ಇಂದು ಧ್ರುವ ಸರ್ಜಾ ಅವರ 35ನೇ ಹುಟ್ಟುಹಬ್ಬ

KannadaprabhaNewsNetwork |  
Published : Oct 08, 2023, 12:01 AM IST
ಧ್ರುವ ಸರ್ಜಾ ಬರ್ತ್ ಡೇ ಡೀಪಿ | Kannada Prabha

ಸಾರಾಂಶ

ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅವರು ಇಂದು (ಅಕ್ಟೋಬರ್‌ 6) ಅಭಿಮಾನಿಗಳ ಜತೆಗೆ ತಮ್ಮ 35ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ.ಚಿರಂಜೀವಿ ಸರ್ಜಾ ನಿಧನ ಸೇರಿದಂತೆ ಬೇರೆ ಬೇರೆ ಕಾರಣಗಳಿಗಾಗಿ ಕಳೆದ ಮೂರು ವರ್ಷಗಳಿಂದ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿಲ್ಲ. ಹೀಗಾಗಿ ಮೂರು ವರ್ಷಗಳ ನಂತರ ತಮ್ಮ ನೆಚ್ಚಿನ ನಟ ತಮ್ಮೊಂದಿಗೆ ಜನ್ಮದಿನ ಆಚರಿಸಿಕೊಳ್ಳುತ್ತಿರುವುದು ಅಭಿಮಾನಿಗಳ ದೊಡ್ಡ ಸಂಭ್ರಮಕ್ಕೆ ಕಾರಣವಾಗಿದೆ.

ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅವರು ಇಂದು (ಅಕ್ಟೋಬರ್‌ 6) ಅಭಿಮಾನಿಗಳ ಜತೆಗೆ ತಮ್ಮ 35ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ.

ಚಿರಂಜೀವಿ ಸರ್ಜಾ ನಿಧನ ಸೇರಿದಂತೆ ಬೇರೆ ಬೇರೆ ಕಾರಣಗಳಿಗಾಗಿ ಕಳೆದ ಮೂರು ವರ್ಷಗಳಿಂದ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿಲ್ಲ. ಹೀಗಾಗಿ ಮೂರು ವರ್ಷಗಳ ನಂತರ ತಮ್ಮ ನೆಚ್ಚಿನ ನಟ ತಮ್ಮೊಂದಿಗೆ ಜನ್ಮದಿನ ಆಚರಿಸಿಕೊಳ್ಳುತ್ತಿರುವುದು ಅಭಿಮಾನಿಗಳ ದೊಡ್ಡ ಸಂಭ್ರಮಕ್ಕೆ ಕಾರಣವಾಗಿದೆ.

ಧ್ರುವ ಸರ್ಜಾ ಮನೆ ಬಳಿ ಅ.5ರ ಮಧ್ಯರಾತ್ರಿಯಿಂದಲೇ ಅಭಿಮಾನಿಗಳು ಸೇರುವ ನಿರೀಕ್ಷೆ ಇದೆ. ತಮ್ಮ ನಿವಾಸಕ್ಕೆ ಬರುವ ಅಭಿಮಾನಿಗಳನ್ನು ಧ್ರುವ ಸರ್ಜಾ ಅವರು ಭೇಟಿ ಮಾಡಲಿದ್ದಾರೆ.ತಮ್ಮನ ಹುಟ್ಟುಹಬ್ಬಕ್ಕೆ ಅಣ್ಣನ ಸಿನಿಮಾ ತೆರೆಗೆಈ ಬಾರಿ ಧ್ರುವ ಸರ್ಜಾ ಹುಟ್ಟುಹಬ್ಬದ ವಿಶೇಷತೆ ಎಂದರೆ ಚಿರಂಜೀವಿ ಸರ್ಜಾ ನಟನೆಯ ಸಿನಿಮಾ ‘ರಾಜ ಮಾರ್ತಾಂಡ’ ಚಿತ್ರ ತೆರೆ ಕಾಣುತ್ತಿರುವುದು. ರಾಮ್‌ನಾರಾಯಣ್‌ ನಿರ್ದೇಶನ, ಶಿವಕುಮಾರ್ ನಿರ್ಮಾಣದ ‘ರಾಜಮಾರ್ತಾಂಡ’ ಸಿನಿಮಾ ಇಂದು (ಅ.6) ತೆರೆ ಮೇಲೆ ಮೂಡುತ್ತಿದೆ. ಈ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಪಾತ್ರಕ್ಕೆ ಧ್ರುವ ಸರ್ಜಾ ಡಬ್ಬಿಂಗ್‌ ಮಾಡಿರುವುದು ವಿಶೇಷ.

PREV

Recommended Stories

ವೈರಲ್ ಆಗುತ್ತಿರುವ ಸುದೀಪ್‌ ಹೊಸ ಲುಕ್ಕು : ಗಮನ ಸೆಳೆಯುತ್ತಿರುವ ಹೊಸ ಹೇರ್ ಸ್ಟೈಲ್‌
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಮಿಳು ನಟ ಮದನ್ ಬಾಬ್ ನಿಧನ