ದಿ.ಎಂಜಿಆರ್‌ ಅವರ ಜೀವನ ಚರಿತ್ರೆಯನ್ನು ಆಧರಿಸಿ ಚಿತ್ರ ಸೆಟ್ಟೇರುತ್ತಿದ್ದು, ಈ ಚಿತ್ರದಲ್ಲಿ ನಟಿ ತ್ರಿಶಾ ಅವರು ಜಯಲಲಿತಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಪುರಚಿ ತಲೈವರ್‌ ಎಂಜಿಆರ್‌’ ಹೆಸರಿನಲ್ಲಿ ಸಿನಿಮಾ ಸೆಟ್ಟೇರಲಿದ್ದು, ಇನ್ನಷ್ಟೇ ಅಧಿಕೃತವಾಗಿ ಘೋಷಣೆ ಆಗಬೇಕಿದೆ.

ಸಿನಿವಾರ್ತೆ 

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ.ಎಂಜಿಆರ್‌ ಅವರ ಜೀವನ ಚರಿತ್ರೆಯನ್ನು ಆಧರಿಸಿ ಚಿತ್ರ ಸೆಟ್ಟೇರುತ್ತಿದ್ದು, ಈ ಚಿತ್ರದಲ್ಲಿ ನಟಿ ತ್ರಿಶಾ ಅವರು ಜಯಲಲಿತಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಪುರಚಿ ತಲೈವರ್‌ ಎಂಜಿಆರ್‌’ ಹೆಸರಿನಲ್ಲಿ ಸಿನಿಮಾ ಸೆಟ್ಟೇರಲಿದ್ದು, ಇನ್ನಷ್ಟೇ ಅಧಿಕೃತವಾಗಿ ಘೋಷಣೆ ಆಗಬೇಕಿದೆ.

ಎಂಜಿಆರ್‌ ಅವರ ಸಿನಿಮಾ ಪಯಣ, ರಾಜಕೀಯ ಜೀವನದ ಏಳುಬೀಳುಗಳನ್ನು ಈ ಚಿತ್ರದಲ್ಲಿ

ಎಂಜಿಆರ್‌ ಅವರ ಸಿನಿಮಾ ಪಯಣ, ರಾಜಕೀಯ ಜೀವನದ ಏಳುಬೀಳುಗಳನ್ನು ಈ ಚಿತ್ರದಲ್ಲಿ ಕಟ್ಟಿಕೊಡಲಾಗುತ್ತಿದೆ. ಈ ಚಿತ್ರದಲ್ಲಿ ತಮಿಳುನಾಡಿನ ರಾಜಕೀಯ ದಿಗ್ಗಜರಾದ ಸಿ.ಎನ್‌. ಅಣ್ಣಾದೊರೈ, ಎಂ. ಕರುಣಾನಿಧಿ ಸೇರಿದಂತೆ ಪ್ರಮುಖ ನಾಯಕರ ಪಾತ್ರಗಳೂ ಬರಲಿವೆ. ಜೆ.ಎಂ. ಬಷೀರ್‌ ಈ ಚಿತ್ರದಲ್ಲಿ ಎಂ.ಜಿ.ರಾಮಚಂದ್ರನ್‌ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ಚಿತ್ರದ ನಿರ್ದೇಶನ, ನಿರ್ಮಾಣ ಯಾರೆಂಬುದು ಇನ್ನಷ್ಟೇ ಘೋಷಣೆ ಆಗಬೇಕಿದೆ.