ರಮೇಶ್‌ ಅರವಿಂದ್‌ ಅಭಿನಯದ ಬಹುನಿರೀಕ್ಷಿತ 106ನೇ ಚಿತ್ರ ‘ದೈಜಿ’ ಮೂಲಕ ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ, ಖ್ಯಾತ ಗಾಯಕಿ ಶಿವಶ್ರೀ ಸ್ಕಂದ ಅವರು ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದಾರೆ. ಈ ಚಿತ್ರಕ್ಕಾಗಿ ಅವರು ಅಪರೂಪದ ಶಾಸ್ತ್ರೀಯ ಶೈಲಿಯ ಗೀತೆಯೊಂದನ್ನು ಹಾಡಿದ್ದಾರೆ ಎಂದು ಚಿತ್ರದ ನಿರ್ದೇಶಕ ಆಕಾಶ್ ಶ್ರೀವತ್ಸ ತಿಳಿಸಿದ್ದಾರೆ.

ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಶಿವಶ್ರೀ

ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಶಿವಶ್ರೀ ಸ್ಕಂದ ಅವರ ಕಂಠಸಿರಿಯಲ್ಲಿ ಮೂಡಿಬಂದಿರುವ ಈ ಹಾಡಿನ ಸಂಗೀತ ಸಂಯೋಜನೆಯನ್ನು ಜೂಡಾ ಸ್ಯಾಂಡಿ ಮಾಡಿದ್ದಾರೆ. ಹಾರರ್ ಶೈಲಿಯಲ್ಲಿ ಮೂಡಿಬಂದಿರುವ ಈ ಚಿತ್ರದ ಪ್ರಮುಖ ಘಟ್ಟದಲ್ಲಿ ಈ ಹಾಡು ಬರಲಿದೆ ಎಂದು ಆಕಾಶ್ ತಿಳಿಸಿದ್ದು, ಈ ಹಾಡಿನ ಇನ್ನೊಂದು ಆವೃತ್ತಿಯನ್ನು ‘ಕಾಂತಾರ 1’ ಖ್ಯಾತಿ ಅಬ್ಬಿ ವಿ ಹಾಡಿದ್ದಾರೆ.

ಈ ಹಾಡಿಗೆ ಇನ್ನೂ ಇಬ್ಬರು ಸಂಗೀತ

ಈ ಹಾಡಿಗೆ ಇನ್ನೂ ಇಬ್ಬರು ಸಂಗೀತ ಸಂಯೋಜಿಸಿದ್ದು, ನಕುಲ್‌ ಅಭಯಂಕರ್‌ ಸಂಗೀತ ನಿರ್ದೇಶನದ ಎರಡು ಹಾಡುಗಳನ್ನು ಡಾಲಿ ಧನಂಜಯ್ ಬರೆದಿರುವುದು ವಿಶೇಷ. ಅದರಲ್ಲಿ ಒಂದು ಹಾಡನ್ನು ಸೋನು ನಿಗಮ್ ಹಾಡಿದ್ದಾರೆ. ಇನ್ನೊಂದು ಹಾಡನ್ನು ಸಚಿನ್‌ ಬಸ್ರೂರ್‌ ಸಂಗೀತ ಸಂಯೋಜಿಸಿ ಹಾಡಿದ್ದಾರೆ.

ಈ ಚಿತ್ರವನ್ನು ರವಿ ಕಶ್ಯಪ್‌ ಹಾಗೂ ಸುಧಾ ಕಶ್ಯಪ್‌ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ರಾಧಿಕಾ ನಾರಾಯಣ್‌, ದಿಗಂತ್‌, ಅವಿನಾಶ್‌, ಬಿ.ಎಂ. ಗಿರಿರಾಜ್‌ ನಟಿಸಿದ್ದಾರೆ.