ಕೌಮುದಿ ಚಿತ್ರದಲ್ಲಿ ಚಿತ್ತವ್ವನಾದ ಅಕ್ಷತಾ ಪಾಂಡವಪುರ

KannadaprabhaNewsNetwork |  
Published : Jun 21, 2024, 01:00 AM ISTUpdated : Jun 21, 2024, 05:20 AM IST
ಕೌಮುದಿ1 | Kannada Prabha

ಸಾರಾಂಶ

ಕೌಮುದಿ ಸಿನಿಮಾದಲ್ಲಿ ಅಕ್ಷತಾ ಪಾಂಡವಪುರ ಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

‘ಕಂದೀಲು’ ನಿರ್ದೇಶಕಿ ಯಶೋದಾ ಪ್ರಕಾಶ್‌ ನಿರ್ದೇಶನ, ನಿರ್ಮಾಣದ ಹೊಸ ಸಿನಿಮಾ ‘ಕೌಮುದಿ’. ಇದರಲ್ಲಿ ನಟಿ ಅಕ್ಷತಾ ಪಾಂಡವಪುರ ಗರ್ಭಿಣಿ ಹಾಗೂ ಬಾಣಂತಿ ಚಿತ್ತವ್ವನ ಪಾತ್ರದಲ್ಲಿ ನಟಿಸಿದ್ದಾರೆ. 

ಈ ಪಾತ್ರದ ಲುಕ್‌ ಬಿಡುಗಡೆಯಾಗಿದೆ.ಇಂದಿಗೂ ಗ್ರಾಮೀಣ ಭಾಗದಲ್ಲಿ ಜೀವಂತವಿರುವ ಬಾಣಂತಿಯನ್ನು ಊರಾಚಿನ ಗುಡಿಸಲಲ್ಲಿ ಬಿಡುವ ಅಮಾನವೀಯ ಸಂಪ್ರದಾಯದ ಬಗ್ಗೆ ಈ ಸಿನಿಮಾವಿದೆ.

ಸಿನಿಮಾ ಬಗ್ಗೆ ಮಾತನಾಡಿದ ಅಕ್ಷತಾ ಪಾಂಡವಪುರ, ‘ಇನ್ನೂ ಈ ಆಚರಣೆ ಜೀವಂತವಿರುವ ಕೆಲವು ಹಳ್ಳಿಗಳಿಗೆ ಭೇಟಿ ನೀಡಿ ಅವರ ಕಥೆ ಕೇಳಿದ್ದೆ. ಯಾವ ಪೂರ್ವಾಗ್ರಹಗಳೂ ಇಲ್ಲದೇ ನೈಜವಾಗಿ ಈ ಪಾತ್ರ ರೂಪಿಸಲಾಗಿದೆ. 

ಈ ಪಾತ್ರಕ್ಕಾಗಿ 24 ಗಂಟೆ ನಿದ್ದೆ ಬಿಟ್ಟು ನಟಿಸಿದ್ದೂ ಇತ್ತು. ಚೆನ್ನಾಗಿಲ್ಲದಿರುವ ಪಾತ್ರಗಳಲ್ಲಿ ನಾನು ನಟಿಸೋದೇ ಇಲ್ಲ. ಈ ಪಾತ್ರದಲ್ಲಿ ಚಿತ್ತವ್ವನ ಮನಸ್ಥಿತಿಯನ್ನು ಹಿಡಿದಿಡುವುದು ಸವಾಲಾಗಿತ್ತು’ ಎಂದಿದ್ದಾರೆ.ಸದ್ಯ ಈ ಸಿನಿಮಾದ ಶೂಟಿಂಗ್‌ ಮುಗಿದಿದ್ದು ಪೋಸ್ಟ್ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿವೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಹಲವು ವರ್ಷಗಳ ಬಳಿಕ ಮನಬಿಚ್ಚಿ ಮಾತಾಡಿದ ರಕ್ಷಿತ್ : ನಾನಿರುವುದೇ ಹೀಗೆ!
ಸಹನಟಿ, ಬದುಕಿಗೆ ಪ್ರೇಮ ರಶ್ಮಿಯಾದಳು! 14 ವರ್ಷದ ಪ್ರೀತಿಗೆ ಸದ್ಯದಲ್ಲೆ ಮದುವೆ ಬಂಧ - ಜೆ.ಪಿ. ತುಮಿನಾಡು