ನಡ, 3 ತುಳು ಚಿತ್ರಗಳು ಸೇರಿ ಒಟ್ಟು 61 ಸಿನಿಮಾಗಳು ತೆರೆಗೆ ಬಂದಿವೆ. ಅದರಲ್ಲಿ ಕನ್ನಡದಲ್ಲಿ ಹಿಟ್‌ ಎಂದು ಹೇಳಬಹುದಾದ ಒಂದು ಸಿನಿಮಾ ಎಂದರೆ ಅದು, ‘ಲವ್‌ ಮಾಕ್‌ಟೇಲ್‌ 3’. ಅದೂ ಯಾಕೆ ಎಂದು ಹೇಳಿದರೆ, ಕಡಿಮೆ ಬಜೆಟ್‌. ದೊಡ್ಡ ಲಾಭ. ಈ ನಿಟ್ಟಿನಲ್ಲಿ ನೋಡಿದರೆ ಕನ್ನಡ ಚಿತ್ರರಂದ ಮೊದಲ ತ್ರೈಮಾಸಿಕದ ಸಕ್ಸೆಸ್‌ ರೇಟ್‌ 1.72%.

ಈ ಮೂರು ತಿಂಗಳಲ್ಲಿ ಸ್ಟಾರ್‌ ಸಿನಿಮಾಗಳು ಬಂದಿವೆ. ಹೊಸಬರ ಭರವಸೆಯ ಸಿನಿಮಾಗಳು ಬಂದಿವೆ. ಆದರೆ ಯಶಸ್ಸು ನೋಡಿದರೆ ಬಹಳ ಕಡಿಮೆ ಇದೆ. ಇನ್ನೂ ಹಳೆಯ ತಂತ್ರಗಳು, ಶಕ್ತವಲ್ಲದ ಕತೆಗಳು, ಅನಗತ್ಯ ಖರ್ಚುವೆಚ್ಚಗಳು, ಮಿತಿಮೀರಿದ ಶೂಟಿಂಗ್‌ ದಿನಗಳು ಎಲ್ಲವೂ ಸೇರಿ ಚಿತ್ರರಂಗವನ್ನು ಆಂತರಿಕವಾಗಿ ಕೊಲ್ಲುತ್ತಿವೆ. ಅದರ ಪರಿಣಾಮ ಚಿತ್ರರಂಗದ ಯಶಸ್ಸಿನ ಮೇಲೆಯೂ ಬೀಳುತ್ತಿದೆ. ಸ್ಯಾಟಲೈಟ್, ಓಟಿಟಿ ಮಾರಾಟ ಬಹುತೇಕ ನಿಂತುಹೋಗಿದೆ. ನಿರ್ಮಾಪಕರು ಸೋತು ಸುಣ್ಣವಾಗುತ್ತಿದ್ದಾರೆ. ಗೆಲುವಿಗೆ ತತ್ವಾರ ಉಂಟಾಗಿದೆ. ಈ ಎಲ್ಲಾ ಸಮಸ್ಯೆಗಲಿಗೂ ತಾತ್ವಿಕ ಪರಿಹಾರ ಕಂಡುಕೊಳ್ಳಲು ಸಂಬಂಧ ಪಟ್ಟವರು ಯಾರೂ ಮುಂದಾಗದೇ ಇರುವುದಕ್ಕೆ ಸುದೀರ್ಘ ನಿಟ್ಟುಸಿರು.

200 ರಿಂದ 250 ಕೋಟಿ

ಬಿಡುಗಡೆ ಆಗಿರುವ ಚಿತ್ರಗಳಲ್ಲಿ 1 ಕೋಟಿ ಬಜೆಟ್‌ ಸಿನಿಮಾ ಇಲ್ಲವೇ ಇಲ್ಲ. ಹೀಗಾಗಿ ಚಿಕ್ಕ ಸಿನಿಮಾ, ದೊಡ್ಡ ಸಿನಿಮಾಗಳು ಸೇರಿ ಸರಾಸರಿ 3 ರಿಂದ 15 ಕೋಟಿ ಪ್ರತೀ ಚಿತ್ರದ ಮೂಲಕ ಹೂಡಿಕೆ ಆಗಿದೆ. ಈ ಲೆಕ್ಕದಲ್ಲಿ 61 ಚಿತ್ರಗಳಿಂದ 250ರಿಂದ 300 ಕೋಟಿಯಷ್ಟು ಹೂಡಿಕೆ ಆಗಿದೆ. ಆದರೆ ಗಳಿಕೆ ಕೇಳಿದರೆ ನಿರಾಶದಾಯಕ ಪ್ರದರ್ಶನ.

