ಕನ್ನಡಪ್ರಭ ಸಿನಿವಾರ್ತೆ
‘ಸೌದಿ ಅರೇಬಿಯಾದ ತೈಲ ಬಾವಿಯಲ್ಲಿ ಆ್ಯಕ್ಸಿಡೆಂಟ್ ಸನ್ನಿವೇಶದ ಚಿತ್ರೀಕರಣ ನಡೆಸಿದ ಹೆಗ್ಗಳಿಕೆ ನಮ್ಮ ಚಿತ್ರದ್ದು. ಪ್ರಮುಖ ಪಾತ್ರಧಾರಿ ಈ ಜಾಗದಲ್ಲಿ ಬೀಳುವ ಸಂದರ್ಭದಲ್ಲಂತೂ ಜೀವ ಕೈಯಲ್ಲಿ ಹಿಡಿದು ಆ್ಯಕ್ಷನ್ ಕಟ್ ಹೇಳಿದ್ದೆ’ ಎಂದು ಕುದ್ರು ಸಿನಿಮಾ ನಿರ್ದೇಶಕ ಭಾಸ್ಕರ್ ನಾಯ್ಕ್ ಹೇಳಿದ್ದಾರೆ.
‘ಕುದ್ರು’ ಸಿನಿಮಾ ಅಕ್ಟೋಬರ್ 13ಕ್ಕೆ ಕನ್ನಡ ಹಾಗೂ ತುಳು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ‘ದಕ್ಷಿಣ ಕನ್ನಡ ಜಿಲ್ಲೆಯ ತೋನ್ಸೆ ಕುದ್ರುವಿನಲ್ಲಿ ನಡೆಯುವ ಕಥೆ ಚಿತ್ರದ್ದು. ವಾಟ್ಸಾಪ್ ಮೆಸೇಜ್ ಮಾಡುವ ಅವಾಂತರ, ಕಾಲೇಜ್ ಲೈಫ್, ಕೋಮು ಸೌಹಾರ್ದತೆ ಇತ್ಯಾದಿ ಅಂಶಗಳ ಮೇಲೆ ಸಿನಿಮಾ ಬೆಳಕು ಚೆಲ್ಲಲಿದೆ.
ಸಿನಿಮಾ ಕೊನೆಯಲ್ಲಿ ಪ್ರೇಕ್ಷಕ ಕಣ್ಣೀರಲ್ಲಿ ತೋಯ್ದು ಹೋಗುತ್ತಾನೆ’ ಎಂದೂ ಭಾಸ್ಕರ್ ವಿವರ ನೀಡಿದ್ದಾರೆ. ಪ್ರಮುಖ ಪಾತ್ರದಲ್ಲಿ ನಟಿಸಿರುವ ಡಯಾನಾ ಡಿಸೋಜಾ, ‘ಇದರಲ್ಲಿ ರೇಷ್ಮಾ ಎಂಬ ಬಿಂದಾಸ್ ಆಗಿರುವ ಮುಸ್ಲಿಂ ಹುಡುಗಿಯ ಪಾತ್ರದಲ್ಲಿ ನಟಿಸಿದ್ದೇನೆ’ ಎಂದರು. ನಟ ಫರ್ಹಾನ್, ಛಾಯಾಗ್ರಾಹಕ ಶ್ರೀಪುರಾಣಿಕ್ ಸುದ್ದಿಗೋಷ್ಠಿಯಲ್ಲಿದ್ದರು.