ರಾಜಯೋಗ ಚಿತ್ರದ ಟ್ರೇಲರ್ ಬಂತು

KannadaprabhaNewsNetwork | Published : Oct 8, 2023 12:00 AM

ಸಾರಾಂಶ

ಹಾಸ್ಯ ನಟ ಧರ್ಮಣ್ಣ ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ ರಾಜಯೋಗ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆ ಆಗಿದೆ. ಇದು ಹಳ್ಳಿಗಾಡಿನ ಹಾಸ್ಯಭರಿತ ಕತೆಯನ್ನು ಒಳಗೊಂಡಿದೆ.
ಹಾಸ್ಯ ಕಲಾವಿದ ಧರ್ಮಣ್ಣ ನಾಯಕನಾಗಿ ನಟಿಸಿರುವ ‘ರಾಜಯೋಗ’ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದೆ. ಈ ಚಿತ್ರಕ್ಕೆ ಲಿಂಗರಾಜ ಉಚ್ಚಂಗಿದುರ್ಗ ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಕುಮಾರ ಕಂಠೀರವ, ದೀಕ್ಷಿತ್ ಕೃಷ್ಣ, ಪ್ರಭು ಚಿಕ್ಕನಾಯ್ಕನಹಳ್ಳಿ, ಲಿಂಗರಾಜು ಕೆಎನ್, ಅರ್ಜುನ್ ಅಣತಿ, ಹೊನ್ನಪ್ಪ ಕಡೂರು ಈ ಚಿತ್ರದ ನಿರ್ಮಾಪಕರು. ಲಿಂಗರಾಜು ಮಾತನಾಡಿ, ‘ಗ್ರಾಮೀಣ ಭಾಗದಲ್ಲಿ ನಡೆಯುವ ಕತೆ. ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಒಂದಲ್ಲ ಒಂದು ದಿನ ರಾಜಯೋಗ ಬರುತ್ತದೆ ಎನ್ನುವುದೇ ಈ ಚಿತ್ರದ ಕತೆ’ ಎಂದರು. ‘ನನ್ನ ಈ ಬೆಳವಣಿಗೆಗೆ ಕಾರಣ ‘ರಾಮಾ ರಾಮಾ ರೇ’ ಸಿನಿಮಾ. ಈ ಚಿತ್ರಕ್ಕೆ ನಾನು ಹೀರೋ ಅಲ್ಲ. ಕತೆ ಮತ್ತು ನಿರ್ದೇಶಕರೇ ಇದರ ಹೀರೋ. ನನ್ನ ಪಾತ್ರದಲ್ಲಿ ಕಾಮಿಡಿ, ಎಮೋಷನ್ ಎಲ್ಲವೂ ಇದೆ. ಸಂಬಂಧಗಳ ಮೌಲ್ಯಗಳನ್ನು ಹಾಸ್ಯದ ಹಿನ್ನೆಲೆಯಲ್ಲಿ ಹೇಳಿದ್ದೇವೆ’ ಎಂದು ಧರ್ಮಣ್ಣ ಹೇಳಿಕೊಂಡರು. ನಿರೀಕ್ಷಾ ರಾವ್ ನಾಯಕಿಯಾಗಿ ನಟಿಸಿದ್ದಾರೆ. ಅಕ್ಷಯ್ ರಿಶಭ್ ಸಂಗೀತ, ವಿಷ್ಣುಪ್ರಸಾದ್ ಕ್ಯಾಮೆರಾ ಇದೆ. ನಾಗೇಂದ್ರ ಷಾ, ಶ್ರೀನಿವಾಸ ಗೌಡ್ರು, ಉಷಾ ರವಿಶಂಕರ್, ಮಹಾಂತೇಶ ಹಿರೇಮಠ್ ಮುಖ್ಯ ಪಾತ್ರಧಾರಿಗಳು.

Share this article