ಒಂದು ಉತ್ತಮ ಗಳಿಕೆ, ನಾಲ್ಕೈದು ಚಿತ್ರಗಳು ‘ಅಲ್ಲಿಗಲ್ಲಿಗೆ’ ಗಳಿಕೆ ಎಂಬುದನ್ನು ಹೊರತುಪಡಿಸಿದರೆ ಹೂಡಿಕೆಯ ಬಹುಪಾಲು ಶೂನ್ಯ ಸೇರಿಕೊಂಡಿದೆ.

ಈ ಮಧ್ಯೆ ಕೆಲವು ಸಣ್ಣ ಸಿನಿಮಾಗಳು ತಮ್ಮ ಗಟ್ಟಿ ಕತೆಯಿಂದ ಆಹ್ಲಾದ ಉಂಟುಮಾಡಿವೆ. ಭರವಸೆಯನ್ನು ಚಿಗುರಿಸಿವೆ. ವರ್ಷದ ಮುಂದಿನ ತಿಂಗಳು ಆ ಆಹ್ಲಾದ ಮತ್ತಷ್ಟು ಹೆಚ್ಚಾಗಲಿ ಅನ್ನುವುದು ಆಶಯ.

ಒಟ್ಟು ತೆರೆ ಕಂಡ ಚಿತ್ರಗಳು: 61

ಕನ್ನಡ: 58

ತುಳು: 3

ಏಕೈಕ ಗೆಲುವು

ಲವ್‌ ಮಾಕ್‌ಟೇಲ್‌ 3

ಆಹ್ಲಾದಕರ ಸಿನಿಮಾ

1. ವಲವಾರ

2. ತೀರ್ಥರೂಪ ತಂದೆಯವರಿಗೆ

ಗಮನ ಸೆಳೆದ ಥ್ರಿಲ್ಲರ್‌

1. ಸೆಕೆಂಡ್‌ ಕೇಸ್‌ ಆಫ್‌ ಸೀತಾರಾಮ್‌

2. ರಕ್ಕಸಪುರದೋಳ್‌

ಸ್ಟಾರ್‌ ಸಿನಿಮಾಗಳು

1. ಲ್ಯಾಂಡ್‌ ಲಾರ್ಡ್‌ (ದುನಿಯಾ ವಿಜಯ್‌)

2. ದಿ ರೈಸ್‌ ಆಫ್‌ ಅಶೋಕ (ಸತೀಶ್‌ ನೀನಾಸಂ)

ಗಮನ ಸೆಳೆದ ನಟ- ಅನಿರುದ್ಧ ಭಟ್‌ (ರಕ್ಕಸಪುರದೋಳ್‌)

ಭರವಸೆಯ ನಟಿಯರು

ಸ್ವಾತಿಷ್ಟಾ ಕೃಷ್ಣನ್ (ರಕ್ಕಸಪುರದೋಳ್‌)

ರಿತನ್ಯಾ (ಲ್ಯಾಂಡ್‌ಲಾರ್ಡ್‌)

ಮಿಶಾ ನಾರಂಗ್ (ಸರಳ ಸುಬ್ಬಾರಾವ್)

ಭವಿಷದ್ಯ ನಿರ್ದೇಶಕ- ಸುತನ್‌ ಗೌಡ (ವಲವಾರ)

ಆಕರ್ಷಕ ಬರಹಗಾರ- ಜಗನ್ನಾಥ್‌ ರಾಮೇನಹಳ್ಳಿ (ತೀರ್ಥರೂಪ ತಂದೆಯವರಿಗೆ) 

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಕತೆ ಕಳ್ಳತನ - ಕೃತಿಚೌರ್ಯದಿಂದ ಪಾರಾಗುವುದು ಹೇಗೆ!
ರಶ್ಮಿಕಾ ವಿಜಯದೇವರಕೊಂಡ ಹನಿಮೂನ್‌ ಅಲ್ಲ, ಬಡ್ಡೀಮೂನ್‌!